ಜ್ಯುವೆಲರಿ ಶಾಪ್​​ನಲ್ಲಿ ದಿನಕ್ಕೊಂದರಂತೆ ಆಭರಣ ಮಾಯ: ಕಳ್ಳ ಸಿಕ್ಕಿದ್ರೂ ಪೊಲೀಸರಿಗೆ ತಪ್ಪಲಿಲ್ಲ ಪೀಕಲಾಟ

ಪೊಲೀಸರಿಗೆ ವಿಜಯ್ ತಲೆನೋವಾಗಿದ್ದು, ದ್ವಿಮುಖ ವ್ಯಕ್ತಿತ್ವ (Split Personality) ಹೊಂದಿದ್ದು, ಇಂದಿನ ವಿಚಾರಣೆ ನಾಳೆಗೆ ಮರೆಯೋ ಖಾಯಿಲೆಯನ್ನು ವಿಜಯ್ ಹೊಂದಿದ್ದಾನೆ.

ಜ್ಯುವೆಲರಿ ಶಾಪ್​​ನಲ್ಲಿ ದಿನಕ್ಕೊಂದರಂತೆ ಆಭರಣ ಮಾಯ: ಕಳ್ಳ ಸಿಕ್ಕಿದ್ರೂ ಪೊಲೀಸರಿಗೆ ತಪ್ಪಲಿಲ್ಲ ಪೀಕಲಾಟ
ವಶಪಡಿಸಿಕೊಂಡ ಬಂಗಾರ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jul 18, 2022 | 10:05 AM

ಬೆಂಗಳೂರು: ಜ್ಯುವೆಲರಿ ಶಾಪ್​ನಲ್ಲಿ ಸುಮಾರು ತಿಂಗಳಿಂದ ಕಳ್ಳತನ (theft) ನಡೆಯುತ್ತಿದ್ದು, ದಿನಕ್ಕೊಂದರಂತೆ ಆಭರಣ ಮಾಯವಾಗುತ್ತಿತ್ತು. ಬೆಸ್ಟ್ ಜ್ಯುವೆಲರಿಯ‌ ಬೆಸ್ಟ್ ಎಂಪ್ಲಾಯ್ ಈ ಖತರ್ನಾಕ್ ಕೆಲಸ ಮಾಡಿದ್ದು, ಕಳ್ಳ ಸಿಕ್ಕಿದ ಮೇಲೂ ಪೊಲೀಸರಿಗೆ ಪೀಕಲಾಟ ತಪ್ಪಿಲ್ಲ. ಈ ಕಳ್ಳತನ‌ ಬೆಳಕಿಗೆ ಬಂದದಾದ್ರು ಹೇಗೆ ಅಂತ ನೋಡುವುದಾದರೆ, ಯಶವಂತಪುರದ ಬಳಿಯಿರುವ ಬೆಸ್ಟ್ ಜ್ಯುವೆಲರಿಯಲ್ಲಿ ಕಳ್ಳತನವಾಗಿದೆ. ಕೆಲವು ತಿಂಗಳಿಂದ ಕಳ್ಳತನ ನಡೆಯುತ್ತಿದ್ದು, ಈ ಕೆಲಸ ಆಭರಣ ಅಂಗಡಿ ಸಿಬ್ಬಂದಿಯಿಂದನೇ ಲೂಟಿ ಮಾಡಲಾಗಿದೆ. ಚೇತನ ನಾಯ್ಡು ಎಂಬುವವನಿಂದ ಕೃತ್ಯ ಎಸಗಲಾಗಿದೆ. ಈತನಿಗೆ ಗೆಳೆಯ ವಿಜಯ್ ಎಂಬಾತನಿಂದ ಸಾಥ್ ನೀಡಿದ್ದು, ಕಳ್ಳತನ‌ ಮಾಡಲೆಂದೇ ಕೆಲಸಕ್ಕೆ ಸೇರಿದ ಚೇತನ್, ದಿನಕ್ಕೊಂದು ಆಭರಣ ಕದಿಯೊತ್ತಿದ್ದ. ಇಂದು ಉಂಗುರ, ನಾಳೆ ಚೈನ್, ನಾಡಿದ್ದು ಬಳೆ ಹೀಗೆ ಕದ್ದ ಆಭರಣದ ಡೀಟೆಲ್ಸ್ ಲಿಸ್ಟ್​ನಿಂದನೇ ಡಿಲೀಟ್ ಮಾಡುತ್ತಿದ್ದ. ಮಾಲೀಕನಿಗೆ ಅನುಮಾನ ಬಾರದಂತೆ ಕಳ್ಳತನ ನಡೆಯುತಿತ್ತು. ಚೇತನ್ ಕಳ್ಳತನಕ್ಕೆ ಶೋಕಿನೇ ಕಾರಣ ಎನ್ನುತ್ತಿದ್ದು, ಒಬ್ಬನಿಗೆ ಇಬ್ಬರಿಬ್ಬರು ಗೆಳೆತಿಯರಿದ್ದರು. ಕದ್ದ ಮಾಲು ಗೆಳೆಯ ವಿಜಯ್​ಗೆ ಚೇತನ್ ನೀಡುತ್ತಿದ್ದ. ಬಂದ ಹಣದಲ್ಲಿ ಗೆಳೆಯರಿಬ್ಬರ ಶೋಕಿ ಜೀವನ ನಡೆಸುತ್ತಿದ್ದರು.

