AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Raichuru News: ಶಾಸಕಿಗೆ ನಿಂದನೆ, ಬಿಜೆಪಿ ಕಾರ್ಯಕರ್ತರ ವಿರುದ್ಧ FIR​ ದಾಖಲು

ದೇವದುರ್ಗ ಶಾಸಕಿ ಕರಿಯಮ್ಮ ಜಿ. ನಾಯಕ್​ ಅವರಿಗೆ ಅವಾಚ್ಯ ಶಬ್ದದಿಂದ ನಿಂದಿಸಿದ ಆರೋಪದಡಿ 8 ಜನ ಬಿಜೆಪಿ ಕಾರ್ಯಕರ್ತರ ವಿರುದ್ಧ ದೇವದುರ್ಗ ಠಾಣೆಯಲ್ಲಿ ಎಫ್​​ಐಆರ್​ ದಾಖಲಾಗಿದೆ.

Raichuru News: ಶಾಸಕಿಗೆ ನಿಂದನೆ, ಬಿಜೆಪಿ ಕಾರ್ಯಕರ್ತರ ವಿರುದ್ಧ FIR​ ದಾಖಲು
ಶಾಸಕಿ ಕರಿಯಮ್ಮ ಜಿ. ನಾಯಕ್
ವಿವೇಕ ಬಿರಾದಾರ
|

Updated on:Jun 06, 2023 | 9:20 AM

Share

ರಾಯಚೂರು: ದೇವದುರ್ಗ ಶಾಸಕಿ ಕರಿಯಮ್ಮ ಜಿ. ನಾಯಕ್​ (Kariyamma Nayak) ಅವರಿಗೆ ಅವಾಚ್ಯ ಶಬ್ದದಿಂದ (Abusing vlogger) ನಿಂದಿಸಿದ ಆರೋಪದಡಿ 8 ಜನ ಬಿಜೆಪಿ ಕಾರ್ಯಕರ್ತರ (BJP Activists) ವಿರುದ್ಧ ದೇವದುರ್ಗ ಠಾಣೆಯಲ್ಲಿ ಎಫ್​​ಐಆರ್ (FIR)​ ದಾಖಲಾಗಿದೆ. ಅರಕೇರಾ ತಾಲೂಕಿನ ಆಲದಮರ ತಾಂಡಾದಲ್ಲಿ ಜೂ.4ರಂದು ವಿದ್ಯುತ್ ತಂತಿ ತಗುಲಿ ಲೈನ್​​ಮ್ಯಾನ್ ವಿರೂಪಾಕ್ಷ ಸಾವನ್ನಪ್ಪಿದ್ದರು. ಘಟನಾ ಸ್ಥಳಕ್ಕೆ ಶಾಸಕಿ ಕರಿಯಮ್ಮ ನಾಯಕ್ ತಡವಾಗಿ ಆಗಮಿಸಿದ್ದರು. ಈ ವೇಳೆ ಶಾಸಕಿ ಕರಿಯಮ್ಮ ನಾಯಕ್​ ಅವರಿಗೆ ಬಿಜೆಪಿ ಕಾರ್ಯಕರ್ತರು ​ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆಂಬ ಆರೋಪದಡಿ ಎಫ್​​ಐಆರ್ ದಾಖಲಾಗಿದೆ.

ಏನಿದು ಪ್ರಕರಣ?

ಜಿಲ್ಲೆಯ ಅರಕೇರಾ ತಾಲ್ಲೂಕಿನ ಆಲದಮರದ ತಾಂಡದಲ್ಲಿ  ಜೂನ್ 4ರಂದು ವಿದ್ಯುತ್ ತಗುಲಿ ಲೈನ್ ಮ್ಯಾನ್ ಸಾವನ್ನಪ್ಪಿದ್ದರು. ವಿರೂಪಾಕ್ಷ (28) ಮೃತ ರ್ದುದೈವಿ. ವಿರೂಪಾಕ್ಷ ಅರಕೇರಾ ಜುಟಮರಡಿ ಕೆಇಬಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.  ಜೂ.4 ರಂದು ವಿದ್ಯುತ್ ಪೂರೈಕೆಯ ಸಮಸ್ಯೆಯನ್ನು ಪರಿಹರಿಸಲು ಕಂಬ ಹತ್ತಿದ್ದರು.

ಇದನ್ನು ಓದಿ: ನರೇಗಾ ಕೆಲಸದ ವೇಳೆ ಕೆರೆಗೆ ನೀರು ಕುಡಿಯಲು ಹೋದ ಅಣ್ಣನ ಮಗನ ಜೊತೆ ಚಿಕ್ಕಪ್ಪ ಸಾವು

ಈ ವೇಳೆ ವಿದ್ಯುತ್ ಶಾಕ್ ಹೊಡೆದಿದ್ದು, ವಿದ್ಯುತ್ ಕಂಬದ ಮೇಲೆಯೇ ಕೊನೆಯುಸಿರೆಳದಿದ್ದರು. ಈ ಕುರಿತು ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ವೇಳೆ ಘಟನಾ ಸ್ಥಳಕ್ಕೆ ಶಾಸಕಿ ಕರೆಮ್ಮ‌ ನಾಯಕ್ ಆಗಮಿಸಿದ್ದರು.

ಶಾಸಕಿ ಕರೆಮ್ಮ ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ, ಬಿಜೆಪಿ ಮುಖಂಡರು ಅಶ್ಲೀಲ ಪದಗಳಿಂದ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ. ಶಾಸಕಿ ಅವರನ್ನು ನಿಂದಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:12 am, Tue, 6 June 23