AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puneeth Rajkumar last rites: ಪುನೀತ್​ ರಾಜ್​ ಕುಮಾರ್ ಅಂತ್ಯಕ್ರಿಯೆ ಭಾನುವಾರ ಫಾರ್ಮ್​ ಹೌಸ್​ನಲ್ಲಿ ನಡೆಯುವ ಸಾಧ್ಯತೆ

ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಗ್ರಾಮದ ಬಳಿ ಒಟ್ಟು 13 ಎಕರೆ 8 ಗುಂಟೆ ಜಮೀನಿನಲ್ಲಿ ಪುನೀತ್ ಫಾರ್ಮ್ ಹೌಸ್ ಇದೆ. 1973 ರಲ್ಲಿ ಡಾ. ರಾಜಕುಮಾರ್ ಈ ಜಮೀನನ್ನು ಖರೀಸಿದ್ದರು. ಇದೇ ಪುನೀತ್ ಫಾರ್ಮ್ ​ಹೌಸ್​ನಲ್ಲಿ ಭಾನುವಾರ ಪುನೀತ್​ ರಾಜ್​ಉಮಾರ್​ ಅವರ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ.

Puneeth Rajkumar last rites: ಪುನೀತ್​ ರಾಜ್​ ಕುಮಾರ್ ಅಂತ್ಯಕ್ರಿಯೆ ಭಾನುವಾರ ಫಾರ್ಮ್​ ಹೌಸ್​ನಲ್ಲಿ ನಡೆಯುವ ಸಾಧ್ಯತೆ
ಪುನೀತ್​ ರಾಜ್​ ಕುಮಾರ್
TV9 Web
| Edited By: |

Updated on:Oct 29, 2021 | 6:41 PM

Share

ಬೆಂಗಳೂರು: ಯಾರೂ ಕನಸುಮನಸಿನಲೂ ಊಹಿಸದ ರೀತಿಯಲಿ ಇಂದು ಬೆಳಗ್ಗೆ ವಿಧಿವಶರಾದ ಯುವ ನಟ ಪುನೀತ್​ ರಾಜ್​ ಕುಮಾರ್ (46) ಅವರ ಅಂತ್ಯಕ್ರಿಯೆ ಭಾನುವಾರ ನಡೆಯುವ ಸಾಧ್ಯತೆಗಳಿವೆ. ಪುನೀತ್​ ಅವರ ದೊಡ್ಡ ಮಗಳು ಅಮೆರಿಕಾದಿಂದ ಬರಬೇಕಾಗಿದೆ. ಈ ಮಧ್ಯೆ, ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಬಳಿಯ ಪುನೀತ್ ಫಾರ್ಮ್​ಹೌಸ್​ನಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪುನೀತ್ ಫಾರ್ಮ್​​ಹೌಸ್​ಗೆ ಸರ್ಕಾರ ಉನ್ನತ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ದೊಡ್ಮನೆ ಕುಟುಂಬ ಪುನೀತ್​ ರಾಜ್​ ಕುಮಾರ್ ಅವರ ಅಂತ್ಯಕ್ರಿಯೆ ಎಲ್ಲಿ ನಡೆಸಬೇಕು ಎಂಬುದರ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ರಾಮನಗರ ಎಸ್ ಪಿ ಗಿರೀಶ್, ಜಿಲ್ಲಾಧಿಕಾರಿ‌ ಡಾ. ರಾಕೇಶ್ ಕುಮಾರ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಪುನೀತ್ ಫಾರ್ಮ್ ಹೌಸ್ ಗೆ ಭೇಟಿ ನೀಡಿ, ಅಪ್ಪು ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಹಿನ್ನೆಲೆ ಅಧಿಕಾರಿಗಳ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಗ್ರಾಮದ ಬಳಿ ಒಟ್ಟು 13 ಎಕರೆ 8 ಗುಂಟೆ ಜಮೀನಿನಲ್ಲಿ ಪುನೀತ್ ಫಾರ್ಮ್ ಹೌಸ್ ಇದೆ. 1973 ರಲ್ಲಿ ಡಾ. ರಾಜಕುಮಾರ್ ಈ ಜಮೀನನ್ನು ಖರೀಸಿದ್ದರು. ರಾಜಕುಮಾರ್ ನಿಧನದ ನಂತರ ಪಾರ್ವತಮ್ಮ ಅವರಿಗೆ ಜಮೀನಿನ ಪೌತಿ ಖಾತೆ ಆಗಿತ್ತು. ಆನಂತರ ಎರಡು ವರ್ಷದ ಕೆಳಗೆ ಕುಟುಂಬದ ಐದು ಜನರಿಗೆ ಆ ಜಮೀನು ಭಾಗವಾಗಿತ್ತು. ಪುನೀತ್ ಅವರ ಹೆಸರಿಗೆ ಎರಡು ಎಕರೆ ಜಮೀನು ಇದೆ. ಪುನೀತ್ ಅಲ್ಲಿ ಎರಡು ಎಕರೆ ಜಾಗದಲ್ಲಿ ಡಾ.ರಾಜಕುಮಾರ್ ಶಾಲೆ ಆರಂಭಿಸಬೇಕೆಂಬ ಕನಸು ಕಂಡಿದ್ದರು. ಪುನೀತ್ ಆಗಾಗ ಫಾರ್ಮ್ ಗೆ ಬಂದು ಹೋಗುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

