ಬೆಂಗಳೂರು, ಮಾ.1: ವಿಧಾನಸೌಧದಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಪಾಕ್ ಪರ ಘೋಷಣೆ ಕೂಗಿರುವ ಆರೋಪ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೈಗೆ ವಿಡಿಯೋದ ಎಫ್ಎಸ್ಎಲ್ (FSL) ವರದಿ ಸೇರಿ ಹಲವು ಗಂಟೆಗಳು ಕಳೆದರೂ ವರದಿ ಬಹಿರಂಗಪಡಿಸಿಲ್ಲ. ಹೀಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯ ಮೇಲೆ ವಿಪಕ್ಷ ನಾಯಕ ಆರ್.ಅಶೋಕ (R Ashoka) ಅನುಮಾನ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದ ಎಫ್ಎಸ್ಎಲ್ ವರದಿ ಕೈಸೇರಿ 5-6 ಗಂಟೆ ಕಳೆದಿದ್ದರೂ ಇನ್ನೂ ವರದಿಯನ್ನ ಬಹಿರಂಗಪಡಿಸಲು ಮೀನಾಮೇಷ ಎಣಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆ ಅನುಮಾನ ಮೂಡಿಸುತ್ತಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಆರ್ ಅಶೋಕ ಅವರು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ: 7 ಮಂದಿಯ ವಿಚಾರಣೆ ನಡೆಸಿದ ಪೊಲೀಸರು
ವರದಿ ಬಹಿರಂಗ ಪಡಿಸುತ್ತೀರೋ ಇಲ್ಲವೋ ಎನ್ನುವ ನಡೆಯ ಮೇಲೆ ತಮ್ಮ ಕಾಂಗ್ರೆಸ್ ಪಕ್ಷ ನಿಜವಾಗಿಯೂ ದೇಶಪ್ರೇಮಿಗಳ ಪರ ಇದೆಯೋ ಅಥವಾ ದೇಶದ್ರೋಹಿಗಳ ಪರ ಇದೆಯೋ ಎಂಬುದನ್ನು ಕನ್ನಡಿಗರು ನಿರ್ಧಾರ ಮಾಡುತ್ತಾರೆ ಎಂದು ಅಶೋಕ ಹೇಳಿದ್ದಾರೆ.
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದ ಎಫ್ಎಸ್ಎಲ್ ವರದಿ ಕೈಸೇರಿ 5-6 ಗಂಟೆ ಕಳೆದಿದ್ದರೂ ಇನ್ನೂ ವರದಿಯನ್ನ ಬಹಿರಂಗಪಡಿಸಲು ಮೀನ-ಮೇಷ ಎಣಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆ ಅನುಮಾನ ಮೂಡಿಸುತ್ತಿದೆ.
ವರದಿ ಬಹಿರಂಗ ಪಡಿಸುತ್ತೀರೋ ಇಲ್ಲವೋ ಎನ್ನುವ ನಡೆಯ ಮೇಲೆ ತಮ್ಮ @INCKarnataka ಪಕ್ಷ ನಿಜವಾಗಿಯೂ…
— R. Ashoka (ಆರ್. ಅಶೋಕ) (@RAshokaBJP) February 29, 2024
ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣ ಸಂಬಂಧ ಈಗಾಗಲೇ ಒಂದು ವಿಡಿಯೋದ ಎಫ್ಎಸ್ಎಲ್ ವರದಿ ಪೊಲೀಸರ ಕೈಸೇರಿದೆ. ಈ ನಡುವೆ ಎಫ್ಎಸ್ಎಲ್ಗೆ ಮತ್ತಷ್ಟು ವಿಡಿಯೋಗಳನ್ನು ಸಲ್ಲಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ನಿನ್ನೆ ಸಂಜೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಇನ್ನಷ್ಟು ವಿಡಿಯೋಗಳನ್ನು ಪರೀಕ್ಷೆಗಾಗಿ ಎಫ್‌ಎಸ್ ಎಲ್ಗೆ ಕಳುಹಿಸಿದ್ದಾರೆ. ಸದ್ಯ ಆಡಿಯೋ ಉಚ್ಚಾರಣೆ ಬಗ್ಗೆ ಪೊಲೀಸರು ಎಫ್ಎಸ್ಎಲ್ನಿಂದ ಮೌಖಿಕ ಮಾಹಿತಿ ಪಡೆದಿದ್ದು, ಇದನ್ನು ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಸಂಪೂರ್ಣ ಎಫ್ಎಸ್ಎಲ್ ವರದಿ ಬರಲು ಮತ್ತಷ್ಟು ಸಮಯ ಅಗತ್ಯ ಇದೆ. ವರದಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿರುವ ಬಗ್ಗೆ ಧೃಡಪಡಬೇಕು. ಧೃಡ ಆದ ಕೂಡಲೇ ಕೂಗಿದವರು ಯಾರು ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಇದಕ್ಕೆ ಅಲ್ಲಿದ್ದವರ ಎಲ್ಲರ ವಾಯ್ಸ್ ಸ್ಯಾಂಪಲ್ ಅನ್ನು ಪೊಲೀಸರು ಈಗಾಗಲೇ ಸಂಗ್ರಹಿಸಿದ್ದಾರೆ. ನಂತರ ವಿಧಾನಸೌಧದ ಆಡಿಯೋ ಜೊತೆ ಪೊಲೀಸರು ಸಂಗ್ರಹಿಸಿದ ವಾಯ್ಸ್ ಸ್ಯಾಂಪಲ್ ಅನಾಲಿಸಿಸ್ ನಡೆಸಲಾಗುತ್ತದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