AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್ ಇಲಾಖೆ ಆರ್​ಎಸ್​ಎಸ್ ಮನೆ ಆಳಾ? ‘‘ಅವರೇ’’ ಪಾಕ್ ಜತೆ ನಂಟು ಬೆಳೆಸ್ತಿರೋದು: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಪೊಲೀಸ್ ಇಲಾಖೆ ಆರ್‌ಎಸ್‌ಎಸ್‌ನ ಮನೆ ಆಳೇ ಎಂದು ಪ್ರಶ್ನಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘‘ಅವರೇ’’ ಪಾಕಿಸ್ತಾನದ ಜೊತೆ ನಂಟು ಬೆಳೆಸುತ್ತಿದ್ದಾರೆ ಎಂದು ಗೃಹ ಸಚಿವರು ಪರೋಕ್ಷವಾಗಿ ಆರೋಪಿಸಿದ್ದಾರೆ. ಅಂದಹಾಗೆ, ‘‘ಅವರೇ’’ ಎಂಬುದು ಆರ್​ಎಸಸ್​ಎಸ್​ ಅನ್ನು ಉದ್ದೇಶಿಸಿದ್ದೋ ಅಥವಾ ಕೇಂದ್ರ ಸರ್ಕಾರವನ್ನೋ ಎಂಬುದನ್ನು ಸಚಿವರು ಸ್ಪಷ್ಟಪಡಿಸಿಲ್ಲ.

ಪೊಲೀಸ್ ಇಲಾಖೆ ಆರ್​ಎಸ್​ಎಸ್ ಮನೆ ಆಳಾ? ‘‘ಅವರೇ’’ ಪಾಕ್ ಜತೆ ನಂಟು ಬೆಳೆಸ್ತಿರೋದು: ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಆರ್​ಎಸ್​ಎಸ್ ಹಾಗೂ ಪ್ರಿಯಾಂಕ್ ಖರ್ಗೆ (ಸಂಗ್ರಹ ಚಿತ್ರ)
ಈರಣ್ಣಾ ಬಸವಾ
| Edited By: |

Updated on: Oct 21, 2026 | 11:16 AM

Share

ಬೆಂಗಳೂರು, ಅಕ್ಟೋಬರ್ 21: ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ಪಡೆಯುವ ವಿಚಾರವಾಗಿ ಆರಂಭವಾಗಿರುವ ಚರ್ಚೆ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಪೊಲೀಸ್ ಇಲಾಖೆ ಆರ್‌ಎಸ್‌ಎಸ್‌ನ ಮನೆ ಆಳೇ ಎಂದು ಪ್ರಶ್ನಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ‘‘ಅವರೇ’’ ಪಾಕಿಸ್ತಾನದ ಜೊತೆ ನಂಟು ಬೆಳೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ಪಡೆಯುವ ಬದಲು ಪೊಲೀಸರಿಗೆ ಕೇವಲ ಮಾಹಿತಿ ನೀಡಿರುವ ಪತ್ರದ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, “ಅದರಲ್ಲಿ ಮಾಹಿತಿ ನೀಡಲು ಎಂದು ಬರೆದಿದ್ದಾರೆಯೇ ಹೊರತು, ಅನುಮತಿಗಾಗಿ ಎಂದು ಬರೆದಿಲ್ಲ. ಅನುಮತಿ ಕೇಳಲಿ. ಪೊಲೀಸ್ ಇಲಾಖೆ ಅವರ ಮನೆ ಆಳೇನ್ರಿ?” ಎಂದು ಪ್ರಶ್ನಿಸಿದ್ದಾರೆ.

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗಳ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ ಪ್ರಿಯಾಂಕ್ ಖರ್ಗೆ, ಆಡಳಿತ ವ್ಯವಸ್ಥೆಯನ್ನು ಬದಲಿಸುವ (ರಿಜೀಮ್ ಚೇಂಜ್) ಹಾಗೂ ರಾಜಕೀಯದ ಬಗ್ಗೆ ಮಾತನಾಡಲು ಅವರು ಯಾರು ಎಂದು ಪ್ರಶ್ನಿಸಿದ್ದಾರೆ. ಫಾರ್ಮ್ 6 ಮತ್ತು 7ರ ವಿಚಾರವನ್ನು ಪ್ರಸ್ತಾಪಿಸಿದ ಅವರು, ಶಾಶ್ವತವಾಗಿ ಅಧಿಕಾರದಲ್ಲಿ ಉಳಿಯುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಇದೇ ಕಾರಣಕ್ಕೆ ಕೆಲವರು ಆತ್ಮವಿಶ್ವಾಸದಿಂದ ನಡೆದುಕೊಳ್ಳುತ್ತಿದ್ದಾರೆ ಎಂದೂ ಹೇಳಿದ್ದಾರೆ.

