ಕೊರೊನಾ 3ನೇ ಅಲೆ ಎದುರಿಸಲು ರಾಜ್ಯದಲ್ಲಿ ಕೋವಿಡ್​ ಉನ್ನತ ವೈದ್ಯ ಸಮಿತಿ ರಚನೆ, ಸಮಿತಿಯಲ್ಲಿ ಯಾರೆಲ್ಲ ಇದ್ದಾರೆ?

|

Updated on: May 26, 2021 | 4:39 PM

Dr Ashwath Narayan CN: ಕೊರೊನಾ ಸೋಂಕು ಎರಡನೆಯ ಅಲೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎಡವಿದ್ದು ಸ್ಪಷ್ಟವಾಗಿತ್ತು. ಅದರ ಸರಿಪಡಿಸಿಕೊಂಡು ಮುಂದೆ ಎದುರಾಗಬಹುದಾದ ಮೂರನೆಯ ಕೊವಿಡ್​ ಅಲೆಯನ್ನು ಎದುರಿಸಲು ರಾಜ್ಯ ಸರ್ಕಾರ ಈ ಬಾರಿ ಮುಂಚಿತವಾಗಿಯೇ ಸಿದ್ಧತೆ ನಡೆಸಿದೆ. ಮುಖ್ಯವಾಗಿ ಪರಿಣತ ವೈದ್ಯರಿಂದ ಸಲಹೆ, ಸೂಚನೆ ಪಡೆಯಲು ತಯಾರಿ ನಡೆಸಿದೆ. ಅಕ್ಟೋಬರ್​- ನವೆಂಬರ್​ ತಿಂಗಳಲ್ಲಿ ಮೂರನೆಯ ಕೊವಿಡ್​ ಅಲೆ ಎದುರಾಗುವ ಸಾಧ್ಯತೆಯಿದೆ.

ಕೊರೊನಾ 3ನೇ ಅಲೆ ಎದುರಿಸಲು ರಾಜ್ಯದಲ್ಲಿ ಕೋವಿಡ್​ ಉನ್ನತ ವೈದ್ಯ ಸಮಿತಿ ರಚನೆ, ಸಮಿತಿಯಲ್ಲಿ ಯಾರೆಲ್ಲ ಇದ್ದಾರೆ?
ಮೋದಿ ಸಂಪುಟದಿಂದ ಹೊರಗಾದ ಸದಾನಂದ ಗೌಡ ರಾಜ್ಯ ರಾಜಕಾರಣಕ್ಕೆ ಬರುತ್ತಾರಾ? ಡಿಸಿಎಂ ಡಾ. ಅಶ್ವತ್ಥ್ ನಾರಾಯಣ ಏನಂತಾರೆ?
Follow us on

ಬೆಂಗಳೂರು: ಕರ್ನಾಟಕ ಕೋವಿಡ್​ ನಿಯಂತ್ರಣ ಕಾರ್ಯಪಡೆ ಮುಖ್ಯಸ್ಥ, ಉಪ ಮುಖ್ಯಮಂತ್ರಿ ಡಾ. ಸಿ ಎನ್​ ಅಶ್ವತ್ಥ ನಾರಾಯಣ್​ ಅವರು ಕೊರೊನಾ 3ನೇ ಅಲೆ ಎದುರಿಸಲು ಸಜ್ಜಾಗಿದ್ದಾರೆ. ಈ ಸಂಬಂಧ ಖ್ಯಾತ ವೈದ್ಯ ಡಾ. ದೇವಿ ಶೆಟ್ಟಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಕೋವಿಡ್​ ಉನ್ನತ ವೈದ್ಯ ಸಮಿತಿ ರಚನೆ ಮಾಡಿದ್ದಾರೆ. ಸಮಿತಿಯಲ್ಲಿ ಒಟ್ಟು 13 ಮಂದಿ ವೈದ್ಯರು ಇದ್ದಾರೆ. ತಜ್ಞ ವೈದ್ಯರ ಉನ್ನತ ಮಟ್ಟದ ಸಮಿತಿ ರಚಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಈ ಬಗ್ಗೆ ಕರ್ನಾಟಕ ಕೋವಿಡ್​ ನಿಯಂತ್ರಣ ಕಾರ್ಯಪಡೆ ಮುಖ್ಯಸ್ಥ ಡಾ. ಸಿ ಎನ್​ ಅಶ್ವತ್ಥ ನಾರಾಯಣ್​ ಟ್ವೀಟ್​ ಮಾಡಿದ್ದಾರೆ. ಟ್ವೀಟ್​ ಸಾರಾಂಶ ಹೀಗಿದೆ: To be better prepared for third wave of #COVID19, if there is one, we have formed a high level committee of medical experts. Our government will proactively work with this committee to control, contain & manage the 3rd wave, while we continue to actively mitigate the 2nd wave.

ಕೊರೊನಾ ಸೋಂಕು ಎರಡನೆಯ ಅಲೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎಡವಿದ್ದು ಸ್ಪಷ್ಟವಾಗಿತ್ತು. ಅದರ ಸರಿಪಡಿಸಿಕೊಂಡು ಮುಂದೆ ಎದುರಾಗಬಹುದಾದ ಮೂರನೆಯ ಕೊವಿಡ್​ ಅಲೆಯನ್ನು ಎದುರಿಸಲು ರಾಜ್ಯ ಸರ್ಕಾರ ಈ ಬಾರಿ ಮುಂಚಿತವಾಗಿಯೇ ಸಿದ್ಧತೆ ನಡೆಸಿದೆ. ಮುಖ್ಯವಾಗಿ ಪರಿಣತ ವೈದ್ಯರಿಂದ ಸಲಹೆ, ಸೂಚನೆ ಪಡೆಯಲು ತಯಾರಿ ನಡೆಸಿದೆ. ಅಕ್ಟೋಬರ್​- ನವೆಂಬರ್​ ತಿಂಗಳಲ್ಲಿ ಮೂರನೆಯ ಕೊವಿಡ್​ ಅಲೆ ಎದುರಾಗುವ ಸಾಧ್ಯತೆಯಿದೆ. ಖ್ಯಾತ ಹೃದಯತಜ್ಞ ಡಾ. ದೇವಿ ಪ್ರಸಾದ್​ ಶೆಟ್ಟಿ ಕೋವಿಡ್​ ವೈದ್ಯಕೀಯ ಉನ್ನತ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಗಮನಾರ್ಹವೆಂದರೆ ಕೇಂದ್ರ ಸರ್ಕಾರವೂ ಸಹ ಕೊರೊನಾ ನಿಯಂತ್ರಣದಲ್ಲಿ ಡಾ. ದೇವಿ ಪ್ರಸಾದ್​ ಶೆಟ್ಟಿ ಅವರ ವೈದ್ಯ ನೆರವು ಪಡೆದಿದೆ.

ಡಾ. ದೇವಿಶೆಟ್ಟಿ ನೇತೃತ್ವದಲ್ಲಿ ರಾಜ್ಯದಲ್ಲಿ ಕೋವಿಡ್​ ಉನ್ನತ ವೈದ್ಯ ಸಮಿತಿ ರಚನೆ

(preparedness of karnataka for third wave of covid 19 high level committee of medical experts formed says dr ashwath narayan cn)

Published On - 4:27 pm, Wed, 26 May 21