ಮೈಸೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರದ ವಿರುದ್ಧ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಯಿತು. ಕಾಂಗ್ರೆಸ್ ಕಾರ್ಯಕರ್ತರು ಪ್ರತಿಕೃತಿ ಹಾಗೂ ಸ್ತಬ್ದಚಿತ್ರಗಳನ್ನು ಶವದಂತೆ ಹೊತ್ತು ಸಾಗಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾ ನಿರತರು ಕೇಂದ್ರ ರೈಲ್ವೆ, ಬಿಎಸ್ ಎನ್ಎಲ್, ಬೆಮೆಲ್, ಏರ್ವೇಸ್ ಸ್ತಬ್ಧಚಿತ್ರಗಳ ಅಣುಕು ಮತ್ತು ಸರ್ಕಾರದ ಪ್ರತಿಕೃತಿಯನ್ನು ಹಿಡಿದು ಸಂಸ್ಕೃತ ಪಾಠಶಾಲೆ ಬಳಿಯಿಂದ ಚಾಮುಂಡಿ ಬೆಟ್ಟದ ತಪ್ಪಲಿನ ಸ್ಮಶಾನದವರೆಗೆ ಶವಯಾತ್ರೆ ಮಾಡಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021ರ ಕೇಂದ್ರ ಸರ್ಕಾರ ಬಜೆಟ್ನಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಏರಿಕೆ ಮಾಡಿದ್ದರು. ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ಗೆ 2.5ರೂ ಕೃಷಿ ಸೆಸ್ ಹಾಗು ಪ್ರತಿ ಲೀಟರ್ ಡಿಸೇಲ್ಗೆ 4 ರೂ. ಕೃಷಿ ಸೆಸ್ ವಿಧಿಸಿದೆ.
ಬಿಜೆಪಿ ಮುಖಂಡನಿಗೆ ಮಸಿ ಬಳಿದರೆ ಒಂದು ಲಕ್ಷ ರೂ. ಬಹುಮಾನ ಘೋಷಿಸಿದ ಕಾಂಗ್ರೆಸ್ ನಾಯಕಿ