ಸಹ ವ್ಯಾಪಾರಿಯೇ ಒಂಟಿ ಮನೆ ದರೋಡೆ ಮಾಡಲು ಮೋಸ್ಟ್ ವಾಂಟೆಡ್‌ ಗ್ಯಾಂಗ್​ಗೆ ಸುಪಾರಿ ನೀಡಿದ್ದ!

ಎಸ್ಟೇಟ್ ಒಂಟಿ ಮನೆಯೊಳಗೆ ರಾತ್ರೋರಾತ್ರಿ ನುಗ್ಗಿದ್ದ ದರೋಡೆಕೋರರ ಗ್ಯಾಂಗ್​​ ಮನೆಯಲ್ಲಿದವರ ಮೇಲೆ ಅಟ್ಯಾಕ್ ಮಾಡಿ ಹಣ, ಚಿನ್ನ ಕದ್ದು ಎಸ್ಕೇಪ್ ಆಗಿದ್ದರು. 10 ವರ್ಷದಿಂದ ಜೊತೆಯಲ್ಲಿದ್ದು ಮೆಣಸು ಖರೀದಿಸುತ್ತಿದ್ದ ವ್ಯಾಪಾರಿಯೇ ಮೋಸ್ಟ್ ವಾಂಟೆಡ್‌ ಕಳ್ಳರ ಗ್ಯಾಂಗ್​​ಗೆ ಸುಪಾರಿ ನೀಡಿದ್ದ.

ಸಹ ವ್ಯಾಪಾರಿಯೇ ಒಂಟಿ ಮನೆ ದರೋಡೆ ಮಾಡಲು ಮೋಸ್ಟ್ ವಾಂಟೆಡ್‌ ಗ್ಯಾಂಗ್​ಗೆ ಸುಪಾರಿ ನೀಡಿದ್ದ!
ಸಹ ವ್ಯಾಪಾರಿಯೇ ಒಂಟಿ ಮನೆ ದರೋಡೆ ಮಾಡಲು ಮೋಸ್ಟ್ ವಾಂಟೆಡ್‌ ಗ್ಯಾಂಗ್​ಗೆ ಸುಪಾರಿ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಸಾಧು ಶ್ರೀನಾಥ್​