‘ಯಾವ ದುಷ್ಟ ಶಕ್ತಿ ರೀ? ‘‘ಅವರೇ’’ ಪಾಕಿಸ್ತಾನದ ಜೊತೆ ನಂಟು ಬೆಳೆಸುತ್ತಿರುವುದು?” ಎಂದ ಸಚಿವರು, ಆರ್‌ಎಸ್‌ಎಸ್‌ನ ಇತಿಹಾಸವನ್ನು ಪರಿಶೀಲಿಸುವಂತೆ ಹೇಳಿದ್ದಾರೆ. ಈ ಹಿಂದೆ ಅವರು ಯಾವ ಪ್ರತಿಭಟನೆಗಳನ್ನು ನಡೆಸಿದ್ದಾರೆ ಎಂಬುದನ್ನೂ ಪ್ರಶ್ನಿಸಿದ್ದಾರೆ.

ವಿದೇಶಗಳ ಪ್ರತಿಭಟನೆ, ಭಾರತದ ಪ್ರತಿಭಟನೆ ಹೋಲಿಕೆ ಸಲ್ಲ: ಖರ್ಗೆ

ವಿದೇಶಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಉದಾಹರಣೆಗಳನ್ನು ಇಲ್ಲಿನ ಪರಿಸ್ಥಿತಿಗೆ ಹೋಲಿಸಬಾರದು ಎಂದು ಹೇಳಿದ ಪ್ರಿಯಾಂಕ್ ಖರ್ಗೆ, ಫ್ರಾನ್ಸ್‌ನಲ್ಲಿ ಬೆಲೆ ಏರಿಕೆ ಮತ್ತು ಶಿಕ್ಷಣದ ವಿಚಾರವಾಗಿ ಪ್ರತಿಭಟನೆಗಳು ನಡೆಯುತ್ತಿದ್ದರೆ, ಇಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನನ್ನ ಪ್ರೀತಿಯ ಸ್ವಯಂಸೇವಕರೇ: RSS ವಿಜಯದಶಮಿ ಪಥಸಂಚಲನದ ಬಗ್ಗೆ ಖರ್ಗೆ ಖಡಕ್ ಸೂಚನೆ

ವಿಜಯದಶಮಿ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ಅವರು ಅಕ್ಟೋಬರ್ 20ರಂದು ಪ್ರತಿಕ್ರಿಯೆ ನೀಡಿದ್ದರು. ಪಥಸಂಚಲನ ನಡೆಸುವ ಸಂಘಟನೆಗಳು ನಿಗದಿತ ಅರ್ಜಿ ಸಲ್ಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಂದ ಅಧಿಕೃತ ಅನುಮತಿ ಪಡೆಯಬೇಕು ಎಂದು ಅವರು ಹೇಳಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಈರಣ್ಣಾ ಬಸವಾ
ಈರಣ್ಣಾ ಬಸವಾ

ಈರಣ್ಣಾ ಬಸವಾ.. ಮೂಲತಃ ವಾಣಿಜ್ಯ ನಗರಿ ಹುಬ್ಬಳ್ಳಿಯವರು. ಈರಣ್ಣಾ ಬಿ.ಕಾಮ್ ಪದವೀಧರರಾಗಿದ್ದಾರೆ. ಕಂಟೆಂಟ್ ರೈಟರ್ ಆಗಿ ವೃತ್ತಿಜೀವನ ಆರಂಭಿಸಿದ ನಂತರ ಕನ್ನಡದ ಬೇರೆ ಬೇರೆ ಸುದ್ದಿ ಮಾದ್ಯಮದಲ್ಲಿ ಸುಮಾರು ೬ ವರ್ಷ ಕಾಲ ಡೆಸ್ಕ್ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸದ್ಯ ಸತತ ಪರಿಶ್ರಮದಿಂದ ಟಿವಿ9 ಕನ್ನಡದಲ್ಲಿ ರಾಜಕೀಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹಲವು ಎಕ್ಸ್ ಕ್ಲೂಸಿವ್ ಸುದ್ದಿಗಳನ್ನು ಹೆಕ್ಕಿ ತೆಗೆದಿದ್ದಾರೆ. ಸಿಎಂ, ಡಿಸಿಎಂ ಬೀಟ್ ಜವಾಬ್ದಾರಿ ಇವರ ಮೇಲಿದ್ದು ಜನರಿಗೆ ಸಿಗಬೇಕಾದ ಅಮೂಲ್ಯ ಸುದ್ದಿಗಳನ್ನು ತಲುಪಿಸುವ ಕಾಯಕವನ್ನು ಜವಾಬ್ದಾರಿಯಿಂದ ಮಾಡುತ್ತಿದ್ದಾರೆ. ಬರವಣಿಗೆ, ಕತೆ, ಕವನ ಇವರ ಆಸಕ್ತಿಯ ಕ್ಷೇತ್ರ.

Read More