ಇಂದಿನಿಂದ GST ಬರೆ: ಯಾವ ವಸ್ತುಗಳ ಮೇಲೆ ಹೆಚ್ಚಾಗಲಿದೆ ತೆರಿಗೆ? ಸಂಪೂರ್ಣ ಮಾಹಿತಿ ಇಲ್ಲಿದೆ
ಇಂದಿನಿಂದ ಅಗತ್ಯ ವಸ್ತುಗಳು, ಆಹಾರ ವಸ್ತುಗಳ ಮೇಲೆ ಜಿಎಸ್‌ಟಿ ಬರೆ ಬೀಳ್ತಿದ್ದು, ದುನಿಯಾ ಮತ್ತಷ್ಟು ದುಬಾರಿಯಾಗಲಿದೆ. ಕಳೆದ ತಿಂಗಳು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಆಹಾರ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಲು ನಿರ್ಧರಿಸಲಾಗಿದೆ.
ಬೆಂಗಳೂರು: ಪೆಟ್ರೋಲ್, ಡಿಸೇಲ್, ಅಡುಗೆ ಎಣ್ಣೆ ದರ ಸದ್ಯ ಕೊಂಚ ಇಳಿಕೆ ಕಾಣುತ್ತಿದೆ. ಇದರಿಂದ ರಿಲಾಕ್ಸ್ ಆಗಿದ್ದ ಜನರಿಗೆ ಕೇಂದ್ರ ಸರ್ಕಾರ ಈಗ ಮತ್ತೊಂದು ಶಾಕ್ ಕೊಟ್ಟಿದೆ. ಬೆಲೆ ಇಳಿಕೆಯನ್ನ ಶ್ರೀಸಾಮಾನ್ಯರು ಅನುಭವಿಸುವಷ್ಟರಲ್ಲೇ, ಮತ್ತೆ ದರದ ಪೆಟ್ಟು ಬಿದ್ದಿದೆ. ಇಂದಿನಿಂದ (ಜುಲೈ 18) ಅಗತ್ಯ ವಸ್ತುಗಳು, ಆಹಾರ ವಸ್ತುಗಳ ಮೇಲೆ ಜಿಎಸ್‌ಟಿ ಬರೆ ಬೀಳ್ತಿದ್ದು, ದುನಿಯಾ ಮತ್ತಷ್ಟು ದುಬಾರಿಯಾಗಲಿದೆ. ಕಳೆದ ತಿಂಗಳು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಆಹಾರ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಲು ನಿರ್ಧರಿಸಲಾಗಿದೆ.
ಯಾವುದೆಲ್ಲಾ ದುಬಾರಿ?
ಪ್ಯಾಕ್ ಮಾಡಿದ ಆಹಾರ ವಸ್ತು. ( ಮೀನು, ಮಾಂಸ, ಒಣಗಿಸಿದ ತರಕಾರಿ, ಜೇನುತುಪ್ಪ, ಬೆಲ್ಲ, ತುಪ್ಪ, ಅಕ್ಕಿ, ಗೋಧಿ ಸೇರಿ ಇತರೆ ಧಾನ್ಯಗಳು) ದುಬಾರಿಯಾಗಲಿವೆ. ಇನ್ನೂ ಎಲ್‌ಇಡಿ ಬಲ್ಬ್, ಲ್ಯಾಂಪ್‌ಗಳ ಮೇಲೂ 18 ಪರ್ಸೆಂಟ್‌ನಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಅಲ್ಲದೇ, ಅಸ್ಪತ್ರೆಯಲ್ಲಿ 5 ಸಾವಿರ ರೂಪಾಯಿ ಮೇಲ್ಪಟ್ಟ ಸ್ಪೆಷಲ್ ವಾರ್ಡ್‌ಗೂ 5 ಪರ್ಸೆಂಟ್ ತೆರಿಗೆ ಬೀಳಲಿದೆ. ಇನ್ನೂ ಚೆಕ್ ಬುಕ್ ಜಾರ್ಜ್ ಕೂಡಾ 18 ಪರ್ಸೆಂಟ್ ಹೆಚ್ಚಾಗಲಿದೆ. ಇನ್ನು 1 ಸಾವಿರ ರೂಪಾಯಿ ಒಳಗಿನ ಹೋಟೆಲ್ ರೂಮ್‌ಗಳಿಗೂ 12 ಪರ್ಸೆಂಟ್ ಜಿಎಸ್‌ಟಿ ಇರಲಿದೆ. ಕ್ಯಾಸಿನೋ, ಆನ್‌ಲೈನ್ ಗೇಮ್ ಆಡೋರಿಗೂ ಟ್ಯಾಕ್ಸ್ ಬರೆ ಬಿದ್ದಿದ್ದು, ಬರೋಬ್ಬರಿ 28 ಪರ್ಸೆಂಟ್ ಜಿಎಸ್‌ಟಿ ಹಾಕಲಾಗಿದೆ. ಇನ್ನುಳಿದಂತೆ, ಸೋಲಾರ್ ವಾಟರ್ ಹೀಟರ್, ಇಂಕ್, ಚರ್ಮದ ಉತ್ಪನ್ನ, ಟೈಲರಿಂಗ್, ಜವಳಿ ಸೇವೆ, ಬಾಡಿಗೆ ರೂಮ್ ನೀಡುವ ಧಾರ್ಮಿಕ ಕೇಂದ್ರಗಳು, ಬಾಡಿಗೆ ವಿಧಿಸುವ ವಾಣಿಜ್ಯ ಕೇಂದ್ರಗಳಿಗೂ ಟ್ಯಾಕ್ಸ್ ಹೊರೆಬಿದ್ದಿದೆ.
