ನ್ಯಾಯ ಪಂಚಾಯತಿ ಮಾಡಲು ಬಂದಿದ್ದವರಿಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿ ಮಾತು ಕೇಳಿ ಬೆಚ್ಚಿ ಬಿದ್ದ ಪೊಲೀಸ್​

| Updated By: ಗಂಗಾಧರ​ ಬ. ಸಾಬೋಜಿ

Updated on: Jun 30, 2022 | 12:52 PM

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಕಿಯಲ್ಲಿ ಬೆಂದು ಚಿಕಿತ್ಸೆ ಫಲಕಾರಿಯಾಗದೆ ಸದ್ಯ ನಾಲ್ವರು ಸಾವನ್ನಪ್ಪಿದ್ದಾರೆ. ಹೆಂಡತಿ ತವರು ಮನೆಯವರನ್ನ ಬೆಂಕಿ ಹಚ್ಚಲು ಮನೆ ಕಾರಣವಾಯಿತಾ ಎನ್ನುವ ಪ್ರಶ್ನೆ ಉಂಟಾಗಿದೆ.

ನ್ಯಾಯ ಪಂಚಾಯತಿ ಮಾಡಲು ಬಂದಿದ್ದವರಿಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿ ಮಾತು ಕೇಳಿ ಬೆಚ್ಚಿ ಬಿದ್ದ ಪೊಲೀಸ್​
ನ್ಯಾಯ ಪಂಚಾಯತಿ ಮಾಡಲು ಬಂದಿದ್ದವರಿಗೆ ಬೆಂಕಿ ಹಚ್ಚಿದ ಪ್ರಕರಣ
Follow us on

ರಾಯಚೂರು: ನ್ಯಾಯ ಪಂಚಾಯತಿ ಮಾಡಲು ಬಂದಿದ್ದವರಿಗೆ ಬೆಂಕಿ (Fire) ಹಚ್ಚಿದ ಪ್ರಕರಣ ಹಿನ್ನೆಲೆ ಆರೋಪಿ ಮಾತು ಕೇಳಿ  ಪೊಲೀಸರು ಬೆಚ್ಚಿ ಬಿದಿದ್ದಾರೆ. ನಾರಾಯಣಪುರ ಪೊಲೀಸರ ತನಿಖೆ ವೇಳೆ ಅಸಲಿ ಕಥೆ ರಿವೀಲ್ ಆಗಿದ್ದು, ಪತ್ನಿ ಹುಲಿಗೆಮ್ಮಳ ಇಡೀ ಕುಟುಂಬ ಸರ್ವ ನಾಶ ಮಾಡಲು ಪಾಪಿ ಪತಿ ಖತರ್ನಾಕ್ ಪ್ಲಾನ್ ಮಾಡಿದ್ದಾನೆ. ಪತ್ನಿ, ಮಕ್ಕಳು ಸೇರಿ ಸಂಧಾನಕ್ಕೆ ಬರೋ ಹಿರಿಯರು ಸೇರಿ 10ಕ್ಕೂ ಹೆಚ್ಚು ಜನರನ್ನು ಕೊಲ್ಲಲು ಪ್ಲಾನ್ ಮಾಡಲಾಗಿದೆ. ಆರೋಪಿ ಶರಣಪ್ಪನ ಪೋನ್ ಕಾಲ್ ನಂಬಿ ಅಮಾಯಕರು ಪ್ರಾಣ ಬಿಟ್ಟಿದ್ದಾರೆ. ಆತನೇ ಪ್ಲಾನ್ ಮಾಡಿ, ಸಮಸ್ಯೆ ಬಗೆಹರಿಸಿ ಅಂತ ಹೇಳಿದ್ದ. ಪತ್ನಿ ಹುಲಿಗೆಮ್ಮ, ತನ್ನಿಬ್ಬರು ಮಕ್ಕಳು, ಅತ್ತೆ ಸೇರಿ ಎಲ್ಲರನ್ನೂ ಕರೆ ತರುವಂತೆ ಮಾವ ಸಿದ್ಧರಾಮಪ್ಪಗೆ ಆರೋಪಿ ಕರೆ ಮಾಡಿದ್ದ. ನಾನೂ ಬರಲ್ಲ, ಮಕ್ಕಳನ್ನ ಕಳಿಸಲ್ಲ ಅಂತ ಪತ್ನಿ ಹುಲಿಗೆಮ್ಮ ಹೇಳಿದ್ದು, ಈ ಹಿನ್ನೆಲೆ ಮೂವರನ್ನು ಹುಲಿಗೆಮ್ಮಳ ತಂದೆ ಸಿದ್ಧರಾಮಪ್ಪ ಕರೆದೊಯ್ದಿದ್ದ. ಆ ಪೈಕಿ ಮೃತ ನಾಗೇಶ್, ಮುದ್ದೇಬಿಹಾಳದಲ್ಲಿ ಕೆ.ಎಸ್​ಆರ್​.ಟಿಸಿ ಚಾಲಕನಾಗಿದ್ದ. ಮುತ್ತಪ್ಪ, ಬೆಂಗಳೂರಿನಲ್ಲಿ ಬಿಎಂಟಸಿ ಬಸ್ ಚಾಲಕನಾಗಿದ್ದ. ಮುತ್ತಪ್ಪ, ಘಟನಾ ದಿನವೇ ಬೆಂಗಳೂರಿನಿಂದ ಮುದ್ದೇಬಿಹಾಳಕ್ಕೆ ಬಂದಿದ್ದ.

