ರಾಯಚೂರು, ಅ.07: ಜಿಲ್ಲೆಯ ಲಿಂಗಸುಗೂರು(Lingasugur) ತಾಲ್ಲೂಕಿನ ದೇವರಭೂಪುರ ದೊಡ್ಡಿಯ ನೀಲಮ್ಮ ಹಾಗೂ ರಂಗಪ್ಪ ದಂಪತಿಗೆ ಇಬ್ಬರು ಮಕ್ಳಳು. ಆ ಪೈಕಿ ಮೊದಲನೇ ಮಗನೇ ಹೆಸರು ಹನುಮಂತ. ಆತನಿಗೆ ಅಂದಾಜು 28 ವರ್ಷ. ಆದ್ರೆ , ಎಲ್ಲರಂತೆ ಆಡಿ, ಓಡಾಡಿಕೊಂಡು ಇರಬೇಕಿದ್ದ ಹನುಮಂತ ಗೃಹ ಬಂಧನದಲ್ಲಿದ್ದಾನೆ. ಅಷ್ಟಕ್ಕೂ ಈತನನ್ನ ಗೃಹ ಬಂಧನದಲ್ಲಿರಿಸಿರುವುದು ಇತನ ಹೆತ್ತವರೇ. ಹೌದು, ಹನುಮಂತ ಮಾನಸಿಕ ಅಸ್ವಸ್ಥ ಆಗಿರುವುದರಿಂದ ಈತ ಕಳೆದ 8 ವರ್ಷಗಳಿಂದ ತಮ್ಮ ಮನೆಯಲ್ಲೇ ಗೃಹ ಬಂಧನದಲ್ಲಿದ್ದಾನೆ.
ಇನ್ನು ಹನುಮಂತನ ಕೈಕಾಲುಗಳಿಗೆ ಕೋಳ ಹಾಕಲಾಗಿದೆ. ಈತನನ್ನ ಮನೆಯ ಒಂದು ಕೋಣೆಯಲ್ಲಿರಿಸಿದ್ರೆ, ತಾಯಿ ನೀಲಮ್ಮ, ತಂದೆ ರಂಗಮ್ಮ ಹಾಗೂ ತಮ್ಮ ವೆಂಕಟೇಶ್ ಮತ್ತೊಂದು ಕೋಣೆಯಲ್ಲಿ ಇರುತ್ತಾರೆ. ಹಸಿದಾಗ ಹನುಮಂತುಗೆ ಆತನ ಕೋಣೆಗೆ ತಟ್ಟೆಯಲ್ಲಿ ಊಟ, ನೀರು ಕೊಡಲಾಗುತ್ತೆ. ಪಾಪ ಹನುಮಂತುಗೆ ಏನಾಗ್ತಿದೆ, ತನಗೇನಾಗಿದೆ ಅನ್ನೋದೇ ಗೊತ್ತಿಲ್ಲ. ಅಷ್ಟಕ್ಕೂ ಈ ಹನುಮಂತ ಶಿಕ್ಷಣ ಕೂಡ ಪಡೆದಿದ್ದು, ಪಿಯುಸಿಯಲ್ಲಿ ಒಂದೆರಡು ವಿಷಯದಲ್ಲಿ ಫೇಲ್ ಆಗಿದ್ದ. ಇದಾದ ಬಳಿಕ ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದ ಹಿನ್ನಲೆ ಹೊಲಕ್ಕೆ ದುಡಿಯಲು ಹೋಗಿದ್ದ ವೇಳೆ ಮರದಿಂದ ಬಿದ್ದು ಗಾಯಗೊಂಡಿದ್ದ.
ಅಷ್ಟೇ, ಇದಾದ ಬಳಿಕ ಹನುಮಂತ ಮಾನಸಿಕವಾಗಿ ನೊಂದುಹೋಗಿದ್ದ. ನಂತರ ಹನುಮಂತನ ಸ್ಥಿತಿ ಏರುಪೇರಾದಾಗ ಆತ ಊರವರ ಮೇಲೆ ಹಲ್ಲೆ ನಡೆಸುತ್ತಿದ್ದು, ಜೊತೆಗೆ ಸಾಕು ಪ್ರಾಣಿಗಳನ್ನೂ ಕೊಂದಿದ್ದ. ಹೀಗಾಗಿ ಊರವರ ದೂರುಗಳು ಹೆಚ್ಚಾಗಿದ್ದವು. ಅದೆಷ್ಟೋ ಜನ ಹನುಮಂತನನನ್ನ ಆಸ್ಪತ್ರೆಗೆ ಸೇರಿಸಿ, ಇಲ್ಲ ಜನರಿಗೆ ಹಾನಿ ಮಾಡುತ್ತಾನೆ ಎಂದು ಎಚ್ಚರಿಸಿದ್ದರು. ಹೀಗಾಗಿ ಜನರಿಗೆ ಏನಾದ್ರು, ಮಾಡಿಯಾನು ಎನ್ನುವ ಭಯದಲ್ಲಿ ಹನುಮಂತನ ಪೋಷಕರು ಆತನ ಕೈಕಾಲುಗಳಿಗೆ ಕೋಳ ಹಾಕಿ ಗೃಹ ಬಂಧನದಲ್ಲಿರಿಸಿದ್ದಾರೆ. ಇದನ್ನು ನೋಡಿ ಹೆತ್ತವರು ಕಣ್ಣೀರಿಡುತ್ತಿದ್ದಾರೆ.
ಇತ್ತ ಕಳೆದ ಎಂಟು ವರ್ಷಗಳಿಂದ ಆತನಿಗೆ ವಿವಿಧ ಅಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆದ್ರೆ, ದುರದೃಷ್ಟವಶಾತ್ ಆತ ಮಾತ್ರ ಚೇತರಿಕೆಯಾಗಿಲ್ಲ. ಹನುಮಂತ ಕೆಲವೊಮ್ಮೆ ಕಲ್ಲು, ಗಾಜು, ಕಟ್ಟಿಗೆಗಳನ್ನು ತಿನ್ನುತ್ತಾನಂತೆ. ಸದ್ಯ ಇಳಿ ವಯಸ್ಸಲ್ಲಿ ತಂದೆ-ತಾಯಿ ಸಲುಹಬೇಕಿದ್ದ ಮಗ, ಗೃಹ ಬಂಧನದಲ್ಲಿ ನರಳುತ್ತಿರುವುದು ದುರಂತ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