AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರಳವಾಗಿ ಕಾಡುತ್ತಿರುವ ಮಂಕಿಪಾಕ್ಸ್ ಕೊರೊನಾದಂತೆ ಮಾರಕವೇ? ಈ ಸೋಂಕಿಗೆ ಕಾರಣ, ಲಕ್ಷಣ ಮತ್ತು ಚಿಕಿತ್ಸೆಯನ್ನು ತಿಳಿಯೋಣ

Monkeypox: ಮಂಕಿಪಾಕ್ಸ್ ಸೋಂಕಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಕಂಡುಹಿಡಿದಿಲ್ಲ. ಆದಾಗ್ಯೂ, ಮಂಕಿಪಾಕ್ಸ್ ಮತ್ತು ಸಿಡುಬು ವಿರುದ್ಧ ಅಮೆರಿಕದಲ್ಲಿ ಒಂದು ಲಸಿಕೆಗೆ ಪರವಾನಗಿ ನೀಡಲಾಗಿದೆ. ಮಂಕಿಪಾಕ್ಸ್ ಸೋಂಕು ಕೊರೊನಾ ವೈರಸ್ ಅಥವಾ ಇನ್ಫ್ಲುಯೆನ್ಜಾ ದಂತೆ ಹರಡುವುದಿಲ್ಲ ಎಂಬ ಅಭಯವನ್ನ ನೀಡುತ್ತಾರೆ ತಜ್ಞರು.

ವಿರಳವಾಗಿ ಕಾಡುತ್ತಿರುವ ಮಂಕಿಪಾಕ್ಸ್ ಕೊರೊನಾದಂತೆ ಮಾರಕವೇ? ಈ ಸೋಂಕಿಗೆ ಕಾರಣ, ಲಕ್ಷಣ ಮತ್ತು ಚಿಕಿತ್ಸೆಯನ್ನು ತಿಳಿಯೋಣ
ವಿರಳವಾಗಿ ಕಾಡುತ್ತಿರುವ ಮಂಕಿಪಾಕ್ಸ್ ಕೊರೊನಾದಂತೆ ಮಾರಕವೇ? ಈ ಸೋಂಕಿಗೆ ಕಾರಣ, ಲಕ್ಷಣ ಮತ್ತು ಚಿಕಿತ್ಸೆಯನ್ನು ತಿಳಿಯೋಣ
TV9 Web
| Updated By: ಸಾಧು ಶ್ರೀನಾಥ್​|

Updated on: Jul 17, 2022 | 5:00 PM

Share

ಮಂಕಿಪಾಕ್ಸ್ ಎಂಬುದು (Monkeypox) ಸಿಡುಬು ಕುಟುಂಬಕ್ಕೆ ಸೇರಿದ ಅಪರೂಪದ ವೈರಲ್ ಪಾಕ್ಸ್ ತರಹದ ಸೋಂಕು ಕಾಯಿಲೆಯಾಗಿದೆ, ಆದರೆ ಇದು ಸೌಮ್ಯವಾಗಿರುತ್ತದೆ. ಇದು ಉಸಿರಾಟದಿಂದ ಹೊರಸೂಸುವ ಹನಿಗಳು, ದೇಹದಿಂದ ಸ್ರವಿಸುವ ದ್ರವಗಳ ಸ್ಪರ್ಶ ಅಥವಾ ಸೋಂಕಿತ ಪ್ರಾಣಿ ಅಥವಾ ಪ್ರಾಣಿ ಉತ್ಪನ್ನಗಳೊಂದಿಗೆ ಸಂಪರ್ಕವಾದಾಗ ಹರಡಬಹುದು. ಇಂತಹ ರೋಗ ಲಕ್ಷಣವನ್ನು ಮಂಕಿಪಾಕ್ಸ್ ಎಂದು ಕರೆಯಲಾಗುತ್ತದೆ. ಏಕೆಂದರೆ ಇದನ್ನು ಮೊದಲು ಪ್ರಯೋಗಾಲಯದ ಮಂಗಗಳಲ್ಲಿ (laboratory monkeys) ಗುರುತಿಸಲಾಗಿದೆ. ಮಂಕಿಪಾಕ್ಸ್ ಹೆಚ್ಚಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಕಂಡುಬರುತ್ತದೆ.

1970 ರಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಮಂಕಿಪಾಕ್ಸ್​​ ಮೊದಲ ಬಾರಿಗೆ ಮನುಷ್ಯನಲ್ಲಿ ಪ್ರಕರಣ ಪತ್ತೆಯಾಯಿತು. ಅಮೆರಿಕದಲ್ಲಿ ಮೊದಲ ಬಾರಿಗೆ 2003 ರಲ್ಲಿ ಮನುಷ್ಯರಲ್ಲಿ ದೊಡ್ಡದಾಗಿ, ಏಕಾಏಕಿ ಕಾಣಿಸಿಕೊಂಡಿತು. ಆಮದು ಮಾಡಿಕೊಂಡ ಆಫ್ರಿಕಾದ ಇಲಿಗಳಿಂದ ಸಾಕು ನಾಯಿಗಳಲ್ಲಿ ಈ ವೈರಸ್ ಹರಡಿತ್ತು ಎಂಬುದು ಕುತೂಹಲಕರ ಸಂಗತಿ.

