ಅದು ಇಡೀ ಇಲಾಖೆಯನ್ನ ಬೆಚ್ಚು ಬೀಳುವಂತೆ ಮಾಡಿರೊ ಪ್ರಕರಣ.. ಅಲ್ಲಿ ನಕಲಿ (Fake) ಆಶಾ ಕಾರ್ಯಕರ್ತೆಯರನ್ನ ಸೃಷ್ಟಿಸಿ ಹಣ (money) ಪೀಕುತ್ತಿರೊ ಅಕ್ರಮದ ಆರೋಪ ಕೇಳಿಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಓರ್ವ ಮಹಿಳೆ ಆಶಾ ಕಾರ್ಯಕರ್ತೆ (Asha workers) ಅಲ್ಲದಿದ್ದರೂ ಆಕೆಯ ಹೆಸರು ನಮೂದಿಸಿ ಎರಡು ವರ್ಷಗಳಿಂದ ಹಣ ಲಪಟಾಯಿಸಿರೋದು ಬೆಳಕಿಗೆ ಬಂದಿದೆ. ಹೌದು..ರಾಯಚೂರು (Raichur) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೆಲ ಅಧಿಕಾರಿಗಳ ವಿರುದ್ಧ ಈಗ ಗಂಭೀರ ಆರೋಪ ಕೇಳಿ ಬಂದಿದೆ. ಆ ಅಕ್ರಮ ಎಂಥದ್ದು ಅಂತ ನೋಡಿದ್ರೆ ನೀವೇ ಬೆಚ್ಚಿ ಬೀಳ್ತಿರಾ. ಅಸಲಿಗೆ ಅವರು ಆಶಾ ಕಾರ್ಯಕರ್ತರೇ ಅಲ್ಲದಿದ್ದರೂ ಕೆಲ ಮಹಿಳೆಯರ ಹೆಸರನ್ನ ಟಿಬಿಟಿಯಲ್ಲಿ ನಮೂದಿಸಿ ಹಣ ಪೀಕುತ್ತಿರೊ ಗಂಭೀರ ಆರೋಪವದು.
ಅಷ್ಟಕ್ಕೂ ಇಲ್ಲಿ ಅಕ್ರಮ ಜಾಲದಲ್ಲಿ ಸಿಲುಕಿರುವವರು ಜಿಲ್ಲಾ ಆಶಾ ಕಾರ್ಯಕರ್ತೆಯರ ಮೇಲ್ವಿಚಾರಕಿ ಕೃಷ್ಣವೇಣಿ ಅನ್ನೋರು. ಈ ಮಹಿಳೆ ಜಿಲ್ಲೆಯ ಆಶಾ ಕಾರ್ಯಕರ್ತೆಯರ ನೇತೃತ್ವ ವಹಿಸಿದ್ದಾರೆ. ಆದ್ರೆ ಇದೇ ಮೇಲ್ವಿಚಾರಕಿಯೇ ಈಗ ಅಕ್ರಮದಲ್ಲಿ ಭಾಗಿಯಾಗಿರೊ ಆರೋಪ ಕೇಳಿ ಬಂದಿದ್ದು, ಇದಕ್ಕೆ ಡಿಎಚ್ ಓ ಕಚೇರಿಯ ಅಧಿಕಾರಿಗಳ ಕುಮ್ಮಕ್ಕು ಇರೋ ಆರೋಪ ಕೇಳಿಬಂದಿದೆ. ಈ ಬಗ್ಗೆ ಅಂಬಾಜಿ ಅನ್ನೊ ಸಾಮಾಜಿಕ ಹೋರಾಟಗಾರ ದಾಖಲೆಗಳ ಸಮೇತ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಹೌದು..ಕೃಷ್ಣವೇಣಿ ಅನ್ನೋ ಆಶಾ ಕಾರ್ಯಕರ್ತೆಯರ ಮೇಲ್ವಿಚಾರಕಿ ತನ್ನ ಮಹಿಳಾ ಸಂಬಂಧಿ ಪರಿಮಳ ಅನ್ನೋರು ಆಶಾ ಕಾರ್ಯಕರ್ತೆ ಅಲ್ಲದಿದ್ದರೂ ಆಕೆ ಹೆಸರಲ್ಲಿ ಟಿಬಿಟಿ ಅಂದ್ರೆ ಆಶಾ ಕಾರ್ಯಕರ್ತೆಯರ ಪೋರ್ಟಲ್ನಲ್ಲಿ ದಾಖಲು ಮಾಡಿಸಿದ್ದಾರೆ. ಆಕೆ ಆಶಾ ಕಾರ್ಯಕರ್ತೆ ಎಂದು ದಾಖಲೆ ಸೃಷ್ಟಿಸಲಾಗಿದೆಯಂತೆ.
