ಹೆಸರಿಡುವ ವಿಚಾರದಲ್ಲಿಯೇ ಸೊರಗುತಿದೆ ಕೋಲಾರದ ರೈಲ್ವೆ ನಿಲ್ದಾಣ: ಉದ್ಘಾಟನೆಗೆ ಸ್ಥಳೀಯರ ಆಗ್ರಹ

ಹಲವು ವರ್ಷಗಳ ಹಿಂದೆ ಮಲ್ಲಿಕಾರ್ಜುನ ಖರ್ಗೆಯವರು ರೈಲ್ವೆ ಸಚಿವರಾಗಿದ್ದ ವೇಳೆ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು. ಕೋಲಾರದಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಕೋಲಾರಕ್ಕೆ ಬರುವ ರೈಲು ದಿನಕ್ಕೆ ಎರಡು ಬಾರಿ ಈ ನಿಲ್ದಾಣಕ್ಕೆ ಆಗಮಿಸುತ್ತದೆ.

ಹೆಸರಿಡುವ ವಿಚಾರದಲ್ಲಿಯೇ ಸೊರಗುತಿದೆ ಕೋಲಾರದ ರೈಲ್ವೆ ನಿಲ್ದಾಣ: ಉದ್ಘಾಟನೆಗೆ ಸ್ಥಳೀಯರ ಆಗ್ರಹ
ರೈಲ್ವೆ ನಿಲ್ದಾಣದ ದೃಶ್ಯ
Follow us
sandhya thejappa
| Updated By: ಸಾಧು ಶ್ರೀನಾಥ್​

Updated on:Mar 15, 2021 | 12:26 PM

ಕೋಲಾರ: ತಾಲೂಕಿನ ತೂರಾಂಡಹಳ್ಳಿ ಗ್ರಾಮದ ಬಳಿ ಇರುವ ರೈಲ್ವೆ ನಿಲ್ದಾಣವನ್ನು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಅತ್ಯಾಧುನಿಕ ಹಾಗೂ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ. ಆದರೆ ನಿಲ್ದಾಣಕ್ಕೆ ಹೆಸರಿಡುವ ವಿಚಾರದಲ್ಲಿ ಉಂಟಾದ ವಿವಾದದಿಂದ ಇದಯವರೆಗೂ ಈ ರೈಲು ನಿಲ್ದಾಣ ಉದ್ಘಾಟನೆಯ ಭಾಗ್ಯ ಕಂಡಿಲ್ಲ.

ತಾಲೂಕಿನ ತೂರಾಂಡಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಕೋಲಾರ ಹಾಗೂ ಶ್ರೀನಿವಾಸಪುರ ರೈಲ್ವೆ ಮಾರ್ಗ ಮಧ್ಯೆ ಬರುವ ರೈಲ್ವೆ ನಿಲ್ದಾಣಕ್ಕೆ ಮೊದಲಿಗೆ ಗೊಟ್ಟಹಳ್ಳಿ ರೈಲ್ವೆ ನಿಲ್ದಾಣ ಎಂದು ನಾಮಕರಣ ಮಾಡಲು ನಿರ್ಧಾರವಾಗಿತ್ತು. ಆದರೆ ತೂರಾಂಡಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ರೈಲು ನಿಲ್ದಾಣಕ್ಕೆ ತೂರಾಂಡಹಳ್ಳಿ ಎಂದು ನಾಮಕರಣ ಮಾಡಬೇಕು ಎಂದು 6 ವರ್ಷದ ಹಿಂದೆ 2 ಗ್ರಾಮಗಳ ನಡುವೆ ವಿವಾದ ಉಂಟಾಗಿತ್ತು. ಈ ವಿವಾದದಿಂದ ಇಂದಿಗೂ ರೈಲ್ವೆ ನಿಲ್ದಾಣವು ಉದ್ಘಾಟನೆಯ ಭಾಗ್ಯ ಕಂಡಿಲ್ಲ.

ಈ ರೈಲ್ವೆ ನಿಲ್ದಾಣದಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಪ್ರಯಾಣಿಕರಿಗಾಗಿ ಆಸನದ ವ್ಯವಸ್ಥೆ, ಟಿಕೆಟ್ ಕೌಂಟರ್ ಸೇರಿದಂತೆ, ಮೇಜು- ಕುರ್ಚಿಗಳಷ್ಟೆ ಅಲ್ಲ ಉಪಕರಣಗಳು ಸೇರಿದಂತೆ ಸಕಲ ವ್ಯವಸ್ಥೆಯೂ ಇದೆ. ಡಿಜಿಟಲ್ ಆಕ್ಸೆಲ್ ಕೌಂಟರ್ ರಿಸೆಟ್ ಬಾಕ್ಸ್, ಸಿಗ್ನಲ್ ಪೋಸ್ಟ್ ಟೆಲಿಫೋನ್, ಟೋಕನ್ಲೆಸ್ ಬ್ಲಾಕ್ ಇನ್ಸ್ಟುಮೆಂಟ್, ಟ್ರಾಕ್ ಹ್ಯಾಂಡಲ್ ಸೇರಿದಂತೆ ಕೋಟ್ಯಾಂತರ ರೂಪಾಯಿಯ ಉಪಕರಣಗಳು ಇಲ್ಲಿವೆ. ರಿಲೇ ಕೊಠಡಿ, ಯುಪಿಎಸ್ ಕೊಠಡಿ, ಜನರೇಟರ್ ಕೊಠಡಿಗಳು ಇಲ್ಲಿದ್ದು, ಇದೀಗ ಎಲ್ಲವೂ ಧೂಳುಮಯವಾಗಿವೆ.

