ತಂದೆ ಜೊತೆ ಹೋಗುವಾಗ ಉಸಿರುಗಟ್ಟಿ ಮಗು ಸಾವನ್ನಪ್ಪಿದ್ದ ಪ್ರಕರಣ: ತನಿಖೆ ವೇಳೆ ಭಯಾನಕ ಸತ್ಯ ಬಯಲು

| Updated By: ಸಾಧು ಶ್ರೀನಾಥ್​

Updated on: Sep 07, 2023 | 1:49 PM

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ (Lingsugur taluk in Raichur) ಕನಸಾವಿ ಗ್ರಾಮದಲ್ಲಿ ನಡೆದಿದ್ದ ಘಟನೆ ಇದಾಗಿತ್ತು. ಮುದಗಲ್ ಪೊಲೀಸರಿಂದ ವಿಚಾರಣೆ ವೇಳೆ ಅಸಲಿ ತಂದೆ ಮಹಾಂತೇಶ್ ತನ್ನ ಕುಕೃತ್ಯದ ಬಗ್ಗೆ ಸತ್ಯ ಬಾಯ್ಬಿಟ್ಟಿದ್ದಾನೆ. ಇದೇ ಸೆಪ್ಟೆಂಬರ್ 3 ರಾತ್ರಿ ಪತ್ನಿ ಭೀಮಮ್ಮಳ ಊರು ಕನಸಾವಿಗೆ ಆರೋಪಿ ತಂದೆ ಮಹಾಂತೇಶ್ ಬಾಗಲಕೋಟೆಯಿಂದ ಬಂದಿದ್ದ.

ತಂದೆ ಜೊತೆ ಹೋಗುವಾಗ ಉಸಿರುಗಟ್ಟಿ ಮಗು ಸಾವನ್ನಪ್ಪಿದ್ದ ಪ್ರಕರಣ: ತನಿಖೆ ವೇಳೆ ಭಯಾನಕ ಸತ್ಯ ಬಯಲು
ಮಗು ಸಾವನ್ನಪ್ಪಿದ್ದ ಪ್ರಕರಣ: ತನಿಖೆ ವೇಳೆ ಭಯಾನಕ ಸತ್ಯ ಬಯಲು
Follow us on

ರಾಯಚೂರು: ಜನ್ಮ ನೀಡಿದ ತಂದೆಯ ಜೊತೆ ಹೋಗುವಾಗ ಉಸಿರುಗಟ್ಟಿ (suffocation) ಮಗು ಸಾವನ್ನಪ್ಪಿದ್ದ ಪ್ರಕರಣದಲ್ಲಿ ಪೊಲೀಸರ ತನಿಖೆಯ ವೇಳೆ ಭಯಾನಕ ಸತ್ಯ ಬಯಲಾಗಿದೆ. ಮಗುವಿನ ತಂದೆ ತನ್ನ ಪತ್ನಿಯನ್ನು ಕೊಲೆಗೈಯುವ ಸ್ಕೆಚ್ ಗೆ ಹಸುಗೂಸು ಅಡ್ಡಿಪಡಿಸುತ್ತಿದ್ದ ಹಿನ್ನೆಲೆಯಲ್ಲಿ 14 ತಿಂಗಳ ತನ್ನದೇ ಮಗುವನ್ನು (Son) ತಂದೆ (father) ಕೊಲೆಗೈದು (Murder), ಕಲ್ಲುಗಳ ಸಂದಿಯಲ್ಲಿ ಹೂತಿಟ್ಟಿದ್ದ ವಿಷಯ ಬೆಳಕಿಗೆ ಬಂದಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ (Lingsugur taluk in Raichur) ಕನಸಾವಿ ಗ್ರಾಮದಲ್ಲಿ ನಡೆದಿದ್ದ ಘಟನೆ ಇದಾಗಿತ್ತು. ಮುದಗಲ್ ಪೊಲೀಸರಿಂದ ವಿಚಾರಣೆ ವೇಳೆ ಅಸಲಿ ತಂದೆ ಮಹಾಂತೇಶ್ ತನ್ನ ಕುಕೃತ್ಯದ ಬಗ್ಗೆ ಸತ್ಯ ಬಾಯ್ಬಿಟ್ಟಿದ್ದಾನೆ. ಇದೇ ಸೆಪ್ಟೆಂಬರ್ 3 ರಾತ್ರಿ ಪತ್ನಿ ಭೀಮಮ್ಮಳ ಊರು ಕನಸಾವಿಗೆ ಆರೋಪಿ ತಂದೆ ಮಹಾಂತೇಶ್ ಬಾಗಲಕೋಟೆಯಿಂದ ಬಂದಿದ್ದ.

Also Read: Viral Video: ಈ ಕೊಕ್ಕರೆಯಮ್ಮ ಯಾಕೆ ತನ್ನ ಮಗುವನ್ನು ಕುಕ್ಕಿ ಕುಕ್ಕಿ ಕೆಳಗೆಸೆದಳೋ?

ಈ ವೇಳೆ ಪತ್ನಿ ಜೊತೆ ಜಗಳವಾಡಿ 14 ತಿಂಗಳ ಹಸುಗೂಸು ಅಭಿನವನನ್ನು ಆರೋಪಿ ಮಹಾಂತೇಶ್ ತನ್ನ ಜೊತೆರ ಕರೆದೊಯ್ದಿದ್ದ. ಮಾರನೇ ದಿನ ಮಗುವಿನ ಸುಳಿವು ಸಿಗದೇ ಇದ್ದಾಗ ಮುದಗಲ್ ಪೊಲೀಸರಿಗೆ ದೂರು ನಿಡಲಾಗಿತ್ತು. ಬಳಿಕ ಮುದಗಲ್ ಪೊಲೀಸರು ಆರೋಪಿ ತಂದೆ ಮಹಾಂತೇಶನ ವಿಚಾರಣೆ ನಡೆಸಿದ್ದರು. ಈ ವೇಳೆ ಪತ್ನಿ ಹತ್ಯೆಗೆ ಎರಡು ಮೂರು ಬಾರಿ ಪ್ರಯತ್ನಿಸಿದ್ದೆ. ಆಗ ಆಕೆಯ ಪಕ್ಕದಲ್ಲಿ ಮಲಗಿದ್ದ 14 ತಿಂಗಳ ಮಗ ಅಡ್ಡಿಪಡಿಸುತ್ತಿದ್ದ ಎಂದು ಪತ್ನಿಯ ಕೊಲೆ ಮಾಡಲಾಗದ ಹಿನ್ನೆಲೆ ಮೊದಲು ಮಗನನ್ನು ಕೊಂದು, ನಂತರ ಪತ್ನಿಯನ್ನೂ ಕೊಲ್ಲಲು ಮುಂದಾಗಿದ್ದೆ. ಮಗುವನ್ನು ಕೊಂದು ಕನಸಾವಿ ಗ್ರಾಮದ ಹೊರಭಾಗದಲ್ಲಿ ಹೂತಿಟ್ಟಿದ್ದೆ ಎಂದು ಆರೋಪಿ ತಂದೆ ಮಹಾಂತೇಶ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