Also Read: Puneeth Rajkumar Death: ಯುವ ನಟ ಪುನೀತ್​ ರಾಜ್​ ಕುಮಾರ್ ಅಕಾಲಿಕ ನಿಧನ -ಎರಡು ದಿನ ಜಿಮ್ ಸೆಂಟರ್​​ಗಳು ಬಂದ್

Puneeth Rajkumar Death Live: ನಟ ಪುನೀತ್ ರಾಜಕುಮಾರ್ ಇನ್ನಿಲ್ಲ

Puneeth Rajkumar: ಪುನೀತ್‌ ರಾಜಕುಮಾರ್‌ ಅಣ್ಣನ ರೀತಿ ಇದ್ರು: ನಿಖಿಲ್‌ ಕುಮಾರಸ್ವಾಮಿ|Tv9Kannada

(puneeth rajkumar death last rites to be performed at puneeth farm house near ramnagar)

Published On - 4:22 pm, Fri, 29 October 21

Follow Us
ಬಬಲಾದಿ ಮಠದ ಕಾಲಜ್ಞಾನ ನಿಜವಾಯಿತೇ?
ಬಬಲಾದಿ ಮಠದ ಕಾಲಜ್ಞಾನ ನಿಜವಾಯಿತೇ?
ರಶ್ಮಿಕಾ-ವಿಜಯ್ ಫ್ಯಾನ್ಸ್​​ಗೆ ಕೊಟ್ಟ ಸ್ವೀಟ್ ಬಾಕ್ಸ್ ಅಲ್ಲಿ ಏನೆಲ್ಲ ಇದೆ?
ರಶ್ಮಿಕಾ-ವಿಜಯ್ ಫ್ಯಾನ್ಸ್​​ಗೆ ಕೊಟ್ಟ ಸ್ವೀಟ್ ಬಾಕ್ಸ್ ಅಲ್ಲಿ ಏನೆಲ್ಲ ಇದೆ?
ಕಾರಿಗೆ ಡಿಕ್ಕಿ ಹೊಡೆದು 1.5 ಕಿ.ಮೀ ಎಳೆದೊಯ್ದ ಟ್ರಕ್
ಕಾರಿಗೆ ಡಿಕ್ಕಿ ಹೊಡೆದು 1.5 ಕಿ.ಮೀ ಎಳೆದೊಯ್ದ ಟ್ರಕ್
2ನೇ ಇನ್ನಿಂಗ್ಸ್​ಗೂ ಮುನ್ನ ಮಾರಿಕಾಂಬಾ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ
2ನೇ ಇನ್ನಿಂಗ್ಸ್​ಗೂ ಮುನ್ನ ಮಾರಿಕಾಂಬಾ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ
ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ
ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ
ಆನೇಕಲ್: ರೈಲು ಹಳಿಯ ಮೇಲೆಯೇ ಕೆಟ್ಟು ನಿಂತ BMTC ಬಸ್, ಆಮೇಲೇನಾಯ್ತು ನೋಡಿ
ಆನೇಕಲ್: ರೈಲು ಹಳಿಯ ಮೇಲೆಯೇ ಕೆಟ್ಟು ನಿಂತ BMTC ಬಸ್, ಆಮೇಲೇನಾಯ್ತು ನೋಡಿ
ತಮ್ಮ ವಿವಾಹದ ಬಳಿಕ ಮತ್ತೊದು ಮದುವೆಗೆ ಹಾಜರಿ ಹಾಕಿದ ವಿಜಯ್-ರಶ್ಮಿಕಾ
ತಮ್ಮ ವಿವಾಹದ ಬಳಿಕ ಮತ್ತೊದು ಮದುವೆಗೆ ಹಾಜರಿ ಹಾಕಿದ ವಿಜಯ್-ರಶ್ಮಿಕಾ
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