ನ್ಯೂ ತರಗು ಪೇಟೆ ಮತ್ತು ಎಪಿಎಂಸಿ ಮಾರ್ಕೆಟ್ ಸದ್ಯದ ದರ ಹಾಗೂ ನಾಳೆ ಜಿಎಸ್ಟಿ ಸೇರಿಸಿದ್ರೆ ದರದ ಮಾಹಿತಿ
- ಅಕ್ಕಿ- 1 ಕೆಜಿಗೆ- 50 ರೂಪಾಯಿ, 10 ಕೆಜಿಗೆ- 500 ರೂಪಾಯಿ, ಜಿಎಸ್ಟಿ ಸೇರಿಸಿದ್ರೆ- 10 ಕೆಜಿಗೆ- 525, ರೂಪಾಯಿ 5%
- ಹೆಸರು ಬೆಳೆ- 1 ಕೆಜಿಗೆ- 110 ರೂಪಾಯಿ, 10 ಕೆಜಿಗೆ- 1100 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 1155
- ತೊಗರಿಬೆಳೆ- ಕೆಜಿಗೆ- 100 ರೂಪಾಯಿ, 10 ಕೆಜಿಗೆ- 1000 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 1050 ರುಪಾಯಿ
- ಉದ್ದಿನಬೆಳೆ ಕೆಜಿಗೆ- 120 ರೂಪಾಯಿ, 10 ಕೆಜಿಗೆ- 1200 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 1260
- ಹೆಸರು ಕಾಲು ಕೆಜಿಗೆ- 100 ರೂಪಾಯಿ, 10 ಕೆಜಿಗೆ- 1000. ಜಿಎಸ್ಟಿ ಸೇರಿಸಿದ್ರೆ- 1050 ರೂಪಾಯಿ
- ಕಡಲೆ ಬೇಳೆ ಕೆಜಿಗೆ- 75 ರೂಪಾಯಿ, 10 ಕೆಜಿಗೆ- 750 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 787
- ಕಡಲೆಕಾಳು ಕೆಜಿಗೆ- 65 ರೂಪಾಯಿ, 10 ಕೆಜಿಗೆ- 650 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 682 ರೂಪಾಯಿ
- ಹುರಿಕಡಲೆ ಕೆಜಿಗೆ- 80 ರೂಪಾಯಿ, 10 ಕೆಜಿಗೆ- 800 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ-840
- ಉದ್ದಿನ ಕಾಲು- 110 ರೂಪಾಯಿ, 10 ಕೆಜಿಗೆ- 1100 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 1155 ರೂಪಾಯಿ
- ಹಲಸಂದೆ ಕಾಲು ಕೆಜಿಗೆ- 90 ರೂಪಾಯಿ, 10 ಕೆಜಿಗೆ- 900 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 945 ರೂಪಾಯಿ
- ಕಾಬೂಲ್ ಕಡಲೆ ಕೆಜಿಗೆ- 120 ರೂಪಾಯಿ, 10 ಕೆಜಿಗೆ- 1200. ಜಿಎಸ್ಟಿ ಸೇರಿಸಿದ್ರೆ- 1260
- ಬಟಾಣಿ ಕೆಜಿಗೆ- 85 ರೂಪಾಯಿ, 10 ಕೆಜಿಗೆ- 850 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 892
- ಬೆಲ್ಲ ಕೆಜಿಗೆ- 60 ರೂಪಾಯಿ, 10 ಕೆಜಿಗೆ- 600 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 630 ರೂಪಾಯಿ
- ಗೋದಿ ಹಿಟ್ಟು ಕೆಜಿಗೆ- 45 ರೂಪಾಯಿ, ಹತ್ತು ಕೆಜಿಗೆ-450 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ-472 ರೂಪಾಯಿ
Published On - 5:17 pm, Sun, 17 July 22