Vitamin A: ವಿಟಮಿನ್ ‘ಎ’ ಕೊರತೆಯುಂಟಾದರೆ ದೇಹದಲ್ಲಿ ಈ ಲಕ್ಷಣಗಳು ಗೋಚರಿಸುತ್ತೆ
ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಜೀವಸತ್ವ, ಖನಿಜಗಳಂತಹ ಸಾಕಷ್ಟು ಪೋಷಕಾಂಶಗಳ ಅಗತ್ಯವಿದೆ. ಈ ಯಾವುದೇ ಅಗತ್ಯ ಪೋಷಕಾಂಶಗಳ ಕೊರತೆಯು ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು
ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಜೀವಸತ್ವ, ಖನಿಜಗಳಂತಹ ಸಾಕಷ್ಟು ಪೋಷಕಾಂಶಗಳ ಅಗತ್ಯವಿದೆ. ಈ ಯಾವುದೇ ಅಗತ್ಯ ಪೋಷಕಾಂಶಗಳ ಕೊರತೆಯು ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ದುರ್ಬಲಗೊಂಡ ರೋಗನಿರೋಧಕ ವ್ಯವಸ್ಥೆಯಿಂದ ಮೂಳೆಗಳು ಕೂಡ ದುರ್ಬಲಗೊಳ್ಳಬಹುದು. ಹಾಗಾಗಿ ನಾವು ಪ್ರೋಟಿನ್, ಫೈಬರ್ಗಳು ಹಾಗೂ ಎಲ್ಲಾ ಅಗತ್ಯ ಜೀವಸತ್ವಗಳು ಇರುವ ಆಹಾರಗಳ ಸೇವನೆ ಮಾಡಬೇಕು.
ನಿಮ್ಮ ಊಟದಲ್ಲಿ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳು ಇಲ್ಲದಿದ್ದಾಗ, ಇದು ಒಂದು ನಿರ್ದಿಷ್ಟ ಕೊರತೆಗೆ ಕಾರಣವಾಗಬಹುದು ಮತ್ತು ವಿಟಮಿನ್ ಎ ಕೊರತೆಯು ಅವುಗಳಲ್ಲಿ ಒಂದಾಗಿದೆ.
ವಿಟಮಿನ್ ಎ ಕೊರತೆಯು ನಿಮ್ಮ ಕಣ್ಣುಗಳು ಅಥವಾ ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರಬಹುದು ಅಥವಾ ಮಗುವಿನ ಬೆಳವಣಿಗೆಯ ಮೇಲೂ ಪರಿಣಾಮ ಬೀರಬಹುದು. ದೇಹವು ಜೀವಸತ್ವಗಳನ್ನು ಉತ್ಪಾದಿಸಲು ಸಾಧ್ಯವಿಲ್ಲದ ಕಾರಣ, ಆಹಾರದಲ್ಲಿ ಅವುಗಳನ್ನು ಸೇರಿಸಿಕೊಳ್ಳಬೇಕು.
ವಿಟಮಿನ್ ಎ ಕೊರತೆಯಿಂದ ಉಂಟಾಗುವ ಕಾರಣಗಳು ಕಣ್ಣಿನ ಸಮಸ್ಯೆ: ವಿಟಮಿನ್ ಎ ಕೊರತೆಯ ಸಾಮಾನ್ಯ ಲಕ್ಷಣವೆಂದರೆ ಕಣ್ಣುಗಳಲ್ಲಿನ ಸಮಸ್ಯೆ. ದೃಷ್ಟಿ ಮಂಜಾಗುವುದು, ಕಣ್ಣುಗಳು ಒಣಗಿದಂತಾಗುವುದು, ಕುರುಡುತನ ಅಥವಾ ಕಾರ್ನಿಯಾಗೆ ಹಅನಿಯುಂಟಾಗಬಹುದು.
ಇರುಳುಗಣ್ಣು: ಇದು ಕೂಡ ವಿಟಮಿನ್ ಎ ಕೊರತೆಯ ಸಂಕೇತವಾಗಿದೆ. ದೀರ್ಘಕಾಲದವರೆಗೆ ನಿಮ್ಮ ದೇಹಕ್ಕೆ ವಿಟಮಿನ್ ಕೊರತೆಯುಂಟಾದರೆ ಆಗ ಇರುಳುಗಣ್ಣು ಸಮಸ್ಯೆ ಕಾಡುತ್ತದೆ. ಹಾಗೆಯೇ ನೀವು ವಿಟಮಿನ್ ಎ ಕೊರತೆಯನ್ನು ಹೋಗಲಾಡಿಸಿದರೆ ಈ ಸಮಸ್ಯೆಗಳು ಕೂಡ ದೂರವಾಗಬಹುದು.
ಚರ್ಮದ ಸಮಸ್ಯೆಗಳು: ನಿಮ್ಮ ದೇಹವು ಸಾಕಷ್ಟು ವಿಟಮಿನ್ ಎ ಅನ್ನು ಪಡೆಯದಿದ್ದರೆ, ಚರ್ಮದ ಕೋಶಗಳನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ ಏಕೆಂದರೆ ವಿಟಮಿನ್ ಚರ್ಮಕ್ಕೂ ಮುಖ್ಯವಾಗಿದೆ. ಎಸ್ಜಿಮಾ ಅಥವಾ ಒಣ ಚರ್ಮದಂತಹ ಚರ್ಮದ ಸ್ಥಿತಿಗಳಿಗೆ ಚಿಕಿತ್ಸೆ ನೀಡಲು ವಿಟಮಿನ್ ಎ ಅನ್ನು ಸಹ ಬಳಸಬಹುದು.
ಮಕ್ಕಳ ಬೆಳವಣಿಗೆ ವಿಳಂಬ: ಮಕ್ಕಳಲ್ಲಿ ವಿಟಮಿನ್ ಎ ಕೊರತೆಯಿಂದ ಅವರ ಬೆಳವಣಿಗೆಯ ಮೇಲೆ ಪೆಟ್ಟು ಬೀಳುತ್ತದೆ.