BMTC Protest: ಮುಷ್ಕರದಲ್ಲಿ ಭಾಗಿಯಾಗಿದ್ದಕ್ಕೆ ಕೆಲಸದಿಂದ ವಜಾಗೊಂಡಿದ್ದ ಬಿಎಂಟಿಸಿ ಚಾಲಕ ಬೇಸತ್ತು ಆತ್ಮಹತ್ಯೆ

| Updated By: ಸಾಧು ಶ್ರೀನಾಥ್​

Updated on: May 05, 2022 | 5:04 PM

ವಿನೋದ್ ತಮ್ಮ ಸಾರಿಗೆ ಇಲಾಖೆಯ ಮುಷ್ಕರದಲ್ಲಿ ಭಾಗಿಯಾಗಿದ್ದ ಕಾರಣ ವಜಾಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಖಿನ್ನತೆಗೆ ಒಳಗಾಗಿದ್ದ ವಿನೋದ್ ಕುಮಾರ್ ಇಂದು ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

BMTC Protest: ಮುಷ್ಕರದಲ್ಲಿ ಭಾಗಿಯಾಗಿದ್ದಕ್ಕೆ ಕೆಲಸದಿಂದ ವಜಾಗೊಂಡಿದ್ದ ಬಿಎಂಟಿಸಿ ಚಾಲಕ ಬೇಸತ್ತು ಆತ್ಮಹತ್ಯೆ
ಮುಷ್ಕರದಲ್ಲಿ ಭಾಗಿಯಾಗಿದ್ದಕ್ಕೆ ಕೆಲಸದಿಂದ ವಜಾಗೊಂಡಿದ್ದ ಬಿಎಂಟಿಸಿ ಚಾಲಕ ಬೇಸತ್ತು ಆತ್ಮಹತ್ಯೆ
Follow us on

ರಾಯಚೂರು: ಬೆಂಗಳೂರಿನ ಬಿಎಂಟಿಸಿ ಚಾಲಕ ಕಂ ನಿರ್ವಾಹಕ (BMTC Bus Driver) ಕೆಲಸದಿಂದ ವಜಾಗೊಂಡಿದ್ದಕ್ಕೆ ಬೇಸತ್ತು ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ವೀರಾಪುರ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ನಡೆದಿದೆ. ವಿನೋದ್ ಕುಮಾರ್ (42) ನೇಣಿಗೆ ಶರಣಾಗಿರುವ ವ್ಯಕ್ತಿ. ವಿನೋದ ಕುಮಾರ್ ಅವರನ್ನು ಕಳೆದ ವರ್ಷ ಕೆಲಸದಿಂದ ವಜಾಗೊಳಿಸಲಾಗಿತ್ತು. ವಿನೋದ್ ತಮ್ಮ ಸಾರಿಗೆ ಇಲಾಖೆಯ ಮುಷ್ಕರದಲ್ಲಿ (BMTC Protest) ಭಾಗಿಯಾಗಿದ್ದ ಕಾರಣ ವಜಾಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಖಿನ್ನತೆಗೆ ಒಳಗಾಗಿದ್ದ ವಿನೋದ್ ಕುಮಾರ್ ಇಂದು ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಠಾಣೆಯಲ್ಲೇ ಇನ್ಸ್‌ಪೆಕ್ಟರ್ ಬರ್ತ್‌ಡೇ ಆಚರಣೆ!
ಚಾಮರಾಜನಗರದ ಪೂರ್ವ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆನಂದ್ ತಮ್ಮ ಅಧೀನ ಪೊಲೀಸ್ ಠಾಣೆಯಲ್ಲೇ ಬರ್ತ್‌ಡೇ ಆಚರಣೆ ಮಾಡಿದ್ದಾರೆ. ಶಿಸ್ತುಬದ್ಧ ಪೊಲೀಸ್ ಇಲಾಖೆಯಲ್ಲಿ ಸೇವೆಸಲ್ಲಿಸುವವರು ಪೊಲೀಸ್​ ಠಾಣೆಯಲ್ಲಿ ಹುಟ್ಟುಹಬ್ಬ ಆಚರಿಸುವಂತಿಲ್ಲ. ಆದರೂ ಪೊಲೀಸ್‌ ಇಲಾಖೆಯ ಮೂಲ ನಿಯಮವನ್ನೇ ಗಾಳಿಗೆ ತೂರಿದ ಇನ್ಸ್‌ಪೆಕ್ಟರ್‌ ಆನಂದ್ ತಮ್ಮ ಹುಟ್ಟುಹಬ್ಬವನ್ನು  ಚಾಮರಾಜನಗರದ ಪೂರ್ವ ಪೊಲೀಸ್ ಠಾಣೆಯಲ್ಲಿಯೇ ನಿನ್ನೆ ಗುರುವಾರ ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ.

