ಜನ್ಮ ದಿನದಂದೇ ಕ್ವಾರಂಟೈನ್​ನಲ್ಲಿದ್ದ ವೃದ್ಧ ಹೃದಯಾಘಾತಕ್ಕೆ ಬಲಿ

|

Updated on: Apr 27, 2020 | 12:54 PM

ಬೆಂಗಳೂರು: ಹುಟ್ಟಹಬ್ಬದ ದಿನವೇ ಕ್ವಾರಂಟೈನ್​ನಲ್ಲಿದ್ದ ವೃದ್ಧ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೆಂಗಳೂರಿನ ವಿಜಯನಗರದಲ್ಲಿ ನಡೆದಿದೆ. ಕೊರೊನಾ ಶಂಕೆ ಹಿನ್ನೆಲೆಯಲ್ಲಿ ವಿಜಯನಗರದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಗಾಯತ್ರಿ ನಗರದ ನಿರಾಶ್ರಿತರಾಗಿದ್ದ 68 ವರ್ಷದ ವೃದ್ಧ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಸಾವಿಗೂ ಮುನ್ನ ಬೆಳಗ್ಗೆ ಕೇಂದ್ರದ ವಾರ್ಡನ್​ಗೆ ಇಂದು ನನ್ನ ಹುಟ್ಟಿದ ಹಬ್ಬವಿದೆ ಪೂರಿ ಮಾಡಿಕೊಡಿ ಎಂದು ಅವರು ಕೇಳಿಕೊಂಡಿದ್ದರು. ನಂತರ ಸಂಜೆ ಕೇಕ್ ಕತ್ತರಿಸಿ ಎಲ್ಲರಿಗೂ ಕೇಕ್ ಕೊಡುವುದಾಗಿ ಹೇಳಿದ್ದರು. ಆದರೆ ಹೇಳಿದ ಕೆಲವೇ ಗಂಟೆಗಳಲ್ಲಿ ಅಸುನೀಗಿದ್ದಾರೆ. ಕ್ವಾರಂಟೈನ್​ನಲ್ಲೇ ಅನಾಥವಾಗಿ ಬಿದ್ದಿರುವ […]

ಜನ್ಮ ದಿನದಂದೇ ಕ್ವಾರಂಟೈನ್​ನಲ್ಲಿದ್ದ ವೃದ್ಧ ಹೃದಯಾಘಾತಕ್ಕೆ ಬಲಿ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಹುಟ್ಟಹಬ್ಬದ ದಿನವೇ ಕ್ವಾರಂಟೈನ್​ನಲ್ಲಿದ್ದ ವೃದ್ಧ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೆಂಗಳೂರಿನ ವಿಜಯನಗರದಲ್ಲಿ ನಡೆದಿದೆ. ಕೊರೊನಾ ಶಂಕೆ ಹಿನ್ನೆಲೆಯಲ್ಲಿ ವಿಜಯನಗರದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಗಾಯತ್ರಿ ನಗರದ ನಿರಾಶ್ರಿತರಾಗಿದ್ದ 68 ವರ್ಷದ ವೃದ್ಧ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

ಸಾವಿಗೂ ಮುನ್ನ ಬೆಳಗ್ಗೆ ಕೇಂದ್ರದ ವಾರ್ಡನ್​ಗೆ ಇಂದು ನನ್ನ ಹುಟ್ಟಿದ ಹಬ್ಬವಿದೆ ಪೂರಿ ಮಾಡಿಕೊಡಿ ಎಂದು ಅವರು ಕೇಳಿಕೊಂಡಿದ್ದರು. ನಂತರ ಸಂಜೆ ಕೇಕ್ ಕತ್ತರಿಸಿ ಎಲ್ಲರಿಗೂ ಕೇಕ್ ಕೊಡುವುದಾಗಿ ಹೇಳಿದ್ದರು. ಆದರೆ ಹೇಳಿದ ಕೆಲವೇ ಗಂಟೆಗಳಲ್ಲಿ ಅಸುನೀಗಿದ್ದಾರೆ.

ಕ್ವಾರಂಟೈನ್​ನಲ್ಲೇ ಅನಾಥವಾಗಿ ಬಿದ್ದಿರುವ ಮೃತದೇಹ:
ಹೃದಯಾಘಾತದಿಂದ ಮೃತಪಟ್ಟ ವೃದ್ಧನ ಮೃತದೇಹ ಕ್ವಾರಂಟೈನ್ ಕೇಂದ್ರದಲ್ಲೇ ಅನಾಥವಾಗಿ ಬಿದ್ದಿದೆ. ಮೃತದೇಹವನ್ನು ಈವರೆಗೆ ಯಾರು ತೆಗೆದುಕೊಂಡು ಹೋಗಿಲ್ಲ. ಇನ್ನೂ ಸ್ಥಳಕ್ಕೆ ಪೊಲೀಸರು, ಅಧಿಕಾರಿಗಳು ಭೇಟಿ ನೀಡಿಲ್ಲ. ಕ್ವಾರಂಟೈನ್ ಕೇಂದ್ರದಲ್ಲಿ ಸುಮಾರು 30ರಿಂದ 40 ಜನರಿದ್ದಾರೆ. 2 ಗಂಟೆಗಳಿಂದ ಅಧಿಕಾರಿಗಳಿಗೆ ಕಾಲ್ ಮಾಡಿದ್ರೂ ಪ್ರತಿಕ್ರಿಯಿಸುತ್ತಿಲ್ಲ.

Published On - 12:29 pm, Mon, 27 April 20