ಇದನ್ನೂ ಓದಿ: Libya Desert: ಲಿಬಿಯಾ ಮರುಭೂಮಿಯಲ್ಲಿ ಬಾಯಾರಿಕೆಯಿಂದ 20 ಮಂದಿ ವಲಸಿಗರು ಸಾವು

ಇತ್ತ ಪ್ಲಾನ್​ನಂತೆ ಬೈಕ್​ನಲ್ಲಿ ಹೋಗಿ ಒಂದು ಲಿಟರ್​ನ ಮೂರು ಬಾಟಲ್ ಪೆಟ್ರೋಲ್ ಖರೀದಿಸಿದ್ದು, ನಂತರ ಪೆಟ್ರೋಲ್ ಬಾಟಲ್ ಮನೆ ಮೇಲಿನ ಸಿಂಟ್ಯಾಕ್ಸ್ ಕೆಳಗೆ ಬಚ್ಚಿಟ್ಟಿದ್ದ. ನಾಲ್ಕು ಜನ ಮನೆಯೊಳಗೆ ಹೋಗುತ್ತಿದ್ದಂತೆ ಡೋರ್ ಲಾಕ್ ಮಾಡಿದ್ದಾನೆ. ಆಗ ಒಳಗಿದ್ದೋರು ಬಾಗಿಲು ತೆರೆಯಲು ಯತ್ನಿಸಿದರು ಸಾಧ್ಯವಾಗಿಲ್ಲ. ಆಗ ಈ ಜಗ್ಗಾಟದಲ್ಲಿ ಆರೋಪಿ ಶರಣಪ್ಪ ಕೈಗೆ ಗಾಯವಾಗಿದೆ. ಬಳಿಕ ಕಿಟಕಿಯಿಂದ ಪೆಟ್ರೋಲ್ ಸುರಿದ್ದು, ಒಳಗಡೆ ಓಡಾಡಿ ಕೈಮುಗಿದರೂ ಬಿಡದೇ, ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದ.

ಪ್ರಕರಣದಲ್ಲ ಒಟ್ಟು ನಾಲ್ವರ ಸಾವು

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಕಿಯಲ್ಲಿ ಬೆಂದು ಚಿಕಿತ್ಸೆ ಫಲಕಾರಿಯಾಗದೆ ಸದ್ಯ ನಾಲ್ವರು ಸಾವನ್ನಪ್ಪಿದ್ದಾರೆ. ಹೆಂಡತಿ ತವರು ಮನೆಯವರನ್ನ ಬೆಂಕಿ ಹಚ್ಚಲು ಮನೆ ಕಾರಣವಾಯಿತಾ ಎನ್ನುವ ಪ್ರಶ್ನೆ ಉಂಟಾಗಿದೆ. ನಾರಾಯಣಪುರದಲ್ಲಿರುವ ಮನೆ ಪತ್ನಿ ಹುಲಿಗಮ್ಮ ಹೆಸರಲ್ಲಿರುವ ಮನೆ ತನ್ನ ಹೆಸರಿಗೆ ಮಾಡಿಕೊಡುವಂತೆ ಪಾಪಿ ಆರೋಪಿ ಶರಣಪ್ಪ ಕೇಳಿದ್ದ. ಮನೆ ತನ್ನ ಹೆಸರಿಗೆ ಮಾಡಿದ ಬಳಿಕ ಡೈವೋರ್ಸ್ ನೀಡುವುದಾಗಿ  ಶರಣಪ್ಪ ಹೇಳಿದ್ದ. ಮನೆಯನ್ನ ಹೆಸರಿಗೆ ಮಾಡಲು ಒಪ್ಪದ್ದಕ್ಕೆ ಆರೋಪಿ ಶರಣಪ್ಪ ಬೆಂಕಿ ಹಚ್ಚಿದ್ದಾನೆ. ನ್ಯಾಯ ಪಂಚಾಯತಿ ಮಾಡಲು ಹೆಂಡಲು ಹಾಗೂ ಮಕ್ಕಳನ್ನೂ ಸಹ ಕರೆದುಕೊಂಡು ಬರಲು ಆರೋಪಿ ಹೇಳಿದ್ದು, ಆದರೆ ಮಕ್ಕಳು ಹಾಗೂ ಹೆಂಡ್ತಿಯನ್ನ ಸಂಬಂಧಿಕರು ಕರೆದುಕೊಂಡು ಬಾರದೆ ತಾವೆ ಬಂದಿದ್ದರು. ನ್ಯಾಯ ಪಂಚಾಯತಿ ಹೆಸರಲ್ಲಿ ಅಮಾನವೀಯ ಕೃತ್ಯ ನಡೆದಿದೆ. ನಿನ್ನೆ ನಾರಾಯಣಪುರದಲ್ಲಿ ಘಟನೆ ನಡೆದಿದ್ದು, ಬೆಂಕಿಯಲ್ಲಿ ಬೆಂದಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ; KL Rahul: ಟೀಮ್ ಇಂಡಿಯಾಗೆ ಕೆಎಲ್ ರಾಹುಲ್ ಕಂಬ್ಯಾಕ್ ಯಾವಾಗ?