ರಸ್ತೆ ದುರಸ್ತಿಗೆ ಆಗ್ರಹಿಸಿ ರೊಚ್ಚಿಗೆದ್ದ ಆಟೋ ಚಾಲಕರು, ನಗರಸಭೆ ಸಾಮಾನ್ಯ ಸಭೆಗೆ ನುಗ್ಗಿ ಆಕ್ರೋಶ
ಗದಗ-ಬೆಟಗೇರಿ ನಗರಸಭೆ ಸಭಾಂಗಣದಲ್ಲಿಂದು ಸಾಮಾನ್ಯ ಸಭೆ ನಡೆದಿದ್ದು, ರಸ್ತೆ ದುರಸ್ತಿಗಾಗಿ ಆಗ್ರಹಿಸಿ ರೊಚ್ಚಿಗೆದ್ದ ಆಟೋ ಚಾಲಕರು ನಗರಸಭೆ ಸಾಮಾನ್ಯ ಸಭೆಗೆ ನುಗ್ಗಿ ಆಕ್ರೋಶ ಹೊರಹಾಕಿದ್ದಾರೆ. ನಗರಸಭೆ ಅಧ್ಯಕ್ಷರ ನೇತೃತ್ವದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸಾಮಾನ್ಯ ಸಭೆ ನಡೆಯುತ್ತಿತ್ತು. ಆ ವೇಳೆ, ಸಭೆಯ ಮಧ್ಯದಲ್ಲಿಯೇ ಪೌರಾಯುಕ್ತರಿಗೆ, ಅಧ್ಯಕ್ಷೆಗೆ ಆಟೋ ಚಾಲಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ.

ಆಟೋ ಚಾಲಕರ ಹಠಕ್ಕೆ ಮಣಿದ ಪೌರಾಯುಕ್ತರು, ಅಧ್ಯಕ್ಷೆ:
ಸಿಎಂ ಬಂದಾಗ ರಸ್ತೆ ದುರಸ್ತಿ ಮಾಡ್ತೀರಿ, ನಮಗೆ ಅನಾನುಕೂಲವಾದಾಗ ರಸ್ತೆ ದುರಸ್ತಿ ಮಾಡಲ್ಲ. ಹೊಸ ಬಸ್ ನಿಲ್ದಾಣಕ್ಕೆ ಹೋಗೋ ರಸ್ತೆ, ಮಹಾತ್ಮ ಗಾಂಧಿ ಸರ್ಕಲ್ ರಸ್ತೆ ಸೇರಿದಂತೆ ಹಲವು ರಸ್ತೆಗಳು ಕೂಡಲೇ ದುರಸ್ತಿಯಾಗಬೇಕು ಅಂತಾ ಆಕ್ರೋಶಭರಿತ ಆಟೋ ಚಾಲಕರು ಪಟ್ಟುಹಿಡಿದರು. ಇದರಿಂದ ಗಲಿಬಿಲಿಗೊಂಡ ಪೌರಾಯುಕ್ತರು ಮತ್ತು ಅಧ್ಯಕ್ಷೆ ಆಟೋ ಚಾಲಕರ ಹಠಕ್ಕೆ ಮಣಿದು, ಬೇಡಿಕೆ ಈಡೇರಿಸುವ ಬಗ್ಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ನಾಳೆಯೇ ಖುದ್ದು ಭೇಟಿ ನೀಡಿ, ರಸ್ತೆ ದುರಸ್ತಿ ಮಾಡುವುದಾಗಿ ಅಧಿಕಾರಿಗಳು ಸಹ ಭರವಸೆ ನೀಡಿದರು.

ಅವಳಿ ನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಹಿನ್ನೆಲೆ ಕುಡಿಯುವ ನೀರಿನ ಬಗ್ಗೆ ಚರ್ಚಿಸಲು ಅಧ್ಯಕ್ಷೆ ಉಷಾ ದಾಸರ್ ಇಂದು ಗದಗ ಬೆಟಗೇರಿ ನಗರಸಭೆಯ ತುರ್ತು ಸಾಮಾನ್ಯ ಸಭೆ ಕರೆದಿದ್ದರು. ಆ ವೇಳೆ ಅವಳಿ ನಗರದ ರಸ್ತೆ ಹದಗೆಟ್ಟ ರಸ್ತೆಗಳಿಂದ ರೋಸಿ ಹೋದ ಸಾರ್ವಜನಿಕರು ಮತ್ತು ಆಟೋ ಚಾಲಕರು ಸಾಮಾನ್ಯ ಸಭೆಗೆ ನುಗ್ಗಿದ್ದರು.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  

Also Read: Video: ರಷ್ಯಾ ಸೈನಿಕರ ಆಕ್ರಮಣದಿಂದ ಕಾಲು-ಕೈಬೆರಳುಗಳನ್ನು ಕಳೆದುಕೊಂಡ ನರ್ಸ್​ ಮದುವೆ; ಮನಕಲಕುವ ಸನ್ನಿವೇಶಕ್ಕೆ ಸಾಕ್ಷಿಯಾದ ಆಸ್ಪತ್ರೆ ಸಿಬ್ಬಂದಿ

Also Read: ಸಮಂತಾ ನಟನೆಯ ‘ಯಶೋದ’ ಸಿನಿಮಾ ಹೇಗಿರಲಿದೆ?; ಇಲ್ಲಿದೆ ಝಲಕ್

Published On - 4:58 pm, Thu, 5 May 22