ಕಲುಷಿತ ನೀರು ಕುಡಿದು 60 ಜನ ಅಸ್ವಸ್ಥ ಕೇಸ್: ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹಣವಿಲ್ಲದೇ ಹೋಮ್ ಐಸೋಲೇಷನ್

ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸರಿಯಿಲ್ಲ ಅನ್ನೋ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆ ಮನೆಯಲ್ಲೇ ಹೋಮ್ ಐಸೋಲೇಶನ್ ಆಗಿ ಚಿಕಿತ್ಸೆ ಮಾಡಲಾಗುತ್ತಿದೆ. ಅಂದ್ರೂನ್ ಖಿಲ್ಲಾ ಏರಿಯಾದ ಬಹುತೇಕ ಅಸ್ವಸ್ಥರು ಮನೆಯಲ್ಲೇ‌ ಡ್ರಿಪ್ಸ್ ಹಾಕಿಸಿಕೊಂಡಿದ್ದಾರೆ.

ಕಲುಷಿತ ನೀರು ಕುಡಿದು 60 ಜನ ಅಸ್ವಸ್ಥ ಕೇಸ್: ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹಣವಿಲ್ಲದೇ ಹೋಮ್ ಐಸೋಲೇಷನ್
ಕಲುಷಿತ ನೀರು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jun 04, 2022 | 8:11 AM

ರಾಯಚೂರು: ಕಲುಷಿತ ನೀರು ಕುಡಿದು 60 ಜನ ಅಸ್ವಸ್ಥ ಕೇಸ್ ಹಿನ್ನೆಲೆ ಇಬ್ಬರು ಸಾವನ್ನಪ್ಪಿದ್ದಾರೆ. ಕರೋನಾ ರೀತಿ ಆ ಏರಿಯಾದ ಜನರನ್ನ ಹೋಮ್ ಐಸೋಲೇಶನ್ ಮಾಡಲಾಗಿದೆ. ಕಲುಷಿತ ನೀರಿನಿಂದ ನಗರ ನಿವಾಸಿಗಳ ಸ್ಥಿತಿ ಭಯಾನಕವಾಗುತ್ತಿದೆ. ಕಾಲರಾ ರೀತಿ ಸಾಂಕ್ರಾಮಿಕ ರೋಗವಾಗುತ್ತಿದ್ದು, ಎಚ್ಚರ ವಹಿಸಿ ಅಂತ ಜನ ಕೇಳ್ಕೊಂಡ್ರು ಡೋಂಟ್ ಕೇರ್ ಎನ್ನಲಾಗುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹಣವಿಲ್ಲದೇ ಹೋಮ್ ಐಸೋಲೇಶನ್ ಮಾಡಿದ್ದು, ಈಗಾಗಲೇ ಕಲುಷಿತ ನೀರು ಕುಡಿದು ಮಲ್ಲಮ್ಮ ಹಾಗೂ ಅಬ್ದುಲ್ ಗಫೂರ್ ಸಾವನ್ನಪ್ಪಿದ್ದಾರೆ. 60 ಕ್ಕೂ ಹೆಚ್ಚು ಜನ ಕಲುಷಿತ ನೀರಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮಾವಿನಕೆರೆ, ಸ್ಟೇಶನ್ ಸರ್ಕಲ್, ಇಂದಿರಾನಗರ, ಶಿಯಾತಲಾಬ್ ಸೇರಿ ಹಲವು ಏರಿಯಾಗಳಲ್ಲಿ ಇದೇ ಆತಂಕ ಉಂಟಾಗಿದ್ದು, ನಗರದ 7ನೇ ವಾರ್ಡ್ ಅಂದ್ರೂನ್ ಖಿಲ್ಲಾದಲ್ಲಿ ಅತೀ ಹೆಚ್ಚು ಎಫೆಕ್ಟ್ ಆಗಿದೆ.

ಇದನ್ನೂ ಓದಿ: ENG vs NZ, 1st Test: ನ್ಯೂಜಿಲೆಂಡ್​ಗೆ ಮಿಚೆಲ್-ಬ್ಲಂಡೆಲ್ ಆಸರೆ: ಇಂಗ್ಲೆಂಡ್​ಗೆ ತಿರುಗೇಟು ನೀಡುತ್ತಿರುವ ಕೇನ್ ಪಡೆ

ಇದೊಂದೇ ಏರಿಯಾದಲ್ಲಿ ಸುಮಾರು 25ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಬಡ ಕುಟುಂಬದ ಜನ ಖಾಸಗಿ ಆಸ್ಪತ್ರೆಗೆ ಹಣ ಕಟ್ಟಲಾಗದೇ ಕಂಗಾಲಾಗಿದ್ದಾರೆ. ಕಲುಷಿತ ನೀರಿನಿಂದ ಮೂತ್ರಪಿಂಡಕ್ಕೂ ಹಾನಿಯಾಗುತ್ತಿರುವ ಹಿನ್ನೆಲೆ ನಿತ್ಯ 20-30 ಸಾವಿರ ರೂ.ವರೆಗೆ ಆಸ್ಪತ್ರೆ ಖರ್ಚಾಗುತ್ತಿದೆ. 4 ಜನರ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಡಯಾಲಿಸಿಸ್ ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸರಿಯಿಲ್ಲ ಅನ್ನೋ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆ ಮನೆಯಲ್ಲೇ ಹೋಮ್ ಐಸೋಲೇಶನ್ ಆಗಿ ಚಿಕಿತ್ಸೆ ಮಾಡಲಾಗುತ್ತಿದೆ. ಅಂದ್ರೂನ್ ಖಿಲ್ಲಾ ಏರಿಯಾದ ಬಹುತೇಕ ಅಸ್ವಸ್ಥರು ಮನೆಯಲ್ಲೇ‌ ಡ್ರಿಪ್ಸ್ ಹಾಕಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಅನಾಹುತ ಆದ್ರೂ ನಗರಸಭೆ ಕಮಿಷನರ್ ಮಾತ್ರ ಬುದ್ಧಿ ಕಲಿತಿಲ್ಲ. ಮತ್ತೆ ಅದೇ ನೀರು ಕುದಿಸಿಕೊಂಡು ಕುಡಿಯಿರಿ ಅಂತ ಬೇಜವಾಬ್ದಾರಿತನದ ಹೇಳಿಕೆ ನೀಡುತ್ತಿದ್ದಾರೆ. ಇದೇ ವೇಳೆ, ಮೃತರಿಗೆ ಪರಿಹಾರವಿಲ್ಲ ಎಂದು ಕೂಡ ನಗರಸಭೆ ಕಮಿಷನರ್ ಹೇಳಿದ್ದು, ನನ್ನ ಕೈಯಲ್ಲೇನು ಇಲ್ಲ. ಸರ್ಕಾರದ‌ ಗಮನಕ್ಕೆ‌ ತರಲಾಗುತ್ತೆ ಅಂತ ಉದ್ಧಟತನದ ಹೇಳಿಕೆಯನ್ನ ನಗರಸಭೆ ಕಮಿಷನರ್ ಗುರುಲಿಂಗಪ್ಪ ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.