  1. ಮಂಕಿಪಾಕ್ಸ್‌ನ ರೋಗ ಲಕ್ಷಣಗಳು ಮತ್ತು ಚಿಕಿತ್ಸೆ: ಮಂಕಿಪಾಕ್ಸ್ ರೋಗಲಕ್ಷಣಗಳು ಸಾಮಾನ್ಯವಾಗಿ ಫ್ಲೂ ತರಹದ ಅನಾರೋಗ್ಯ ಲಕ್ಷಣವಾಗಿದೆ. ಇದು ದುಗ್ಧರಸ ಗ್ರಂಥಿಗಳ ಊತದಿಂದ ಪ್ರಾರಂಭವಾಗುತ್ತವೆ. ನಂತರ ಮುಖ ಮತ್ತು ದೇಹದ ಮೇಲೆ ವ್ಯಾಪಿಸುತ್ತೆ. ಬಹುತೇಕ ಪ್ರಕರಣಗಳಲ್ಲಿ ಈ ಸೋಂಕುಗಳು 2-4 ವಾರಗಳವರೆಗೆ ಇರುತ್ತದೆ. ಮಂಕಿಪಾಕ್ಸ್ ಸೋಂಕಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಕಂಡುಹಿಡಿದಿಲ್ಲ. ಆದಾಗ್ಯೂ, ಮಂಕಿಪಾಕ್ಸ್ ಮತ್ತು ಸಿಡುಬು ವಿರುದ್ಧ ಅಮೆರಿಕದಲ್ಲಿ ಒಂದು ಲಸಿಕೆಗೆ ಪರವಾನಗಿ ನೀಡಲಾಗಿದೆ.
  2. ಮಂಕಿಪಾಕ್ಸ್ ಹೇಗೆ ಹರಡುತ್ತದೆ? ಇಲಿಗಳು, ಹೆಗ್ಗಣಗಳು ಮತ್ತು ಮೊಲಗಳಂತಹ ಪ್ರಾಣಿಗಳಲ್ಲಿ ಸಾಮಾನ್ಯವಾಗಿ ಮಂಕಿಪಾಕ್ಸ್ ಕಂಡುಬರುತ್ತದೆ. ಪ್ರಾಣಿಗಳು ಕಚ್ಚಿದಾಗ ಅಥವಾ ಪರಚಿದಾಗ ಅಥವಾ ಸೋಂಕಿತ ಪ್ರಾಣಿ ಅಥವಾ ಪ್ರಾಣಿ ಉತ್ಪನ್ನಗಳೊಂದಿಗೆ ಸಂಪರ್ಕಕ್ಕೆ ಬಂದಾಗ ಸಹ ಮಂಕಿಪಾಕ್ಸ್ ಸೋಂಕು ಬರುತ್ತದೆ.
  3. ಮಂಕಿಪಾಕ್ಸ್ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ದೇಹದಿಂದ ಸ್ರವಿಸುವ ದ್ರವಗಳು, ದೈಹಿಕ ಗಾಯಗಳು ಅಥವಾ ದೈಹಿಕ ದ್ರವಗಳಿಂದ ಸೋಂಕಿತ ಯಾವುದಾದರೂ ಗಾಯಗಳ ಮೂಲಕ ರವಾನೆಯಾಗಬಹುದು. ಆದರೂ ಇದು ಭಾರೀ ಉಸಿರಾಟದ ಹನಿಗಳ ಮೂಲಕ ಸಾಮಾನ್ಯವಾಗಿ ಕೆಲವೇ ಅಡಿಗಳಷ್ಟು ಪ್ರಯಾಣಿಸಿ, ಹರಡುತ್ತದೆ. ಹೆಚ್ಚಾಗಿ ಈ ವೈರಸ್ ಹರಡಲು ನಿರಂತರ ಮುಖಾಮುಖಿ ಸಂಪರ್ಕವಿದ್ದರೆ ಮಾತ್ರ ಸಾಧ್ಯವಾಗುತ್ತದೆ ಎನ್ನುತ್ತಾರೆ ತಜ್ಞರು.
  4. ಮಂಕಿಪಾಕ್ಸ್ ಕೊರೊನಾದಂತೆ ಮಾರಕವೇ? ಮಂಕಿಪಾಕ್ಸ್ ಸೋಂಕು ಕೊರೊನಾ ವೈರಸ್ ಅಥವಾ ಇನ್ಫ್ಲುಯೆನ್ಜಾ ದಂತೆ ಹರಡುವುದಿಲ್ಲ ಎಂಬ ಅಭಯವನ್ನ ನೀಡುತ್ತಾರೆ ತಜ್ಞರು. ಈ ಮಂಕಿಪಾಕ್ಸ್‌ ಸೋಂಕು 100 ಜನರಲ್ಲಿ ಒಬ್ಬರಿಗೆ ಮಾರಣಾಂತಿಕವಾಗಿದೆ. ಆದರೆ ದುರ್ಬಲಗೊಂಡ ಪ್ರತಿರಕ್ಷಣಾ ವ್ಯವಸ್ಥೆ ಹೊಂದಿರುವವರಲ್ಲಿ ಮರಣ ಪ್ರಮಾಣವು ಹೆಚ್ಚಾಗಿರುತ್ತದೆ. (ಮೂಲ: Reuters Health)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