ಕಳ್ಳ ಸಿಕ್ಕಿದ್ರೂ ಪೊಲೀಸರಿಗೆ ತಪ್ಪಿಲ್ಲ ಪೀಕಲಾಟ

ಕೇಸಲ್ಲಿ ಪೊಲೀಸರಿಗೆ ವಿಜಯ್ ತಲೆನೋವಾಗಿದ್ದು, ದ್ವಿಮುಖ ವ್ಯಕ್ತಿತ್ವ (Split Personality) ಹೊಂದಿದ್ದು, ಇಂದಿನ ವಿಚಾರಣೆ ನಾಳೆಗೆ ಮರೆಯೋ ಖಾಯಿಲೆಯನ್ನು ವಿಜಯ್ ಹೊಂದಿದ್ದಾನೆ. ಆಭರಣದ ವಿಚಾರವೆಲ್ಲಾ ಮರೆತಿದ್ದು, ವಿಜಯ್ ಆಭರಣದ ವಿಚಾರ ಬಾಯಿಬಿಡಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಮಾತನಾಡ್ತಾ ಒಂದೊಂದಾಗಿ ಬಾಯಿ ಬಿಡಿಸಿರೋ ಯಶವಂತಪುರ ಪೊಲೀಸರು, 770 ಗ್ರಾಂ ಬಂಗಾರವನ್ನು ಪೊಲೀಸರು ರಿಕವರಿ ಮಾಡಿಕೊಂಡಿದ್ದಾರೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲು ಮಾಡಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಸೇತುವೆಗೆ ಡಿಕ್ಕಿ: ಚಾಲಕ ಸಾವು

ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಕಾರು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವರಿಗೆ ಗಾಯವಾಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ನಡೆದಿದೆ. ಜೋಸೆಪ್ ಕುಟ್ಟಿ (46) ಸಾವನ್ನಪ್ಪಿದ ಚಾಲಕ. ಅನು ಮರಿಯಾ (16) ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಗಳು ಅನು ಮರಿಯಾಳ ಮಂಗಳೂರಿನಲ್ಲಿ ಪರೀಕ್ಷೆ ಇರುವ ಹಿನ್ನಲೆ ಅಪ್ಪ ಜೋಸೆಪ್ ಕರೆದುಕೊಂಡು ಹೋಗುತ್ತಿದ್ದರು. ಕಾರಿನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿಯಾಗಿದೆ. ಸ್ಥಳಕ್ಕೆ ಪೊಲೀಸ್ ಭೇಟಿ ಪರಿಶೀಲನೆ ಮಾಡಿದ್ದು, ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಮೆಡಿಕಲ್ ಶಾಪ್​ಗೆ ನುಗ್ಗಿದ ಕಾರು

ದಾವಣಗೆರೆ: ಚಾಲಕನ ನಿಯಂತ್ರಣ ತಪ್ಪಿ ಮೆಡಿಕಲ್ ಶಾಪ್​ಗೆ ಕಾರು ನುಗ್ಗಿರುವಂತಹ ಘಟನೆ ತಾಲೂಕಿನ ತೋಳಹುಣಸೆ ಗ್ರಾಮದ ಬಳಿ ನಡೆದಿದೆ.  ಅತಿ ವೇಗದಲ್ಲಿ ಬರುತ್ತಿದ್ದ ಕಾರ್ ಎದುರಿಗೆ ಬಂದ ಇನ್ನೊಂದು ವಾಹನಕ್ಕೆ ದಾರಿ ಬಿಡಲು ಹೋಗಿ ಮೆಡಿಕಲ್ ಶಾಪ್ ನುಗ್ಗಿದೆ. ಮೆಡಿಕಲ್ ಶಾಪ್ ಬಳಿ ಕಬ್ಬಿಣದ ಕಂಬ ಇದ್ದ ಹಿನ್ನೆಲೆ ಕಂಬಕ್ಕೆ ಡಿಕ್ಕಿ ಹೊಡೆದು ಕಾರು ನಿಂತುಕೊಂಡಿದೆ. ಅದೃಷ್ಟವಶಾತ ಭಾರಿ ಅವಘಡ ತಪ್ಪಿದೆ. ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರ ಭೇಟಿ ಪರಿಶೀಲನೆ ಮಾಡಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada