ಚಾಮರಾಜನಗರ ಆಕ್ಸಿಜನ್​ ದುರಂತದಲ್ಲಿ ಸತ್ತವರ ಕುಟುಂಬಕ್ಕೆ ತಕ್ಷಣ 2 ಲಕ್ಷ ರೂಪಾಯಿ ಪರಿಹಾರ ಕೊಡಿ: ಹೈಕೋರ್ಟ್ ವಿಭಾಗೀಯ ಪೀಠ

|

Updated on: May 20, 2021 | 1:57 PM

ಆಕ್ಸಿಜನ್ ಕೊರತೆಯಿಂದ ಸಾವಿಗೀಡಾದವರ ಕುಟುಂಬಸ್ಥರಿಗೆ ತಕ್ಷಣಕ್ಕೆ 2 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಎಜಿ ಪ್ರಭುಲಿಂಗ್ ನಾವದಗಿ ಹೇಳಿಕೆ ನೀಡಿದ್ದಾರೆ. ನೀವು ನಿರ್ಧರಿಸಿರುವ ಪರಿಹಾರ ತಕ್ಷಣ ನೀಡಿ, ಪರಿಹಾರದ ಪ್ರಮಾಣದ ಬಗ್ಗೆ ನಂತರ ವಿಚಾರಣೆ ಮಾಡಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಚಾಮರಾಜನಗರ ಆಕ್ಸಿಜನ್​ ದುರಂತದಲ್ಲಿ ಸತ್ತವರ ಕುಟುಂಬಕ್ಕೆ ತಕ್ಷಣ 2 ಲಕ್ಷ ರೂಪಾಯಿ ಪರಿಹಾರ ಕೊಡಿ: ಹೈಕೋರ್ಟ್ ವಿಭಾಗೀಯ ಪೀಠ
ಕರ್ನಾಟಕ ಹೈಕೋರ್ಟ್​
Follow us on

ಚಾಮರಾಜನಗರ: ಆಕ್ಸಿಜನ್​ ಕೊರತೆಯ ಕಾರಣ ಮೇ 2ರಂದು ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದ ದುರಂತಕ್ಕೆ ಸಂಬಂಧಿಸಿದಂತೆ ಕರ್ನಾಟಕ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಆಕ್ಸಿಜನ್ ಕೊರತೆಯಿಂದ ಸಾವಿಗೀಡಾದವರ ಕುಟುಂಬಸ್ಥರಿಗೆ ತಕ್ಷಣಕ್ಕೆ 2 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಎಜಿ ಪ್ರಭುಲಿಂಗ್ ನಾವದಗಿ ಹೇಳಿಕೆ ನೀಡಿದ್ದಾರೆ. ನೀವು ನಿರ್ಧರಿಸಿರುವ ಪರಿಹಾರ ತಕ್ಷಣ ನೀಡಿ, ಪರಿಹಾರದ ಪ್ರಮಾಣದ ಬಗ್ಗೆ ನಂತರ ವಿಚಾರಣೆ ಮಾಡಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಘಟನೆಯ ವಿವರ:
ಮೇ 2ರ ರಾತ್ರಿ 10.30ರಿಂದ ತಡರಾತ್ರಿ 2.30ರವರೆಗೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಉಂಟಾಗಿತ್ತು. ಅದರ ಪರಿಣಾಮ 24 ಜನ ಮೃತಪಟ್ಟಿದ್ದಾರೆ ಎನ್ನಲಾಗಿದ್ದರೂ ನಂತರ ನ್ಯಾ.ಎ.ಎನ್.ವೇಣುಗೋಪಾಲಗೌಡ ನೇತೃತ್ವದ ಸಮಿತಿ ಹೈಕೋರ್ಟ್​ಗೆ ಸಲ್ಲಿಸಿದ ವರದಿಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರು 24 ಜನರಲ್ಲ, 36 ಜನರು ಎಂದು ಉಲ್ಲೇಖಿಸಲಾಗಿತ್ತು.

ಈ 4 ಗಂಟೆಗಳ ಅವಧಿಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗಾಗಿ ಆಕ್ಸಿಜನ್ ಇರಲಿಲ್ಲ ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆಡಿಟ್ ವರದಿ ಪ್ರಕಾರ ಆಕ್ಸಿಜನ್ ಕೊರತೆಯಿಂದ ಮೂವರು ಸಾವನ್ನಪ್ಪಿದ್ದಾರೆ. ಮೆದುಳಿನ ಆಘಾತದಿಂದ 7 ರೋಗಿಗಳು ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿನಿಂದ 14 ಸಾವಾಗಿದೆ ಎಂದು ತಿಳಿಸಲಾಗಿತ್ತು. ಆದರೆ ಇವರೆಲ್ಲರಿಗೂ ಆಕ್ಸಿಜನ್ ಕೊರತೆ ಆಗಿದ್ದು ನಿಜ. ಆಕ್ಸಿಜನ್ ಕೊರತೆಯಾದ ನಂತರ 36 ಒಳರೋಗಿಗಳು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ನ್ಯಾ.ಎ.ಎನ್.ವೇಣುಗೋಪಾಲಗೌಡ ನೇತೃತ್ವದ ಸಮಿತಿ ಹೈಕೋರ್ಟ್​ಗೆ ವರದಿ ಸಲ್ಲಿಸಿತ್ತು.

ಇದನ್ನೂ ಓದಿ:
ಚಾಮರಾಜನಗರ ಜಿಲ್ಲಾಸ್ಪತ್ರೆ ಆಕ್ಸಿಜನ್ ಪ್ರಕರಣ; ತನಿಖಾ ತಂಡ ವರದಿ ನೀಡಿದ್ರೂ ಸರ್ಕಾರ ಸೈಲೆಂಟ್, ಜೀವ ಹಿಂಡಿದವರಿಗೆ ಶಿಕ್ಷೆ ಯಾವಾಗ? 

ಚಾಮರಾಜನಗರ ದುರಂತ: ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರು 24 ಜನರಲ್ಲ, 36 ಜನ; ಹೈಕೋರ್ಟ್​ಗೆ ವರದಿ ಸಲ್ಲಿಕೆ