ಬೆಂಗಳೂರು: ಯುವ ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣಕ್ಕೆ ಎಲ್ಲ ಕಡೆಯಿಂದಲೂ ಕಂಬನಿ ಮಿಡಿಯುತ್ತಿದೆ. ಸ್ವತಃ ಆರೋಗ್ಯದ ಬಗ್ಗೆ ತುಂಬಾ ತುಂಬಾ ಕಾಳಜಿ ವಹಿಸುತ್ತಿದ್ದ, ವಂಶಪಾರಂಪರ್ಯವಾಗಿಯೂ ಆರೋಗ್ಯ ಕಾಪಾಡಿಕೊಂಡು ಬಂದಿರುವ ಕನ್ನಡ ಚಿತ್ರೋದ್ಯಮದ ದೊಡ್ಮನೆ ಎಂದೇ ಜನಪ್ರಿಯವಾಗಿರುವ ಡಾ. ರಾಜ್ ಕುಮಾರ್ ಕುಟುಂಬದ ಕುಡಿಯೊಂದು ಕೊನೆಯುಸಿರೆಳೆದಿದ್ದು ಮಸಣದ ಹೂವಾಗಿದೆ. ಇಂದು ಬೆಳಗ್ಗೆ ಎಂದಿನಂತೆ ಸುಮಾರು 2 ಗಂಟೆ ಕಾಲ ಅಪ್ಪು (ಪುನೀತ್) ಜಿಮ್ ಮಾಡಿದ್ದಾರೆ. ಅದಾದ ಮೇಲೆ ಸುಮಾರು 10 ಗಂಟೆಯ ವೇಳೆಗೆ ಭಾರೀ ಪ್ರಮಾಣದ ಹಾರ್ಟ್ ಅಟ್ಯಾಕ್ ಆಗಿದೆ. ಆದರೆ ಅದು ಅವರ ಅರಿವಿಗೆ ಬಂದಿಲ್ಲ.
ಮಾಮೂಲಿ ಸಣ್ಣಪುಟ್ಟದ್ದು ಎಂದುಕೊಂಡು 46 ವರ್ಷದ ಪುನೀತ್ ರಾಜ್ ಕುಮಾರ್ ತುಸು ನಿರ್ಲಕ್ಷ್ಯ ವಹಿಸಿದ್ದಾರೆ. ಆದರೂ ತಮ್ಮ ಕುಟುಂಬ ವೈದ್ಯರ ಬಳಿ ತೋರಿಸಿಕೊಂಡಿದ್ದಾರೆ. ಅಲ್ಲಿ ಕುಟುಂಬ ವೈದ್ಯರು ಪರಿಸ್ಥಿತಿಯ ಗಂಭೀರತೆ ಅರಿತು, ತಕ್ಷಣ ವಿಕ್ರಂ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ. ಅದರಂತೆ ವಿಕ್ರಂ ಆಸ್ಪತ್ರೆಗೆ ಪುನೀತ್ ರಾಜ್ ಕುಮಾರ್ ಅವರನ್ನು ಕರೆತರಲಾಗಿದೆ. ಆದರೆ ಆ ವೇಳೆಗೆ ಅವರ ಹಾರ್ಟ್ ಬೀಟ್ ತೀವ್ರವಾಗಿ ಕುಸಿದಿತ್ತು ಎಂದು ವಿಕ್ರಂ ಆಸ್ಪತ್ರೆಯ ಪ್ರಧಾನ ವೈದ್ಯರು ಇದೀಗತಾನೇ ತಿಳಿಸಿದ್ದಾರೆ. ಅದಾದ ಬಳಿಕವೂ ಲೈಫ್ ಸಪೋರ್ಟಿಂಗ್ ವ್ಯವಸ್ಥೆಯಲ್ಲಿ ಎಲ್ಲ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಕೊಡಮಾಡಲಾಗಿದೆ. ಆದರೆ ಅವರು ಮರಳಿ ಬಾರದ ಲೋಕಕ್ಕೆ ಹೊರಟರು ಎಂದು ವಿಕ್ರಂ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ದಿನಾ ಜಿಮ್ ಮಡುತ್ತಾ, ದೇಹವನ್ನು ದಂಡಿಸುತ್ತಾ, ಅತ್ಯುತ್ತಮ ಆರೋಗ್ಯ ಕಾಪಾಡಿಕೊಂಡುಬಂದಿದ್ದ ಯುವ ನಟ ಪುನೀತ್ ಅವರ ಅಕಾಲಿಕ ಸಾವಿನ ಹಿನ್ನೆಲೆಯಲ್ಲಿ ಇದೀದ ಬೆಂಗಳೂರಿನ ಎಲ್ಲ ಜಿಮ್ ಕೇಂದ್ರಗಳು ಶುಕ್ರವಾರ ಮತ್ತು ಶನಿವಾರ ಬಂದ್ ಮಾಡಿ, ಅಗಲಿದ ಆತ್ಮೀಯ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಲು ನಿರ್ಧರಿಸಿವೆ.
Also Read:
Puneeth Rajkumar Death Live: ನಟ ಪುನೀತ್ ರಾಜಕುಮಾರ್ ಇನ್ನಿಲ್ಲ
ಹೃದಯಾಘಾತವಾದಾಗ ನಿಮ್ಮ ಬಳಿ ಇರತ್ತೆ ಗೋಲ್ಡನ್ ಟೈಮ್; ವೈದ್ಯರು ನೀಡುವ ಸಲಹೆ ಏನು ?
Puneeth Rajkumar Passes Away | Bengaluru Sees Undeclared Bandh
(puneeth rajkumar death bangalore gym centers to close down for 2 days in respect of puneeth rajkumar)
Published On - 3:46 pm, Fri, 29 October 21