ರೈಲ್ವೆ ನಿಲ್ದಾಣದಲ್ಲಿರುವ ವೈಯರ್​ಗಳು

ರೀಲ್ವೆ ನಿಲ್ದಾಣದಲ್ಲಿ ಟೈಲ್ಸ್​ಗಳು ಒಡೆದು ಹೋಗಿವೆ

ರೈಲ್ವೆ ನಿಲ್ದಾಣದಲ್ಲಿ ಕುಎಇಯುವ ನೀರಿನ ವ್ಯವಸ್ಥೆ

ಹಲವು ವರ್ಷಗಳ ಹಿಂದೆ ಮಲ್ಲಿಕಾರ್ಜುನ ಖರ್ಗೆಯವರು ರೈಲ್ವೆ ಸಚಿವರಾಗಿದ್ದ ವೇಳೆ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದು, ಕೋಲಾರದಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಕೋಲಾರಕ್ಕೆ ಬರುವ ರೈಲು ದಿನಕ್ಕೆ ಎರಡು ಬಾರಿ ಈ ನಿಲ್ದಾಣಕ್ಕೆ ಬರುತ್ತದೆ. ಆದರೆ ನಿಲ್ದಾಣಕ್ಕೆ ಹೆಸರಿಡುವ ವಿಚಾರದಲ್ಲಿ ಮಾಡಿದ ಎಡವಟ್ಟು ನಿಲ್ದಾಣವನ್ನು ಇಲಾಖೆ ನಿರ್ಲಕ್ಷ್ಯ ವಹಿಸುವಂತೆ ಮಾಡಿತ್ತು. ಆದರೆ ಒಂದು ವರ್ಷದ ಹಿಂದೆ ಹೆಸರಿನ ವಿವಾದಕ್ಕೂ ತೆರೆ ಎಳೆದು ತೊರಾಂಡಹಳ್ಳಿ ರೈಲು ನಿಲ್ದಾಣ ಎಂದು ಹೆಸರಿಟ್ಟಾಗಿತ್ತು. ಆದರೂ ರೈಲ್ವೆ ಇಲಾಖೆ ಅಧಿಕಾರಿಗಳು ಮಾತ್ರ ಈ ರೈಲು ನಿಲ್ದಾಣವನ್ನು ಲೋಕಾರ್ಪಣೆ ಮಾಡಲು ಹಿಂದೇಟು ಹಾಕುತ್ತಿರುವ ಕಾರಣ ಸುಸಜ್ಜಿತ ರೈಲು ನಿಲ್ದಾಣ ಅನೈತಿಕ ಚಟುವಟಿಕೆಗಳ ಹಾಗೂ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ. ನಿಲ್ದಾಣದಲ್ಲಿ ಟಿಕೆಟ್ ನೀಡುವವರು ಇಲ್ಲ, ಸ್ಟೇಷನ್ ಮಾಸ್ಟರ್, ಸಿಬ್ಬಂದಿಯೂ ಇಲ್ಲಿಲ್ಲ. ಹಾಗಾಗಿ ಜನರು ರೈಲಿನಲ್ಲಿ ಪ್ರಯಾಣ ಮಾಡಲು ಸಾಧ್ಯವಾಗಿಲ್ಲ . ಆದರೆ ರೈಲು ನಿಲ್ದಾಣಕ್ಕೆ ಬೇಕಾದ ವ್ಯವಸ್ಥೆ ಮಾಡಿದರೆ ಈ ಭಾಗದ ಸುಮಾರು 20 ರಿಂದ 30 ಹಳ್ಳಿಗಳ ಜನರಿಗೆ ಪ್ರಯಾಣ ಮಾಡುವುದಕ್ಕೆ ಅನುಕೂಲವಾಗುತ್ತದೆ ಎನ್ನುವುದು ಸ್ಥಳೀಯರ ಆಗ್ರಹ.

ಒಡೆದು ಹೋದ ಕಿಟಕಿ ಗ್ಲಾಸ್​ಗಳು

ಧೂಳಿನಿಂದ ಕೂಡಿರುವ ಕೆಲವು ಮಿಷನ್​ಗಳು

ಮೇಜು-ಕುರ್ಚಿಗಳು ಧೂಳಿನಿಂದ ಕೂಡಿವೆ

ಇದನ್ನೂ ಓದಿ

ಮಾಜಿ ಸಚಿವರಿಂದ ಚಿಕ್ಕಬಳ್ಳಾಪುರದಲ್ಲಿ ಗುಹಾಂತರ ದೇವಾಲಯ ನಿರ್ಮಾಣ

3 ತಿಂಗಳ ನಂತರ ಅಬ್ಬರಿಸುತ್ತಿದೆ ಕೊರೊನಾ, ಒಂದೇ ದಿನ 26ಸಾವಿರಕ್ಕೂ ಹೆಚ್ಚು ಕೇಸ್​ಗಳು; ಮತ್ತೊಮ್ಮೆ ಲಾಕ್​ಡೌನ್ ಅನಿವಾರ್ಯ?

Published On - 12:22 pm, Mon, 15 March 21

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್