Updated on: Feb 29, 2024 | 11:42 AM

ಅದು ಕಾಡಂಚಿನ ಕಾಫಿ ಎಸ್ಟೇಟ್, ಆ ಎಸ್ಟೇಟ್ನೊಳಗಿದ್ದ ಮನೆಯಲ್ಲಿ ಲಕ್ಷಾಂತರ ರೂಪಾಯಿ ದುಡ್ಡು, ಕೋಟ್ಯಂತರ ರೂಪಾಯಿ ಬೆಲೆಬಾಳುವ ಕಾಫಿ, ಮೆಣಸು, ಅಡಕೆ ಸಂಗ್ರಹಿಸಿಟ್ಟಿದ್ರು. ರಾತ್ರೋರಾತ್ರಿ ಮಾರಕಸ್ತ್ರಗಳನ್ನು ಹಿಡಿದು ಬಂದ ಗ್ಯಾಂಗ್ ಒಂದು ಆ ಮನೆ ಒಳಗೆ ನುಗ್ಗಿತ್ತು. ಸಿಕ್ಕ ಸಿಕ್ಕವರ ಮೇಲೆ ಮಚ್ಚು ಬಿಸಿ ರಕ್ತಪಾತ ನಡೆಸಿ ಕಳ್ಳತನ ಮಾಡಿ (Robbery) ಎಸ್ಕೇಪ್ ಆಗಿದ್ರು. ಆ ಕಳ್ಳರ ಗ್ಯಾಂಗ್ ಬೆನ್ನು ಬಿದ್ದ ಪೊಲೀಸ್ರು ಕಳ್ಳರನ್ನ ಹಿಡಿದು ತಂದಿದ್ರು. ಎಸ್ಟೇಟ್ ಒಂಟಿ ಮನೆಯಲ್ಲಿ ಕಳ್ಳತನ ಮಡಿದ್ದು ಯಾರು ಎಂದು ಗೊತ್ತಾಗುತ್ತಿದ್ದಂತೆಯೇ ಇಡೀ ಚಿಕ್ಕಮಗಳೂರೇ ಬೆಚ್ಚಿಬಿದ್ದಿದೆ. ಅದು ಫೆಬ್ರವರಿ 15 ರ ರಾತ್ರಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ (Balur, Mudigere) ಕಾಡಂಚಿನ ಗ್ರಾಮವಾದ ಜಿ. ಹೊಸಳ್ಳಿಯಲ್ಲಿ‌ ರಾತ್ರೋರಾತ್ರಿ 6 ಜನರ ತಂಡ (Most Wanted) ಕಾಫಿ ಎಸ್ಟೇಟ್ ನಲ್ಲಿದ್ದ ಒಂಟಿ ಮನೆಗೆ ನುಗ್ಗಿತ್ತು. ಮನೆಯಲ್ಲಿದ್ದವರ ಮೇಲೆ ಖಾರದಪುಡಿ ಎರಚಿ, ಮಚ್ಚು ಬೀಸಿ, ಮನೆಯೊಳಗೆ ನುಗ್ಗಿ ಬಂದ ಗ್ಯಾಂಗ್ ಮನೆಯಲ್ಲಿ ಸಿಕ್ಕ 5 ಲಕ್ಷ ಹಣದ ಜೊತೆಗೆ ಚಿನ್ನ ದೋಚಿ ಪರಾರಿಯಾಗಿತ್ತು. ಮಚ್ಚಿನೇಟಿಗೆ ಎಸ್ಟೇಟ್ ಮಾಲೀಕ ಅನಂತರಾಮ್ ಸೇರಿದಂತೆ ಮ್ಯಾನೇಜರ್ ಶ್ರೀನಿವಾಸ ಮೂರ್ತಿ ರಕ್ತದ ಮಡುವಿನಲ್ಲಿ ಬಿದ್ದಿದ್ರು.

ಜಿ. ಹೊಸಳ್ಳಿ‌ ಗ್ರಾಮದ ಕಾಫಿ ಎಸ್ಟೇಟ್ ನೊಳಗಿನ ಒಂಟಿ ಮನೆಯಲ್ಲಿ ನಡೆದ ದರೋಡೆಯಿಂದ ಚಿಕ್ಕಮಗಳೂರು ಅಕ್ಷರಶಃ ಬೆಚ್ಚಿ ಬಿದ್ದಿತ್ತು. ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಅಡಿಷನಲ್ ಎಸ್ಪಿ ನೇತೃತ್ವದಲ್ಲಿ ನಾಲ್ಕು ಪೊಲೀಸರ ತಂಡ ರಚನೆ ಮಾಡಿ ಕಳ್ಳರ ಬಂಧನಕ್ಕೆ ಬಲೆ ಬೀಸಿದ್ರು. ಮಂಗಳೂರು ಸೇರಿದಂತೆ ಶಿವಮೊಗ್ಗ, ಹಾಸನದಲ್ಲಿ ತಲೆಮರೆಸಿಕೊಂಡಿದ್ದ 7 ಜನರನ್ನ ಬಂಧಿಸಿದ ಪೊಲೀಸ್ರು ಕಳ್ಳತನದ ಪ್ಲಾನ್ ಕೇಳಿ ಬೆಚ್ಚಿ ಬಿದ್ದಿದ್ರೆ, ಇತ್ತಎಸ್ಟೇಟ್ ಮಾಲೀಕರು ಶಾಕ್ ಗೆ ಒಳಗಾಗಿದ್ದಾರೆ. ಹತ್ತು ವರ್ಷಗಳ ಕಾಲ ಅನಂತರಾಂ ಬಳಿ ಮೆಣಸು, ಕಾಫಿ ಖರೀದಿ ಮಾಡುತ್ತಿದ್ದ ನಂಬಿಕಸ್ಥ ವ್ಯಾಪಾರಿಯೇ ಕಳ್ಳತನ ಮಾಡಿಸಿದ್ದ.

