ಖ್ಯಾತ ನಿರ್ದೇಶಕ ಶಂಕರ್ ಅಳಿಯನಿಂದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ? ಮದುವೆಯಾಗಿ ನಾಲ್ಕೇ ತಿಂಗಳಿಗೆ ಸಂಸಾರದಲ್ಲಿ ಬಿರುಗಾಳಿ
ರೋಹಿತ್ ತಂದೆ ದಾಮೋದರನ್ ಉದ್ಯಮಿ. ಟಿಎನ್ಪಿಎಲ್ನಲ್ಲಿರುವ ‘ಮಧುರೈ ಪ್ಯಾಂಥರ್ಸ್’ ಫ್ರಾಂಚೈಸಿ ಒಡೆತನವನ್ನು ದಾಮೋದರನ್ ಹೊಂದಿದ್ದಾರೆ. ರೋಹಿತ್ ಈ ತಂಡವನ್ನು ಮುನ್ನಡೆಸುತ್ತಿದ್ದಾರೆ.
ರಜನಿಕಾಂತ್ ನಟನೆಯ ‘ಎಂದಿರನ್’, ಕಮಲ್ ಹಾಸನ್ ಅಭಿನಯದ ‘ಇಂಡಿಯನ್’ ಮುಂತಾದ ಹಿಟ್ ಚಿತ್ರಗಳನ್ನು ನೀಡಿದ ಎಸ್.ಶಂಕರ್ ಮಗಳು ಐಶ್ವರ್ಯಾ ಇತ್ತೀಚೆಗೆ ಹಸೆಮಣೆ ಏರಿದ್ದರು. ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್ಪಿಎಲ್) ಆಟಗಾರ ರೋಹಿತ್ ದಾಮೋದರನ್ ಅವರನ್ನು ಜೂನ್ 27ರಂದು ಐಶ್ವರ್ಯಾ ಅವರು ಮಹಾಬಲಿಪುರಂನಲ್ಲಿ ವರಿಸಿದ್ದರು. ಆದರೆ, ಮದುವೆಯಾಗಿ ಕೆಲವೇ ತಿಂಗಳಲ್ಲಿ ಶಂಕರ್ ಕುಟುಂಬಕ್ಕೆ ಶಾಕ್ ಒಂದು ಎದುರಾಗಿದೆ. ರೋಹಿತ್ ವಿರುದ್ಧ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಾಖಲಾಗಿದೆ.
ರೋಹಿತ್ ತಂದೆ ದಾಮೋದರನ್ ಉದ್ಯಮಿ. ಟಿಎನ್ಪಿಎಲ್ನಲ್ಲಿರುವ ‘ಮಧುರೈ ಪ್ಯಾಂಥರ್ಸ್’ ಫ್ರಾಂಚೈಸಿ ಒಡೆತನವನ್ನು ದಾಮೋದರನ್ ಹೊಂದಿದ್ದಾರೆ. ರೋಹಿತ್ ಈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಐಶ್ವರ್ಯಾ ವೃತ್ತಿಯಲ್ಲಿ ವೈದ್ಯೆ. ಆಪ್ತರ ಸಮ್ಮುಖದಲ್ಲಿ ರೋಹಿತ್-ಐಶ್ವರ್ಯಾ ಮದುವೆ ನಡೆದಿತ್ತು. ಇದಕ್ಕೆ ಅನೇಕ ಸ್ಟಾರ್ಗಳು ಹಾಜರಿ ಹಾಕಿದ್ದರು. ಆದರೆ, ಈಗ ಇವರ ಸಂಸಾರದಲ್ಲಿ ಬಿರುಗಾಳಿ ಬೀಸಿದೆ.
16 ವರ್ಷದ ಬಾಲಕಿ ಕೋಚಿಂಗ್ ಪಡೆಯೋಕೆ ಹೋಗಿದ್ದರು. ಈ ವೇಳೆ ಅವರಿಗೆ ಲೈಂಗಿಕ ಕಿರುಕುಳ ಆಗಿದೆ. ‘ಮಧುರೈ ಪ್ಯಾಂಥರ್ಸ್’ ಫ್ರಾಂಚೈಸಿ ಕೋಚ್ ತಮಾರಾಯ್ಕಣ್ಣನ್ ಮತ್ತು ಇತರರ ವಿರುದ್ಧ ಸಂತ್ರಸ್ತೆ ಮ್ಯಾನೇಜ್ಮೆಂಟ್ಗೆ ದೂರು ದಾಖಲು ಮಾಡಿದ್ದರು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಹಿನ್ನೆಲೆಯಲ್ಲಿ ಸಂತ್ರಸ್ತೆ ಪುದುಚೇರಿ ಮಕ್ಕಳ ಕಲ್ಯಾಣ ಸಮಿತಿಗೆ ದೂರು ದಾಖಲು ಮಾಡಿದರು. ಈ ದೂರು ಆಧರಿಸಿ ತಮಾರಾಯ್ಕಣ್ಣನ್, ದಾಮೋದರನ್ ಮತ್ತು ರೋಹಿತ್ ವಿರುದ್ಧವೂ ಕೇಸ್ ದಾಖಲಾಗಿದೆ. ತನಿಖೆ ನಂತರ ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ತಿಳಿಯಲಿದೆ.
1993ರಲ್ಲಿ ತೆರೆಗೆ ಬಂದ ‘ಜಂಟಲ್ಮ್ಯಾನ್’ ಸಿನಿಮಾ ಮೂಲಕ ಶಂಕರ್ ನಿರ್ದೇಶನಕ್ಕೆ ಕಾಲಿಟ್ಟರು. ವೃತ್ತಿಜೀವನದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗಿದೆ. 2010ರಲ್ಲಿ ತೆರೆಗೆ ಬಂದ ‘ಎಂದಿರನ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಸದ್ಯ, ಅವರು ‘ಇಂಡಿಯನ್ 2’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಕಮಲ್ ಹಾಸನ್ ಈ ಚಿತ್ರದ ನಾಯಕ. ‘ಇಂಡಿಯನ್’ ಚಿತ್ರದ ಮುಂದಿನ ಭಾಗ ಇದಾಗಿದೆ.
ಇದನ್ನೂ ಓದಿ: ‘ರಮ್ಯಾ ಕೇವಲ ವಿಶ್ ಮಾಡೋದಲ್ಲ, ನಮ್ಮ ಜತೆ ಸಿನಿಮಾ ಮಾಡಬೇಕು’; ಮನದಾಳದ ಮಾತು ಹೇಳಿಕೊಂಡ ಧನಂಜಯ