ರಾಯಚೂರು: ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿ (Accident) ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಬಾಲಯ್ಯಕ್ಯಾಂಪ್ ಬಳಿ ನಡೆದಿದೆ. ಮಧ್ಯಪ್ರದೇಶ ಮೂಲದ ದಂಪತಿ, ಇಬ್ಬರು ಮಕ್ಕಳು ಮೃತಪಟ್ಟಿದ್ದು, ಅಪಘಾತ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಬಳಗಾನೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಇದನ್ನೂ ಓದಿ: ಜ್ಯುವೆಲರಿ ಶಾಪ್ನಲ್ಲಿ ದಿನಕ್ಕೊಂದರಂತೆ ಆಭರಣ ಮಾಯ: ಕಳ್ಳ ಸಿಕ್ಕಿದ್ರೂ ಪೊಲೀಸರಿಗೆ ತಪ್ಪಲಿಲ್ಲ ಪೀಕಲಾಟ
ಪ್ರೀತಿ ವಿಚಾರಕ್ಕೆ ಯುವಕನ ಹತ್ಯೆ ಪ್ರಕರಣ: ಇಬ್ಬರ ಬಂಧನ
ಬೆಂಗಳೂರು: ಪ್ರೀತಿ ವಿಚಾರಕ್ಕೆ ಯುವಕನ ಹತ್ಯೆ ಪ್ರಕರಣ ಹಿನ್ನೆಲೆ ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ. ನಾಗೇಂದ್ರ ಹಾಗೂ ರಂಗಸ್ವಾಮಿ ಬಂಧಿತ ಆರೋಪಿಗಳು. ಸಂಬಂಧಿಕರ ಮನೆಯ ಅಪ್ರಾಪ್ತ ಬಾಲಕಿಯನ್ನ ಪ್ರೀತಿಸಿ ಯುವಕ ಹತ್ಯೆಯಾಗಿದ್ದ. ಜುಲೈ 15ರ ರಾತ್ರಿ ಹಳೇ ಮದ್ರಾಸ್ ರಸ್ತೆಯ ನಿರ್ಜನ ಪ್ರದೇಶದಲ್ಲಿ
ಪ್ರಜ್ವಲ್ (18) ನನ್ನ ದೊಣ್ಣೆಯಿಂದ ಹೊಡೆದು ಕೊಲೆಗೈಯ್ಯಲಾಗಿತ್ತು. ನಾಗೇಂದ್ರನ ಅಣ್ಣನ ಮಗಳನ್ನ ಪ್ರೀತಿಸುತ್ತಿದ್ದ ಪ್ರಜ್ವಲ್,
ಸೋಶಿಯಲ್ ಮೀಡಿಯಾಗಳಲ್ಲಿ ಲವ್ ಯೂ ಅಂತಾ ಮೆಸೇಜ್ ಕಳಿಸುತ್ತಿದ್ದ. ವಾರ್ನಿಂಗ್ ಕೊಡಲು ಮತ್ತೊಬ್ಬ ಯುವಕನ ಮೂಲಕ ಪ್ರಜ್ವಲ್ನನ್ನ ಕರೆಸಿದ್ದ ಆರೋಪಿಗಳು, ಪ್ರಜ್ವಲ್ ಹಾಗೂ ಆತನನ್ನ ಕರೆತಂದವ ಇಬ್ಬರಿಗೂ ಥಳಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಪ್ರಜ್ವಲ್ ಸಾವನ್ನಪ್ಪಿದ್ದ.
ಹಳ್ಳದಲ್ಲಿ ಕೊಚ್ಚಿಹೋಗಿದ್ದ ಮಹಿಳೆ ಮೃತ ದೇಹ ಪತ್ತೆ:
ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯ ಅವಾಂತರ ಮುಂದುವರೆದಿದ್ದು, ಹಳ್ಳದಲ್ಲಿ ಕೊಚ್ಚಿಹೋಗಿದ್ದ ಭವಾನಿ(52) ಮೃತದೇಹ ಪತ್ತೆಯಾಗಿದೆ. ನಿನ್ನೆ ತೋಟಕ್ಕೆ ಹೋಗುವಾಗ ಮಹಿಳೆ ಹಳ್ಳದಲ್ಲಿ ಕೊಚ್ಚಿಹೋಗಿದ್ದಳು. ಬಾಳೆಹಿತ್ತಲು ಹಳ್ಳದಲ್ಲಿ ಕೊಚ್ಚಿಹೋಗಿದ್ದ ಭವಾನಿ ಶವ ಪತ್ತೆಯಾಗಿದೆ. ತೀರ್ಥಹಳ್ಳಿ ತಾಲೂಕಿನ ಸುಳುಗೋಡು ಬಳಿ ಘಟನೆ ನಡೆದಿತ್ತು.
ಇದನ್ನೂ ಓದಿ: ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ವಶಕ್ಕೆ ಪಡೆದ ಸಂಕೇಶ್ವರ ಅಬಕಾರಿ ಪೊಲೀಸ್
5 ಜನರ ಕುಖ್ಯಾತ ದರೋಡೆಕೋರರ ಬಂಧನ:
ಬೆಂಗಳೂರು: ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಬೆದರಿಸಿ ಚಿನ್ನಾಭರಣ ಎಗರಿಸುತ್ತಿದ್ದ 5ಜನರ ಕುಖ್ಯಾತ ದರೋಡೆಕೋರರ ಬಂಧನ ಮಾಡಲಾಗಿದೆ. ಮಂಜುನಾಥ್@ಕೋಳಿ ಮಂಜ, ಹರೀಶ್ ಗೌಡ, ಕುಶಾಲ್ ಕುಮಾರ್, ಮುನಿಸ್ವಾಮಿ,
ಹರೀಶ್@ಹರಿ ಬಂಧಿತ ಆರೋಪಿಗಳು. ಜೂನ್ 23ರಂದು ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಚಾಕುವಿನಿಂದ ಹಲ್ಲೆ ಮಾಡಿ ಸುನಂಧ ಅವರ ಮನೆಯಲ್ಲಿ ದರೋಡೆ ಮಾಡಿದ್ರು. ಬಂಧಿತರಿಂದ 3ಲಕ್ಷ ಬೆಲೆಬಾಳುವ ಚಿನ್ನಾಭರಣಗಳು ಹಾಗೂ ಬೆಳ್ಳಿ ಜಪ್ತಿ ಮಾಡಲಾಗಿದೆ. ಎ1 ಆರೋಪಿ ಕೋಳಿ ಮಂಜನ ವಿರುದ್ಧ ಹಲವು ಠಾಣೆಗಳಲ್ಲಿ 20ಕ್ಕೂ ಹೆಚ್ಚು ಕೇಸ್ ದಾಖಲಾಗಿವೆ. ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
Published On - 11:37 am, Mon, 18 July 22