ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ (Basavaraj Horatti) ರಾಜೀನಾಮೆ ಘೋಷಿಸಿ ಬಿಜೆಪಿ ಸೇರುವ ಬಗ್ಗೆ ಮೇ 16ರಂದು ಬಹಿರಂಗಪಡಿಸಿದ್ದರು. ಸದ್ಯ ಖಾಲಿಯಾದ ಸಭಾಪತಿ ಸ್ಥಾನಕ್ಕೆ ರಘುನಾಥ್ ರಾವ್ ಮಲ್ಕಾಪುರೆ(Raghunatha Rao Malkapure) ಆಯ್ಕೆಯಾಗಿದ್ದಾರೆ. ವಿಧಾನ ಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ರಾವ್ ಮಲ್ಕಾಪುರೆ ವಿಧಾನಸೌಧದ ಸಭಾಪತಿ ಕೊಠಡಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ವಿಧಾನಪರಿಷತ್‌ನ ಕಾರ್ಯದರ್ಶಿ ಮಹಾಲಕ್ಷ್ಮೀ, ಅಧಿಕಾರಿಗಳು ಹಂಗಾಮಿ ಸಭಾಪತಿರನ್ನು ಸ್ವಾಗತಿಸಿದ್ರು.
ಹೊರಟ್ಟಿ ರಾಜೀನಾಮೆ ಅಂಗೀಕರಿಸಿದ ಹಂಗಾಮಿ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ
ವಿಧಾನಸೌಧದ ಸಭಾಪತಿ ಕೊಠಡಿಯಲ್ಲಿ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ ಸಲ್ಲಿಸಿದ್ದಾರೆ. ಹಂಗಾಮಿ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆಗೆ ಹೊರಟ್ಟಿ ರಾಜೀನಾಮೆ ಪತ್ರ ಸಲ್ಲಿಸಿದ್ದು ಹಂಗಾಮಿ ಸಭಾಪತಿ ರಾಜೀನಾಮೆ ಅಂಗೀಕರಿಸಿದ್ದಾರೆ.
ಇನ್ನು ಅಧಿಕಾರ ಸ್ವೀಕರಿಸಿ ಮಾತನಾಡಿರುವ ಹಂಗಾಮಿ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ, ಇಂದು ನನ್ನನ್ನು ವಿಧಾನ ಪರಿಷತ್ ಸಭಾಪತಿಯಾಗಿ ಜವಾಬ್ದಾರಿ ನಿರ್ವಹಿಸಲು ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ವಿಧಾನ ಪರಿಷತ್ ನ ಎಲ್ಲಾ ಸದಸ್ಯರ ಸಹಭಾಗಿತ್ವದಿಂದ ಸಹಕಾರದಿಂದ ಸದನವನ್ನು ಪಕ್ಷಾತೀತವಾಗಿ ನಡೆಸಲು ಸಹಕಾರ ಮಾಡುವಂತೆ ಸದಸ್ಯರನ್ನು ವಿನಂತಿ ಮಾಡುತ್ತೇನೆ. ಇದೇ ಹುದ್ದೆಯಲ್ಲಿ ಮುಂದೆ ಮುಂದುವರಿಯುವ ಬಗ್ಗೆ ಈಗಲೇ ಹೇಳುವುದು ತುಂಬಾ ಬೇಗ ಆಗುತ್ತದೆ. ರಾಜ್ಯಪಾಲರ ಮುಂದಿನ ಆದೇಶದವರೆಗೆ ನಾನು ಸಭಾಪತಿ ಹುದ್ದೆಯಲ್ಲಿ ಮುಂದುವರಿಯುತ್ತೇನೆ. ಬಸವರಾಜ ಹೊರಟ್ಟಿಯವರ ರಾಜೀನಾಮೆಯನ್ನು ಅಂಗೀಕರಿಸಿದ್ದೇನೆ. ಸಂಜೆ 4.15ಕ್ಕೆ ರಾಜಭವನದಲ್ಲಿ ರಾಜ್ಯಪಾಲರನ್ನು ಸೌಜನ್ಯದ ಭೇಟಿ ಮಾಡಲಿದ್ದೇನೆ ಎಂದರು.
ರಾಜ್ಯಪಾಲರು ನಾನು ಕೊಟ್ಟ ರಾಜೀನಾಮೆ ಒಪ್ಪಿಕೊಂಡಿದ್ದಾರೆ
ಸಭಾಪತಿ ಸ್ಥಾನಕ್ಕೆ ಕೊಟ್ಟ ರಾಜೀನಾಮೆಯನ್ನ ರಾಜ್ಯಪಾಲರು ಒಪ್ಪಿಕೊಂಡಿದ್ದಾರೆ ಎಂದು ಬೆಂಗಳೂರಿನಲ್ಲಿ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ರಾಜ್ಯಪಾಲರು ನಾನು ಕೊಟ್ಟ ರಾಜೀನಾಮೆ ಒಪ್ಪಿಕೊಂಡಿದ್ದಾರೆ. ಇಂತಹ ಪ್ರಸಂಗ ಇದೇ ಮೊದಲ ಬಾರಿಗೆ ಬಂದಿದೆ. ಅಧ್ಯಕ್ಷರೂ ಇಲ್ಲ, ಉಪಾಧ್ಯಕ್ಷರೂ ಇಲ್ಲ ಹೀಗಾಗಿ ರಾಜ್ಯಪಾಲರು ಹಂಗಾಮಿ ಸಭಾಪತಿಯಾಗಿ ಪರಿಷತ್ಗೆ ಬರುತ್ತಾರೆ. ಹಂಗಾಮಿ ಸಭಾಪತಿಗೆ ಎಂಎಲ್ಸಿ ಸ್ಥಾನದ ರಾಜೀನಾಮೆ ಸಲ್ಲಿಸ್ತ್ತೇನೆ ಎಂದು ಬಸವರಾಜ ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇನ್ನು ಇದೇ ವೇಳೆ ಪಠ್ಯಪುಸ್ತಕದಲ್ಲಿ ಹೆಡಗೇವಾರ್ ಭಾಷಣ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿ ಡಿಎಸ್ಇಆರ್ಟಿ ಕಮಿಟಿ ಏನು ಮಾಡಿದೆ ಮಾಹಿತಿ ಇಲ್ಲ. ಅವರು ಸರ್ಕಾರಕ್ಕೆ ಏನು ರೆಕಮೆಂಡ್ ಮಾಡಿದ್ದಾರೆ ಗೊತ್ತಿಲ್ಲ. ಇದು ಅತ್ಯಂತ ಸೂಕ್ಷ್ಮ ವಿಚಾರ. ಮಾಹಿತಿ ಇಲ್ಲದೆ ಊಹಾಪೋಹಗಳ ಬಗ್ಗೆ ಮಾತನಾಡಬಾರದು. ಶಿಕ್ಷಣ ಸಚಿವರಿಗೆ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲು ಅವಕಾಶ ಇರುತ್ತದೆ. ಅವರು ಬದಲಾವಣೆ ಮಾಡಿ ಕ್ಯಾಬಿನೆಟ್ ಗೆ ತೆಗೆದುಕೊಂಡು ಹೋಗಬೇಕು. ಹೆಡ್ಗೇವಾರ್ ಭಾಷಣ ಸೇರಿಸಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ರು.
Published On - 3:34 pm, Tue, 17 May 22