‘ರಾಜ್ಯದಲ್ಲಿ ಭಾರಿ ಮಳೆ ಹಿನ್ನೆಲೆ; ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮುನ್ನೆಚ್ಚರಿಕೆ ವಹಿಸಲು ಸೂಚನೆ’: ಸಚಿವ ಆರ್.ಅಶೋಕ್

| Updated By: shivaprasad.hs

Updated on: Oct 21, 2021 | 4:19 PM

R Ashok: ರಾಜ್ಯದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವ ಕಾರಣ ಜಿಲ್ಲಾಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

‘ರಾಜ್ಯದಲ್ಲಿ ಭಾರಿ ಮಳೆ ಹಿನ್ನೆಲೆ; ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮುನ್ನೆಚ್ಚರಿಕೆ ವಹಿಸಲು ಸೂಚನೆ’: ಸಚಿವ ಆರ್.ಅಶೋಕ್
ಆರ್ ಅಶೋಕ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭೂಕುಸಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್​.ಅಶೋಕ್ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಭಾರಿ ಮಳೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ್ದೇವೆ. ಏನೇ ಸವಾಲು ಎದುರಾದರೂ ಸಮರ್ಥವಾಗಿ ನಿಭಾಯಿಸುತ್ತೇವೆ ಎಂದು ಅವರು ನುಡಿದಿದ್ದಾರೆ. ಕೇರಳ ರಾಜ್ಯಕ್ಕೆ ಸಹಾಯಹಸ್ತ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕೇರಳದ ನೆರೆ ಸಂತ್ರಸ್ತರಿಗೆ ಅಗತ್ಯವಸ್ತುಗಳನ್ನು ಪೂರೈಸುತ್ತೇವೆ. ಶಾಸಕ ಸತೀಶ್ ರೆಡ್ಡಿ ಅದರ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದು ಆರ್.ಅಶೋಕ್ ಮಾಹಿತಿ ನೀಡಿದ್ದಾರೆ.

ಕಲಬುರಗಿಯಲ್ಲಿ ಆಗುತ್ತಿರುವ ಭೂಕಂಪದ ಕುರಿತು ಮಾತನಾಡಿರುವ ಅಶೋಕ್, ‘‘ಭೂಮಿಯ ಕೆಳ ಪದರದಲ್ಲಿ ಸುಣ್ಣದ ಅಂಶ ಹೆಚ್ಚಾಗಿದೆ. ಹೀಗಾಗಿ ಕಲಬುರಗಿಯಲ್ಲಿ ಪದೇಪದೆ ಭೂಕಂಪವಾಗುತ್ತಿದೆ. ಇದರಿಂದ ಸಮಸ್ಯೆಯಾಗಲ್ಲ ಎಂದು ವರದಿ ನೀಡಿದ್ದಾರೆ. ವಾರದ ಬಳಿಕ ವರದಿಯಲ್ಲಿ ಸಂಪೂರ್ಣ ಮಾಹಿತಿ ಬರಲಿದ್ದು, ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ’’ ಎಂದಿದ್ದಾರೆ. ‘‘ಉತ್ತರಾಖಂಡ್‌ನಲ್ಲಿ 96 ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಎಲ್ಲರನ್ನು ರಾಜ್ಯಕ್ಕೆ ಕರೆತರುವ ಕೆಲಸ ಮಾಡುತ್ತಿದ್ದೇವೆ ಎಂದು ಇದೇ ವೇಳೆ ಬೆಂಗಳೂರಿನಲ್ಲಿ ಕಂದಾಯ ಸಚಿವ ಅಶೋಕ್ ನುಡಿದಿದ್ದಾರೆ.

