ಬೆಂಗಳೂರು: ಕೊರೊನಾ.. ರೂಪಾಂತರ ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ. ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿ ಮಾಡಿದ್ದು ಅದರ ಮೇಲೆ ಹದ್ದಿನ ಕಣ್ಣಿಟ್ಟಿದೆ. ಇದರ ಜೊತೆಗೆ ಪಾರ್ಟಿ ಪ್ರಿಯರಿಗೆ ಒಂದು ಸಂತೋಷದ ವಿಷಯ ಇದೆ. ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಇದ್ದು ಪಬ್ ಮತ್ತು ಬಾರ್‌ಗಳಿಗೆ ಮಧ್ಯರಾತ್ರಿ 1ರವರೆಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಟಿವಿ9ಗೆ ಪೊಲೀಸ್ ಇಲಾಖೆಯಿಂದ ಮಾಹಿತಿ ಸಿಕ್ಕಿದೆ.
ಇನ್ನು ಹೊಸ ವರ್ಷ ಹಿನ್ನೆಲೆ ರಸ್ತೆಗಳಲ್ಲಿ ಸಂಭ್ರಮಾಚರಣೆ ಮತ್ತು ಮೆರವಣಿಗೆ ನಿಷೇಧ ಹೇರಲಾಗಿದೆ. ರಾತ್ರಿ 11.45ರಿಂದ 12.30ರವರೆಗೆ ಹೋಟೆಲ್, ಬಾರ್‌ಗಳಿಂದ ಯಾರೂ ಹೊರಬಾರದಂತೆ ಎಲ್ಲಾ ಬಾಗಿಲು ಕ್ಲೋಸ್ ಮಾಡಿಸಲಾಗುತ್ತೆ.
ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗಿದ್ದು ಎಂಆರ್‌ಪಿ ಔಟ್‌ಲೆಟ್‌ಗಳು 10.30ಕ್ಕೆ ಬಂದ್ ಮಾಡಬೇಕು. ಉಳಿದ ಎಲ್ಲ ಮದ್ಯ ಮಾರಾಟಗಾರರು 11ಕ್ಕೆ ಮುಚ್ಚಬೇಕು. ಮದ್ಯ ಖರೀದಿಸಿರುವವರು ರಾತ್ರಿ 1ರವರೆಗೆ ಸೇವನೆಗೆ ಅವಕಾಶ. ಹಾಗೂ ರಾತ್ರಿ 11 ಗಂಟೆಯ ಬಳಿಕ ಮದ್ಯ ಮಾರಾಟ ಮಾಡುವಂತಿಲ್ಲ.
ನ್ಯೂ ಇಯರ್ ಸೆಲಬ್ರೇಷನ್: ಮಧ್ಯಾಹ್ನ 12 ಗಂಟೆಯಿಂದಲೇ ನಿಷೇಧಾಜ್ಞೆ.. ನಾಳೆ ಬೆಳಗ್ಗೆ 6 ಗಂಟೆವರೆಗೂ ಮಿಸುಕಾಡೋಂಗಿಲ್ಲ
Published On - 10:01 am, Thu, 31 December 20