ಬೆಂಗಳೂರು: ಇಡೀ ರಾಜ್ಯವೇ ಕೊರೊನಾ ಸೋಂಕಿನಿಂದ ಬಳಲುತ್ತಿದೆ. ಉದ್ಯೋಗವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಜನ ಪರದಾಡುತ್ತಿದ್ದಾರೆ. ಈ ಸಂದಿಗ್ಧ ಕಾಲದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಅಮಾನವೀಯವಾಗಿ ವರ್ತಿಸುತ್ತಿವೆ. ಮಕ್ಕಳ ಫೀಸ್ ವಸೂಲಿಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಅಡ್ಡದಾರಿ ಹಿಡಿದಿವೆ. ಖಾಸಗಿ ಶಾಲೆಗಳ ಸುಲಿಗೆಗೆ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಶಾಲೆಗಳ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾರೆ.
ಶಿಕ್ಷಣ ಇಲಾಖೆ ಈ ಸಾಲಿನ ಇನ್ನು ಶಾಲಾ ಸುಲ್ಕ ನಿಗದಿ ಮಾಡಿಲ್ಲ. ತರಗತಿ ಪಠ್ಯ ಹಾಗೂ ಬೋಧನಾ ಕ್ರಮ ತಿಳಿಸಿಲ್ಲ. ಕೊವಿಡ್ ಸಂಕಷ್ಟದಲ್ಲಿ ನಮಗೆ ಕೆಲಸ ಇಲ್ಲ. ಇತಂಹ ಸಂಕಷ್ಟದಲ್ಲಿ ಖಾಸಗಿ ಶಾಲೆಗಳು ಸುಲಿಗೆಗೆ ಮುಂದಾಗಿವೆ. ಆನ್ಲೈನ್ ಕ್ಲಾಸ್ ಶುರು ಮಾಡಿ ಫೀಸ್ಗೆ ಡಿಮ್ಯಾಂಡ್ ಮಾಡುತ್ತಿವೆ. ಪೂರ್ಣ ಪ್ರಮಾಣದ ಫೀಸ್ ಕಟ್ಟುವಂತೆ ಒತ್ತಡ ಹಾಕಿವೆ. ಕಂತುಗಳಲ್ಲಿ ಫೀಸ್ ಕಟ್ಟಬೇಕು ಅಂದರೆ 5 ಸಾವಿರದ ವರೆಗೂ ಬಡ್ಡಿ ಕಟ್ಟುವಂತೆ ಹಿಂಸೆ ಮಾಡುತ್ತಿವೆ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ರಾಜಾಜಿನಗರದ ಶ್ರೀ ವಾಣಿ ಸ್ಕೂಲ್, ಮಂಗೊಲಿಯಾ ಪಬ್ಲಿಕ್ ಸ್ಕೂಲ್, ರಾಜಾಜಿನಗರ ಹಾಗೂ ಮಹಾಲಕ್ಷ್ಮಿ ಲೇಔಟ್ ಚೈತನ್ಯ ಟೆಕ್ನೋ ಶಾಲೆ, ಮಾರತಹಳ್ಳಿ ವಿಬಿಜಿಯೋರ್ ಶಾಲೆ, ನಂದಿನಿ ಲೇಔಟ್ ಪ್ರೆಸಿಡೆನ್ಸಿ ಸ್ಕೂಲ್, ಶಿವಾನಂದ ಸರ್ಕಲ್ ಹಾಗೂ ಹೆಬ್ಬಳಾದಲ್ಲಿರೊ ಸಿಂಧಿ ಶಾಲೆ, ಕಲ್ಕೆರೆಯ ಎನ್ಪಿಎಸ್ ಪಬ್ಲಿಕ್ ಶಾಲೆ ಸೇರಿದಂತೆ ಅನೇಕ ಶಾಲೆಗಳಿಂದ ಹಗಲು ದರೋಡೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಕಲ್ಕೆರೆಯ ಎನ್ಪಿಎಸ್ ಪಬ್ಲಿಕ್ ಶಾಲೆ ಕೊವಿಡ್ ಸಂಕಷ್ಟದಲ್ಲೂ ಶೇ.20 ರಷ್ಟು ಫೀಸ್ ಹೆಚ್ಚಳ ಮಾಡಿದೆ. ಶಾಲೆ ಕಳೆದ ವರ್ಷವೂ ಫೀಸ್ ಕಡಿತ ಮಾಡಿರಲಿಲ್ಲ. ಕಳೆದ ವರ್ಷ ಒಂದು ಲಕ್ಷ 35 ಸಾವಿರ ಫೀಸ್ ಇತ್ತು. ಈ ವರ್ಷ ಒಂದು ಲಕ್ಷ 45 ಸಾವಿರಕ್ಕೆ ಏರಿಕೆ ಮಾಡಿದೆ. ಶಾಲೆಯ ನಡೆಗೆ 300 ಕ್ಕೂ ಹೆಚ್ಚು ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಖಾಸಗಿ ಫೈನಾನ್ಸ್ಗಳ ಜೊತೆ ಖಾಸಗಿ ಶಾಲೆಗಳ ಒಪ್ಪಂದ
ಪೋಷಕರಿಗೆ ಸಾಲ ಕೊಡಿಸಿ ಶುಲ್ಕ ಕಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಟಿವಿ9ಗೆ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಖಾಸಗಿ ಶಾಲೆಗಲೂ ತಾವೇ ಸಾಲ ಕೊಡಿಸಿ ಮಕ್ಕಳ ಫೀಸ್ ವಸೂಲಿ ಮಾಡುತ್ತಿವೆ. ಯೋಗಾನಂದ ಎಂಬುವವರು ಈ ಬಗ್ಗೆ ಆರೋಪಿಸಿದ್ದಾರೆ. ಬಡ್ಡಿಗೆ ಹಣ ಪಡೆದು ಶುಲ್ಕ ಕಟ್ಟಲು ಒತ್ತಡ ಹಾಕಿದ ಆರೋಪದ ಬಗ್ಗೆ ಯಾವುದೇ ಶಾಲೆಯ ವಿರುದ್ಧ ನನಗೆ ದೂರು ಬಂದಿಲ್ಲ. ಪೋಷಕರು ನನಗೆ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಶುಲ್ಕ ಕಟ್ಟಿಲ್ಲವೆಂದು ಆನ್ಲೈನ್ ಕ್ಲಾಸ್ ಬಂದ್ ಮಾಡುವಂತಿಲ್ಲ. ಸುಪ್ರೀಂ ಕೋರ್ಟ್, ಹೈಕೋರ್ಟ್ ಕೂಡ ಸ್ಪಷ್ಟವಾಗಿ ಹೇಳಿದೆ. ಶುಲ್ಕಕ್ಕೆ ಒತ್ತಡ ಹಾಕುತ್ತಿರುವ ಬಗ್ಗೆ ದೂರು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ. ನನಗೆ ದೂರು ನೀಡಬೇಕೆಂದು ಇಲ್ಲ. ಬಿಇಒಗೆ ನೀಡಬಹುದು. ದೂರು ನೀಡಿದರೆ ಅಂತಹ ಶಾಲೆ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಶಿಕ್ಷಣ ಸಚಿವ ಹೇಳಿದರು.
ಇದನ್ನೂ ಓದಿ
Pvt Schools Fees Torcher : ‘ಸಚಿವರು ಖಾಸಗಿ ಶಾಲೆಗಳ ಜತೆ ಶಾಮೀಲಾದಂತೆ ಕಾಣ್ತಿದೆ’
ಮತ್ತೆ ಶುರುವಾಯ್ತು ಖಾಸಗಿ ಶಾಲೆಗಳ ಫೀಸ್ ಟಾರ್ಚರ್; ಪೋಷಕರಿಂದ ಪ್ರತಿಭಟನೆ
(Private educational institutions are wayward for fees)