ರಾಯಚೂರು ನೀರಾವರಿ ಇಲಾಖೆ ಮೇಲೆ ಲೋಕಾಯುಕ್ತ ದಾಳಿ ಕೇಸ್: ಆರೋಗ್ಯ ಸರಿಯಿಲ್ಲವೆಂದು ಆಸ್ಪತ್ರೆಗೆ ದಾಖಲಾದ ಅಧಿಕಾರಿಗಳ ನಾಟಕ ಬಯಲು

ಲೋಕಾಯುಕ್ತ ದಾಳಿ ನಡೆದ ನಂತರ ಆರೋಗ್ಯ ಸರಿಯಿಲ್ಲವೆಂದು ಆಸ್ಪತ್ರೆಗೆ ದಾಖಲಾದ ನೀರಾವರಿ ಇಲಾಖೆಯ ಎಇಗಳ ನಾಟಕ ಬಯಲಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ರಾಯಚೂರು ನೀರಾವರಿ ಇಲಾಖೆ ಮೇಲೆ ಲೋಕಾಯುಕ್ತ ದಾಳಿ ಕೇಸ್: ಆರೋಗ್ಯ ಸರಿಯಿಲ್ಲವೆಂದು ಆಸ್ಪತ್ರೆಗೆ ದಾಖಲಾದ ಅಧಿಕಾರಿಗಳ ನಾಟಕ ಬಯಲು
ನೀರಾವರಿ ಇಲಾಖೆ ಮೇಲೆ ಲೋಕಾಯುಕ್ತ ದಾಳಿ ಕೇಸ್: ಆರೋಗ್ಯ ಸರಿಯಿಲ್ಲವೆಂದು ಆಸ್ಪತ್ರೆಗೆ ದಾಖಲಾದ ಅಧಿಕಾರಿಗಳ ನಾಟಕ ಬಯಲು
Follow us
TV9 Web
| Updated By: Rakesh Nayak Manchi

Updated on:Nov 12, 2022 | 10:03 AM

ರಾಯಚೂರು: ನೀರಾವರಿ ಇಲಾಖೆ ಮೇಲೆ ದಾಳಿ ನಡೆಸಿದ್ದ ವೇಳೆ ನಾಲ್ವರು ಇಂಜಿನಿಯರ್​ಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಈ ವೇಳೆ ತಮಗೆ ಎದೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಎಇಗಳ ಅನಾರೋಗ್ಯದ ನಾಟಕವನ್ನು ವೈದ್ಯರು ಬಯಲಿಗೆಳೆದಿದ್ದಾರೆ. ಎಸ್​ಇ ಸೂರ್ಯಕಾಂತ್, ಎಇಇ ನರಸಿಂಹರಾವ್ ದೇಶಪಾಂಡೆ, ಎಇಗಳಾದ ಭಾವನಾ, ತುಕಾರಾಂ ಎಂಬವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಇದರಲ್ಲಿ ಭಾವನಾ, ತುಕಾರಾಮ್ ಅವರ ಅನಾರೋಗ್ಯದ ನಾಟಕವನ್ನು ರಿಮ್ಸ್ ಆಸ್ಪತ್ರೆ ವೈದ್ಯರು ಬಯಲು ಮಾಡಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿ ನೀರಾವರಿ ಇಲಾಖೆ ಮೇಲೆ ದಾಳಿ ನಡೆಸಲಾಗಿತ್ತು. ಇಲಾಖೆಯ ಅಧಿಕಾರಿಗಳು ಮಹಾ ಭ್ರಷ್ಟಾಚಾರದಲ್ಲಿ ತೊಡಗಿದ್ದರು. ಅಟೆಂಡರ್ ಅವರಿಂದ ಹಿಡಿದು ಸುಪರಿಡೆಂಟ್ ಇಂಜಿನಿಯರ್​ವರೆಗೂ ಹಣ ಕೊಡಲೇಬೇಕು. ಟೇಬಲ್ ಪ್ರಕಾರ ಲಂಚ ನೀಡಲೇಬೇಕು ಎಂದು ಲೇಬರ್ ಕಾಂಟ್ರಾಕ್ಟರ್ ಈಶ್ವರಯ್ಯಗೆ ಅಧಿಕಾರಿಗಳು ನಿತ್ಯ ಕಿರುಕುಳ ನೀಡಿದ್ದರು. ಹಣ ಕೊಡದಿದ್ದರೆ ಪೈಲ್ ಅನ್ನು ಮುಂದಕ್ಕೆ ಕಳುಹಿಸುವುದಿಲ್ಲ, ಏನ್ ಮಾಡ್ಕೋತಿರಾ ಮಾಡಿಕೊಳ್ಳಿ ಎಂದು ಬೆದರಿಕೆ ಹಾಕುತ್ತಿದ್ದರು. ಅದರಂತೆ ಹಣ ಪಾವತಿಸುವಂತೆ ಅಧಿಕಾರಿಗಳು ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನ ಲೇಬರ್ ಬಿಲ್ ಬಾಕಿ ಉಳಿಸಿದ್ದರು. ದುಡ್ಡು ಕೊಟ್ಟರೆಷ್ಟೇ ಬಿಲ್ ಕ್ಲಿಯರ್ ಮಾಡುತ್ತೇವೆ ಎಂದಿದ್ದಾರೆ.

ಸಿಂಧನೂರು ತಾಲ್ಲೂಕಿನ ಸಿಂಧನೂರು ಉಪಕಾಲುವೆ ನೀರು ನಿರ್ವಹಣೆ ಕಾರ್ಯದ ಲೇಬರ್ ಬಿಲ್ ಕುರಿತು ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಸೂಪರಿಡೆಂಟ್ ಇಂಜಿನಿಯರ್ ಸೂರ್ಯಕಾಂತ್ 10 ಸಾವಿರ ರೂ. ಲಂಚ, ಎಇಇ ನರಸಿಂಹ ರಾವ್ ದೇಶಪಾಂಡೆಗೆ 8 ಸಾವಿರ, ಎಇ ಭಾವನಾ ಹಾಗೂ ಎಇ ತುಕಾರಾಮ್​ಗೆ ತಲಾ 5 ಸಾವಿರ ನೀಡಲಾಗುತ್ತಿತ್ತು. ನಿತ್ಯ ಇಂತಿಷ್ಟು ಹಣ ಅಂತ ಜೇಬು ತುಂಬಿಸಿಕೊಂಡೇ ಅಧಿಕಾರಿಗಳು ಮನೆಗೆ ತೆರಳುತ್ತಿದ್ದರು.

ಮನಸೋ ಇಚ್ಛೆ ಹಣ ಪೀಕುತ್ತಿದ್ದ ಭಾವನಾ, ನರಸಿಂಹ ರಾವ್ ಮತ್ತಿತರ ಭ್ರಷ್ಟರಿಗೆ ಬುದ್ದಿ ಕಲಿಸಲೇಬೇಕು ಎಂದು ಈಶ್ವರಯ್ಯ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು, ರಾಯಚೂರು ನೀರಾವರಿ ಇಲಾಖೆ ಮೇಲೆ ದಾಳಿ ನಡೆಸಿ ಭ್ರಷ್ಟಾಚಾರದಲ್ಲಿ ತೊಡಗಿದ್ದ ನಾಲ್ಕು ಜನ ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:02 am, Sat, 12 November 22

ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