Also Read: ಸಹ ವ್ಯಾಪಾರಿಯೇ ಒಂಟಿ ಮನೆ ದರೋಡೆ ಮಾಡಲು ಮೋಸ್ಟ್ ವಾಂಟೆಡ್ ಗ್ಯಾಂಗ್ಗೆ ಸುಪಾರಿ ನೀಡಿದ್ದ!
ನಂತರ ಪರಿಮಳ ಹೆಸರಿನಲ್ಲಿ ನಿರಂತರವಾಗಿ ಎರಡೂವರೆ ವರ್ಷಗಳಿಂದ ಆಶಾ ಕಾರ್ಯಕರ್ತೆಯರಿಗೆ ಸಿಗುವ ಗೌರವ ಧನ ಸೀದಾ ಅವರ ಅಕೌಂಟ್ಗೆ ಜಮೆ ಆಗಿದೆಯಂತೆ. ಹೀಗೆ ಲಕ್ಷಾಂತರ ರೂ ವಂಚಿಸಲಾಗಿದ್ದು, ಇದರಲ್ಲಿ ಡಿಚ್ಓ ಕಚೇರಿಯ ಪ್ರಮುಖರು ಭಾಗಿಯಾಗಿರೊ ಆರೋಪವೂ ಇದೆ.
ಬರೀ ಇದೊಂದೇ ಪ್ರಕರಣ ಸದ್ಯ ಬೆಳಕಿಗೆ ಬಂದಿದೆ. ಆದ್ರೆ ಇದೇ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ನಕಲಿ ಆಶಾ ಕಾರ್ಯಕರ್ತೆಯರನ್ನ ಸೇರಿಸಿರೊ ಶಂಕೆ ವ್ಯಕ್ತವಾಗಿದೆ. ದೂರುದಾರ ಅಂಬಾಜಿ ಅವರು ಜಿಲ್ಲಾಧಿಕಾರಿ, ಸಿಇಓಗೆ ದೂರು ನೀಡಿದ್ದಾರೆ. ಈ ಬಗ್ಗೆ ಡಿಎಚ್ಓ ಕಚೇರಿಯ ಹಿರಿಯ ಅಧಿಕಾರಿಗೆ ತನಿಖೆ ಜವಾಬ್ದಾರಿ ವಹಿಸಲಾಗಿದೆಯಾದರೂ ಈ ವರೆಗೂ ವರದಿ ನೀಡಿಲ್ಲ ಅನ್ನೋ ಆರೋಪವೂ ಕೇಳಿಬಂದಿದೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೊ ಡಿಎಚ್ಓ ಸುರೇಂದ್ರ ಬಾಬು ಈ ಬಗ್ಗೆ ತನಿಖೆ ನಡೆಸಲಾಗ್ತಿದೆ ಅಂತ ಪ್ರತಿಕ್ರಿಯಿಸಿದ್ದಾರೆ.
ಅದೇನೆ ಇರ್ಲಿ ಈ ಬಗ್ಗೆ ಆರೋಗ್ಯ ಇಲಾಖೆ ಗಮನಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕಿದೆ. ಇಲ್ದಿದ್ರೆ ಈ ದಂಧೆ ಹೆಮ್ಮರವಾಗಿ ಬೆಳೆಯೋದ್ರಲ್ಲಿ ಅಚ್ಚರಿಯಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