ರಾಜ್‌ ಕುಮಾರ್‌ರಂತೆ ಪುನೀತ್‌ರದ್ದು ಆದರ್ಶ ವ್ಯಕ್ತಿತ್ವ; ಕೊವಿಡ್ ವೇಳೆ 50 ಲಕ್ಷ ರೂ ನೆರವು ನೀಡಿದ್ದರು: ಬಿಎಸ್ ಯಡಿಯೂರಪ್ಪ

| Updated By: ಸಾಧು ಶ್ರೀನಾಥ್​

Updated on: Oct 29, 2021 | 5:18 PM

ನಟ ಪುನೀತ್ ಸಿನಿಮಾಗಳನ್ನು ಎರಡೆರಡು ಬಾರಿ ನೋಡಿದ್ದೆ. ರಾಜ್‌ಕುಮಾರ್‌ರಂತೆ ಪುನೀತ್‌ರದ್ದು ಒಳ್ಳೆಯ ಆದರ್ಶ ವ್ಯಕ್ತಿತ್ವ ಬಡವರ ಬಗ್ಗೆ ಪುನೀತ್‌ ರಾಜ್​ಕುಮಾರ್​ ಕಾಳಜಿ ಹೊಂದಿದ್ದರು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ

ರಾಜ್‌ ಕುಮಾರ್‌ರಂತೆ ಪುನೀತ್‌ರದ್ದು ಆದರ್ಶ ವ್ಯಕ್ತಿತ್ವ; ಕೊವಿಡ್ ವೇಳೆ 50 ಲಕ್ಷ ರೂ ನೆರವು ನೀಡಿದ್ದರು: ಬಿಎಸ್ ಯಡಿಯೂರಪ್ಪ
ರಾಜ್‌ ಕುಮಾರ್‌ರಂತೆ ಪುನೀತ್‌ರದ್ದು ಆದರ್ಶ ವ್ಯಕ್ತಿತ್ವ; ಕೊವಿಡ್ ವೇಳೆ 50 ಲಕ್ಷ ರೂ ನೆರವು ನೀಡಿದ್ದರು: ಬಿಎಸ್ ಯಡಿಯೂರಪ್ಪ
Follow us on

ಬೆಂಗಳೂರು: ಯುವ ನಟ ಪುನೀತ್​ ರಾಜ್​ ಕುಮಾರ್ (46) ಇಂದು ಬೆಳಗ್ಗೆ ವಿಧಿವಶರಾದರು. ಅಕಾಲಿಕ ಮರಣವನ್ನಪ್ಪಿದ ಪುನೀತ್​ ಅವರಿಗೆ ನಾಡಿನ ಅನೇಕ ಹಿರಿಯರು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಅವರನ್ನು ಸ್ಮರಿಸಿ ತಮ್ಮ ಅನುಭವ, ಒಡನಾಟ ಹಂಚಿಕೊಂಡಿದ್ದಾರೆ. ಟಿವಿ9 ಜೊತೆ ಮಾತನಾಡುತ್ತಾ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸ್ಮರಿಸಿದ್ದಾರೆ. ಕೊವಿಡ್ ಸಂದರ್ಭದಲ್ಲಿ 50 ಲಕ್ಷ ರೂ. ನೆರವು ನೀಡಿದ್ದರು. ಚಿತ್ರರಂಗದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಗೆ ಬಂದಿದ್ದರು. ನಾನು ಸಿಎಂ ಆಗಿದ್ದಾಗ ಪುನೀತ್ 2 ಬಾರಿ ಭೇಟಿಯಾಗಿದ್ರು. ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಪುನೀತ್​ಗೆ ಹೇಳಿದ್ದೆ. ನಟ ಪುನೀತ್‌ರನ್ನು ಕಳೆದುಕೊಂಡು ಕರುನಾಡು ಬಡವಾಗಿದೆ. ಪುನೀತ್ ನಿಧನದ ನೋವು ಭರಿಸುವ ಶಕ್ತಿ ದೇವರು ಅವರ ಕುಟುಂಬಸ್ಥರಿಗೆ ನೀಡಲಿ. ನಟ ಪುನೀತ್ ಸಿನಿಮಾಗಳನ್ನು ಎರಡೆರಡು ಬಾರಿ ನೋಡಿದ್ದೆ. ರಾಜ್‌ಕುಮಾರ್‌ರಂತೆ ಪುನೀತ್‌ರದ್ದು ಒಳ್ಳೆಯ ಆದರ್ಶ ವ್ಯಕ್ತಿತ್ವ ಬಡವರ ಬಗ್ಗೆ ಪುನೀತ್‌ ರಾಜ್​ಕುಮಾರ್​ ಕಾಳಜಿ ಹೊಂದಿದ್ದರು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಇದಕ್ಕೂ ಮುನ್ನ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್​ ಮಾಡಿ ಹೀಗೆ ಸಂತಾಪ ಸಲ್ಲಿಸಿದ್ದಾರೆ:

ನಾಡಿನ ಜನಪ್ರಿಯ ಕಲಾವಿದ,ಡಾ.ರಾಜ್ ವಂಶದ ಕುಡಿ ಪುನೀತ್ ರಾಜಕುಮಾರ್ ಹಠಾತ್ ನಿಧನರಾದ ವಿಷಯ ದಿಗ್ಭ್ರಮೆ ಮೂಡಿಸಿದೆ. ಕಿರುವಯಸ್ಸಿನಲ್ಲೇ ಅವರು ನಮ್ಮನ್ನು ಅಗಲಿದ್ದು ತೀವ್ರ ಆಘಾತ ತಂದಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ ಅವರ ಕುಟುಂಬ, ಅಪಾರ ಅಭಿಮಾನಿಗಳಿಗೆ ಆಘಾತವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಅಣ್ಣಾವ್ರ ಜೊತೆ ಬಾಲ ಕಲಾವಿದರಾಗಿ ಭಕ್ತ ಪ್ರಹ್ಲಾದ, ಚಲಿಸುವ ಮೋಡಗಳು ಸೇರಿದಂತೆ ಹಲವು ಚಿತ್ರಗಳಲ್ಲಿ ಅವರ ಅಭಿನಯ, ಬೆಟ್ಟದ ಹೂವು, ನಟಸಾರ್ವಭೌಮ ಮೊದಲಾದ ಅನೇಕ ಯಶಸ್ವಿ ಚಿತ್ರಗಳ ಮೂಲಕ ಕನ್ನಡಿಗರ ಹೃದಯದಲ್ಲಿ ಚಿರಸ್ಥಾನ ಪಡೆದ ಅಭಿಮಾನಿಗಳ ಪ್ರೀತಿಯ ಅಪ್ಪು ಅಮರರಾಗಿಯೇ ಉಳಿಯಲಿದ್ದಾರೆ. ನಿಮ್ಮ ನೆನಪು ಚಿರಾಯು ಪುನೀತ್. ಓಂ ಶಾಂತಿ

(puneeth rajkumar death former chief minister BS Yediyurappa Condolence with tv9 kannada)