Raichuru News: ಯಾವ ಘಳಿಗೆಯಲ್ಲಿ ಸಿದ್ದರಾಮಣ್ಣ ಸಿಎಂ ಆದ್ರೋ 2013ರಲ್ಲೂ ಬರಗಾಲ ಈಗಲೂ ಬರಗಾಲ – ಮಾಲೀಕಯ್ಯ ಗುತ್ತೆದಾರ್

|

Updated on: Jun 23, 2023 | 8:37 PM

ಸರ್ಕಾರಕ್ಕೆ ಗ್ಯಾರಂಟಿ ಪೂರೈಸಲು ಆಗುತ್ತಿಲ್ಲ. ಅಧಿಕಾರಕ್ಕೆ ಬಂದ 40 ದಿನಗಳಲ್ಲಿ ಜನ ಸರ್ಕಾರದ ವಿರುದ್ಧ ರಸ್ತೆಗಿಳಿದಿದ್ದು ಇದೇ ಮೊದಲ ಬಾರಿ. ಅದು ಕಾಂಗ್ರೆಸ್ ಸರ್ಕಾರದಲ್ಲಿ. ಸಾರಿಗೆ ಸಿಬ್ಬಂದಿಗೆ ಸಂಬಳ ಕೊಡಲು ಆಗುತ್ತಿಲ್ಲ. ಪುಕ್ಕಟ್ಟೆ ಗಿರಾಕಿ ಅಂತ ಮಹಿಳೆಯರು ಕಂಡಲ್ಲಿ ಚಾಲಕರು ಬಸ್​​ ನಿಲ್ಲಿಸುತ್ತಿಲ್ಲ. ಇನ್ನೊಂದು ತಿಂಗಳಾದರೇ ರೈತರು ಕೂಡ ಪರಿಹಾರ ಕೊಡಿ ಅಂತ ಹೋರಾಟ ಮಾಡುತ್ತಾರೆ ಎಂದು ಮಾಲೀಕಯ್ಯ ಗುತ್ತೆದಾರ್ ಹೇಳಿದರು.

Raichuru News: ಯಾವ ಘಳಿಗೆಯಲ್ಲಿ ಸಿದ್ದರಾಮಣ್ಣ ಸಿಎಂ ಆದ್ರೋ 2013ರಲ್ಲೂ ಬರಗಾಲ ಈಗಲೂ ಬರಗಾಲ - ಮಾಲೀಕಯ್ಯ ಗುತ್ತೆದಾರ್
ಬಿಜೆಪಿ ನಾಯಕ ಮಾಲೀಕಯ್ಯ ಗುತ್ತೆದಾರ್
Follow us on

ರಾಯಚೂರು: ಯಾವ ಘಳಿಗೆಯಲ್ಲಿ ಸಿದ್ದರಾಮಣ್ಣ (Siddaramaiah) ಮುಖ್ಯಮಂತ್ರಿಯಾದ್ರೋ ಅವರ ಕಾಲ್ಗುಣ 2013ರಲ್ಲೂ ಬರಗಾಲ (Drought) ಈಗಲೂ ಬರಗಾಲ ಎಂದು ಬಿಜೆಪಿ (BJP) ಮುಖಂಡ ಮಾಲೀಕಯ್ಯ ಗುತ್ತೆದಾರ್ (Malikayya Guttedar) ವ್ಯಂಗ್ಯವಾಡಿದ್ದಾರೆ. ಸರ್ಕಾರಕ್ಕೆ ಗ್ಯಾರಂಟಿ ಪೂರೈಸಲು ಆಗುತ್ತಿಲ್ಲ. ಅಧಿಕಾರಕ್ಕೆ ಬಂದ 40 ದಿನಗಳಲ್ಲಿ ಜನ ಸರ್ಕಾರದ ವಿರುದ್ಧ ರಸ್ತೆಗಿಳಿದಿದ್ದು ಇದೇ ಮೊದಲ ಬಾರಿ. ಅದು ಕಾಂಗ್ರೆಸ್ (Congress) ಸರ್ಕಾರದಲ್ಲಿ. ಸಾರಿಗೆ ಸಿಬ್ಬಂದಿಗೆ ಸಂಬಳ ಕೊಡಲು ಆಗುತ್ತಿಲ್ಲ. ಪುಕ್ಕಟ್ಟೆ ಗಿರಾಕಿ ಅಂತ ಮಹಿಳೆಯರು ಕಂಡಲ್ಲಿ ಚಾಲಕರು ಬಸ್​​ ನಿಲ್ಲಿಸುತ್ತಿಲ್ಲ. ಇನ್ನೊಂದು ತಿಂಗಳಾದರೇ ರೈತರು ಕೂಡ ಪರಿಹಾರ ಕೊಡಿ ಅಂತ ಹೋರಾಟ ಮಾಡುತ್ತಾರೆ ಎಂದರು.

ರಾಯಚೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಈಗ ಚುನಾವಣೆ ನಡೆದರೇ ಕಾಂಗ್ರೆಸ್​ಗೆ 60 ಸೀಟ್​ ಬರಲ್ಲ. ಅಷ್ಟರಮಟ್ಟಿಗೆ ಜನರಿಗೆ ಕಾಂಗ್ರೆಸ್ ಸರ್ಕಾರದ ಕಥೆ ಗೊತ್ತಾಗಿದೆ. ಪಾರ್ಲಿಮೆಂಟ್ ಚುನಾವಣೆ ವೇಳೆ ರಾಜ್ಯ ಸರ್ಕಾರ ಬೀಳುವ ರೀತಿ ಕಾಣತ್ತೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಹೇಗೆ ಹೋಳಾಯ್ತು. ಇಲ್ಲಿ ಕಾಂಗ್ರೆಸ್ ಪಕ್ಷ ಉಳಿದಿದೆ. ಐದಾರು ತಿಂಗಳಲ್ಲಿ‌ ಇಲ್ಲೂ ಹಾಗೆ ಆಗತ್ತೆ. ಡಿ.ಕೆ.ಶಿವಕುಮಾರ್ ತುರ್ತಾಗಿ ಮುಖ್ಯಮಂತ್ರಿ ಆಗಬೇಕು ಅಂತಿದ್ದಾರೆ. ಸಿದ್ದರಾಮಣ್ಣನ ಚೇಲಾಗಳು ಸಿದ್ದರಾಮಯ್ಯ 5 ವರ್ಷ ಸಿಎಂ ಅಂತಾರೆ. ಕಾಂಗ್ರೆಸ್​ ಪಕ್ಷದಲ್ಲಿ ಚೆನ್ನಾಗಿ ಬೆಂಕಿ‌ ಹತ್ತಿದೆ ಎಂದು ಹೇಳಿದರು.

ಚುನಾವಣೆ ವೇಳೆ ಸಿದ್ದರಾಮಯ್ಯ ಕುಣಿದು ಕುಣಿದು ಮಾತನಾಡಿದರು. ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತ ಎಂದು ಹೇಳಿದರು. ರಾಜ್ಯ ಕಾಂಗ್ರೆಸ್​ ಸರ್ಕಾರ ದಿವಾಳಿಯಾಗುತ್ತಿದೆ. ಕೈಗಾರಿಕೆ ಬಂದ್ ಆಗುತ್ತಿವೆ, ಕೆಲವೇ ದಿನದಲ್ಲಿ ಬಸ್ ಬಂದ್ ಆಗಲಿವೆ ಎಂದು ಭವಿಷ್ಯ ನುಡಿದರು.

ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ರಾಜ್ಯದ ನಾಯಕರೇ ಕಾರಣ

ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ರಾಜ್ಯದ ನಾಯಕರೇ ಕಾರಣ. ನಮ್ಮ ಸರ್ಕಾರಕ್ಕೆ ಜಂಬ ಬಂದಿತ್ತು, ನಮ್ಮ ಸರ್ಕಾರ ಆಕಾಶದಲ್ಲಿತ್ತು. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ತಲುಪಿಸಬೇಕಿತ್ತು. ಚುನಾವಣೆಯಲ್ಲಿ ಎಲ್ಲಾ ಕೇಂದ್ರ ಸರ್ಕಾರ ಕಾರ್ಯಕ್ರಮಗಳನ್ನು ಹೇಳುತ್ತಿದ್ದರು. ಏನಿದ್ದರೂ ನರೇಂದ್ರ ಮೋದಿ ಹೆಸರಿನಲ್ಲಿ ವೋಟ್ ಪಡೆಯಬೇಕು. ರಾಜ್ಯದಲ್ಲಿ ನರೇಂದ್ರ ಮೋದಿಯವರು 35 ಱಲಿ ಮಾಡಬೇಕು. ಹಾಗಾದರೇ ನೀವ್ಯಾಕೆ ಇದ್ದೀರಪ್ಪಾ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಎದುರೇ ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಬಿಜೆಪಿ, ಜೆಡಿಎಸ್​ ಹೊಂದಾಣಿಕೆ ಮಾತು; ಅಚ್ಚರಿ ಹೇಳಿಕೆ ನೀಡಿದ ಸಿಪಿ ಯೋಗೇಶ್ವರ

ಇಂತಹ ಪರಿಸ್ಥಿತಿ ಬಿಜೆಪಿಗೆ ಬಂದಿರುವುದು ಬಹಳ ನೋವಾಗುತ್ತೆ. ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರು ಒಳ್ಳೆ ಆಡಳಿತ ನಡೆಸುತ್ತಿದ್ದರು. ಸುಮ್ಮನೆ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಈಗಲೂ ಬಿ.ಎಸ್.ಯಡಿಯೂರಪ್ಪ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ.

ವಿ.ಸೋಮಣ್ಣ ಹಿರಿಯ ನಾಯಕರು, ಅಪೇಕ್ಷೆ ಪಟ್ಟಿದ್ದು ತಪ್ಪಿಲ್ಲ

ವಿ.ಸೋಮಣ್ಣ ಹಿರಿಯ ನಾಯಕರು, ಅಪೇಕ್ಷೆ ಪಟ್ಟಿದ್ದು ತಪ್ಪಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಅಥವಾ ಮುಂದುವರಿಕೆ ಕುರಿತು ನಮ್ಮ ರಾಷ್ಟ್ರೀಯ ನಾಯಕರು ತೀರ್ಮಾನಿಸಲಿದ್ದಾರೆ. ವಿ.ಸೋಮಣ್ಣ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಸಿದ್ದರಾಮಣ್ಣ ಎದುರು ಫೈಟ್ ಮಾಡಿದ್ದಾರೆ, ರಿಸ್ಕ್ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಹೇಳಿಕೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