ಸಚಿವ, ಬಿಜೆಪಿ ಮುಖಂಡರಿಗೆ ಸಮವಸ್ತ್ರದಲ್ಲಿಯೇ ಊಟ ಬಡಿಸಿದ ಪಿಎಸ್ಐ
ಸಚಿವ, ಬಿಜೆಪಿ ಮುಖಂಡರಿಗೆ ಪಿಎಸ್‌ಐ ಊಟ ಬಡಿಸಿದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRS ಬಳಿಯ ಮಯೂರ ಹೋಟೆಲ್‌ನಲ್ಲಿ ಕಂಡು ಬಂದಿದೆ.
ಮಂಡ್ಯ: ಸಚಿವ, ಬಿಜೆಪಿ ಮುಖಂಡರಿಗೆ ಪಿಎಸ್‌ಐ ಸಮವಸ್ತ್ರದಲ್ಲಿಯೇ ಊಟ ಬಡಿಸಿದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ KRS ಬಳಿಯ ಮಯೂರ ಹೋಟೆಲ್‌ನಲ್ಲಿ ಕಂಡು ಬಂದಿದೆ.
ಖಾಕಿ, ರಾಜಕೀಯದ ಕೈಗೊಂಬೆ ಎಂಬ ಮಾತುಗಳನ್ನ ನಾವು ಕೇಳಿದ್ದೇವೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯೆಂಬಂತೆ ಮಯೂರ ಹೋಟೆಲ್‌ನಲ್ಲಿ ಸಚಿವ ಸಿ.ಸಿ.ಪಾಟೀಲ್‌ಗೆ, ಕೆಆರ್‌ಎಸ್ ಪೊಲೀಸ್ ಠಾಣೆಯ PSI ನವೀನ್ ಗೌಡ ಊಟ ಬಡಿಸಿದ್ದಾರೆ.
ಸಮವಸ್ತ್ರದಲ್ಲೇ ಸಚಿವ, ಬಿಜೆಪಿ ಮುಖಂಡರಿಗೆ ಊಟ ಬಡಿಸಿದ್ದಾರೆ. ನಿನ್ನೆ ಗಣಿ ಸಚಿವ ಸಿ.ಸಿ.ಪಾಟೀಲ್ ಪ್ರವಾಸದ ವೇಳೆ ಈ ಘಟನೆ ನಡೆದಿದ್ದು, ಪಿಎಸ್ಐ ಆಗಿ ಪೊಲೀಸ್ ಸಮವಸ್ತ್ರ ಧರಿಸಿ ಈ ರೀತಿ ಮಾಡೋದು ಎಷ್ಟರಮಟ್ಟಿಗೆ ಸರಿ ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು PSI ಅವರದ್ದು ಸೌಜನ್ಯದ ನಡೆ ಎಂದು ಹೊಗಳಿದ್ರೆ. ಮತ್ತೆ ಕೆಲವರು ಇದು ತಪ್ಪು ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಸಚಿವರಿಂದಲೇ ಕೊರೊನಾ ನೀತಿ ಉಲ್ಲಂಘನೆ..! ಕಾರ್ಯಕರ್ತರಿಗೆ ಊಟ ಹಾಕಿಸಿದ ಡಾ. ಸುಧಾಕರ್
Published On - 11:34 am, Sun, 3 January 21