ಡಿಕೆಶಿ ಹೇಳಿಕೆಗೆ ರಾಜ್ಯ ಬಿಜೆಪಿಯಿಂದ ಟ್ವಿಟರ್​​ನಲ್ಲೇ ಟಾಂಗ್:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ರಾಜ್ಯ ಬಿಜೆಪಿ ಟ್ವಿಟರ್​ನಲ್ಲಿ ಟಾಂಗ್ ನೀಡಿದೆ. ‘‘ಬಿಜೆಪಿ ನೋಟು, ಕಾಂಗ್ರೆಸ್‌ಗೆ ವೋಟುʼ ಎಂಬ ಘೋಷಣೆಯ ಮೂಲಕ ಡಿ.ಕೆ. ಶಿವಕುಮಾರ್ ಅವರು ಜನತೆಗೆ ಯಾವ ಸಂದೇಶ ನೀಡಲು ಹೊರಟಿದ್ದಾರೆ? ಈ ಹಿಂದೆ ನೀವು ಚಾಮರಾಜನಗರ, ಗುಂಡ್ಲುಪೇಟೆ ಉಪಚುನಾವಣೆಗಳನ್ನು ನೋಟು ಹಂಚಿಕೆ ಮಾಡಿ ಗೆದ್ದಿದ್ದೇ? ಮತದಾರರ ಮನಸ್ಸನ್ನು ಹಣದ ಮೂಲಕ ಭ್ರಷ್ಟಗೊಳಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದ್ದೇ ಕಾಂಗ್ರೆಸ್. ಮಾನ್ಯ ಡಿ.ಕೆ. ಶಿವಕುಮಾರ್ ಅವರೇ ಅದು ಯಾಕೆ ಆಯ್ತು, ಇದು ಯಾಕೆ ಆಯ್ತು ಎಂದು ಬೊಬ್ಬೆ ಹೊಡೆದು ದೇಹಕ್ಕೆ ಆಯಾಸ ಮಾಡಿಕೊಳ್ಳಬೇಡಿ.ನೀವು ಸಂಪಾದನೆ ಮಾಡಿದ ಕಪ್ಪು ಹಣವೆಷ್ಟು? ನಿಮ್ಮ ಬಂಧನ ಹಾಗೂ ತಿಹಾರ್‌ ಜೈಲು ಯಾತ್ರೆಯ ಹಿನ್ನೆಲೆ ಏನು?’’ ಎಂದು ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ.

ಧಾರವಾಡದಲ್ಲಿ RSS ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್:
ಧಾರವಾಡದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಅಕ್ಟೋಬರ್ 28ರಿಂದ 3 ದಿನ RSS ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್ ನಡೆಯಲಿದೆ. ಸರಸಂಘ ಚಾಲಕ ಡಾ.ಮೋಹನ್ ಭಾಗವತ್ ಸೇರಿದಂತೆ ವಿವಿಧ ರಾಜ್ಯಗಳ 350 ಪ್ರತಿನಿಧಿಗಳು ಬೈಠಕ್‌ನಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ:

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹುಡುಗಿಯರಿಗೆ ಸ್ಕೂಟರ್​​, ಸ್ಮಾರ್ಟ್​ಫೋನ್​: ಪ್ರಿಯಾಂಕಾ ಗಾಂಧಿ ಭರವಸೆ

ಬಾಂಗ್ಲಾದೇಶ ಹಿಂಸಾಚಾರವನ್ನು ಪ್ರಚೋದಿಸಿದ ‘ಧರ್ಮ ನಿಂದನೆ’ ಘಟನೆಗೆ ಕಾರಣವಾದ  ವ್ಯಕ್ತಿಯನ್ನು ಗುರುತಿಸಿದ ಪೊಲೀಸ್

ಖ್ಯಾತ ನಿರ್ದೇಶಕ ಶಂಕರ್​ ಅಳಿಯನಿಂದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ? ಮದುವೆಯಾಗಿ ನಾಲ್ಕೇ ತಿಂಗಳಿಗೆ ಸಂಸಾರದಲ್ಲಿ ಬಿರುಗಾಳಿ

Published On - 3:15 pm, Thu, 21 October 21