14 ದಿನ ಅಲ್ಲ, 7 ದಿನ.. ವಿದೇಶದಿಂದ ಬರುವವರ ಕ್ವಾರಂಟೈನ್ ಅವಧಿ ಕಡಿತ

ಬೆಂಗಳೂರು: ವಿದೇಶದಿಂದ ಬಂದವರಿಗೆ ತಮ್ಮ ಮನೆಗಳಿಗೆ ಹೋಗಲು ಬಿಡದೆ ಹೋಟೆಲ್​ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ ಅನೇಕ ವಿದೇಶಿಗಳು ಈ ವ್ಯವಸ್ಥೆಗೆ ಒಪ್ಪುತಿಲ್ಲ. ಕ್ವಾರಂಟೈನ್​ಗೆ ಹೋಗಲು ಆಸ್ತಿ ತೋರಿಸುತ್ತಿಲ್ಲ. ಅನೇಕ ಕಡೆ ಈ ಬಗ್ಗೆ ವಿದೇಶಿಗಳು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿಗಳಾಗಿವೆ. ಈ ಬೆನ್ನಲ್ಲೆ ವಿದೇಶದಿಂದ ಬರುವವರ ಕ್ವಾರಂಟೈನ್ ಅವಧಿಯನ್ನು ಕಡಿತ ಮಾಡಲಾಗಿದೆ. 14 ದಿನಗಳ ಬದಲಿಗೆ 7 ದಿನ ಮಾತ್ರ ಸಾಂಸ್ಥಿಕ ಕ್ವಾರಂಟೈನ್​ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ. 7ದಿನ ಸಾಂಸ್ಥಿಕ […]

14 ದಿನ ಅಲ್ಲ, 7 ದಿನ.. ವಿದೇಶದಿಂದ ಬರುವವರ ಕ್ವಾರಂಟೈನ್ ಅವಧಿ ಕಡಿತ
ಆಯೇಷಾ ಬಾನು

Updated on: May 27, 2020 | 1:53 PM

ಬೆಂಗಳೂರು: ವಿದೇಶದಿಂದ ಬಂದವರಿಗೆ ತಮ್ಮ ಮನೆಗಳಿಗೆ ಹೋಗಲು ಬಿಡದೆ ಹೋಟೆಲ್​ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ ಅನೇಕ ವಿದೇಶಿಗಳು ಈ ವ್ಯವಸ್ಥೆಗೆ ಒಪ್ಪುತಿಲ್ಲ. ಕ್ವಾರಂಟೈನ್​ಗೆ ಹೋಗಲು ಆಸ್ತಿ ತೋರಿಸುತ್ತಿಲ್ಲ. ಅನೇಕ ಕಡೆ ಈ ಬಗ್ಗೆ ವಿದೇಶಿಗಳು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿಗಳಾಗಿವೆ.

ಈ ಬೆನ್ನಲ್ಲೆ ವಿದೇಶದಿಂದ ಬರುವವರ ಕ್ವಾರಂಟೈನ್ ಅವಧಿಯನ್ನು ಕಡಿತ ಮಾಡಲಾಗಿದೆ. 14 ದಿನಗಳ ಬದಲಿಗೆ 7 ದಿನ ಮಾತ್ರ ಸಾಂಸ್ಥಿಕ ಕ್ವಾರಂಟೈನ್​ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ.

7ದಿನ ಸಾಂಸ್ಥಿಕ ಕ್ವಾರಂಟೈನ್​ ಬಳಿಕ ಉಳಿದ 7ದಿನ ಹೋಂ ಕ್ವಾರಂಟೈನ್​ನಲ್ಲಿರ ಬೇಕು. ಹೋಟೆಲ್​ನಲ್ಲಿ 7 ದಿನ ಕ್ವಾರಂಟೈನ್ ಪೂರೈಸಿದ ಬಳಿಕ ಸೂಕ್ತ ಮಾರ್ಗದರ್ಶನ ಪಡೆದು ವೈದ್ಯರ ಸಲಹೆಯೊಂದಿಗೆ ಹೋಂ ಕ್ವಾರಂಟೈನ್​ಗೆ ಅವಕಾಶ ನೀಡಲಾಗಿದೆ. 14 ದಿನಗಳ ಹೋಟೆಲ್​ ಕ್ವಾರಂಟೈನ್​ಗಾಗಿ ಮುಂಗಡವಾಗಿ ಪಾವತಿಸಿದ ಹಣ ವಾಪಾಸ್ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.

Published On - 7:35 am, Wed, 27 May 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us