ಜಿ. ಹೊಸಳ್ಳಿ ಗ್ರಾಮದ ಒಂಟಿ ಮನೆಯಲ್ಲಿ ಕಳ್ಳತನದ ಪ್ಲಾನ್ ಮಾಡಿದ್ದ ಕಾಫಿ, ಮೆಣಸು ವ್ಯಾಪಾರಿ ಶೈನಿ ಕುಮಾರ್ ಮಂಗಳೂರಿನ ಮೋಸ್ಟ್ ವಾಂಟೆಡ್‌ ಕಳ್ಳರ ಗ್ಯಾಂಗ್ ಖಲೀಲ್ ನ ಗ್ಯಾಂಗ್ ಮೂಲಕ ಕಳ್ಳತನ ಮಾಡಿಸಿದ್ದ! ೧೦ ವರ್ಷಗಳಿಂದ ಅನಂತರಾಮ್ ಅವರಿಂದ ಲಕ್ಷಾಂತರ ಮೌಲ್ಯದ ಮೆಣಸು ಖರೀದಿ ಮಾಡ್ತಿದ್ದ ಶೈನಿ ಕುಮಾರ್ ಗೆ ಅನಂತರಾಂ ಮನೆಯಲ್ಲಿ ಹಣ ಇರುವ ಮಾಹಿತಿ ಸಿಕ್ಕಿತ್ತು.‌

ಇದನ್ನೂ ಓದಿ: ಮುಂದುವರೆದ ಬೀಟಮ್ಮ ಗ್ಯಾಂಗ್ ಉಪಟಳ; ಛತ್ರಿಮರ ದೇಗುಲ ಬಳಿ ಬೀಡುಬಿಟ್ಟ 26 ಕಾಡಾನೆಗಳು

ಹಣವನ್ನ ದರೋಡೆ ಮಾಡುವ ಸಂಚು ರೂಪಿಸಿದ್ದ ಶೈನಿ ಮತ್ತು ಖಲೀಲ್ ಗ್ಯಾಂಗ್ ಫೆಬ್ರವರಿ 15 ರ ರಾತ್ರಿ ಅನಂತರಾಮ್ ಮನೆಯಲ್ಲಿ ದರೋಡೆ ಮಾಡಿ ಮಂಗಳೂರಿಗೆ ಎಸ್ಕೇಪ್ ಆಗಿತ್ತು. ಚಿಕ್ಕ ಸುಳಿವು ಕೂಡಾ ನೀಡದೆ ಪ್ಲಾನ್ ಮಾಡಿದ್ದ 7 ಜನ ಕಳ್ಳರನ್ನ ಬಂಧಿಸಿರುವ ಪೊಲೀಸರು ಇನ್ನುಳಿದ ಮೂವರಿಗೆ ಬಲೆ ಬೀಸಿದೆ.

10 ವರ್ಷಗಳಿಂದ ಮೆಣಸಿನ ವ್ಯವಹಾರ ನಡೆಸುತ್ತಿದ್ದ ವ್ಯಾಪಾರಿಯೇ ಎಸ್ಟೇಟ್ ಮನೆಯಲ್ಲಿ ಕಳ್ಳತನ ಮಾಡಿ ಜೈಲು ಸೇರಿದ್ದಾನೆ. ಅಯ್ಯೋ ಎಂಥಾ ಕಾಲ ಬಂತಪ್ಪ, ಈ ಕಾಲದಲ್ಲಿ ಯಾರನ್ನ ನಂಬೋದು, ಯಾರ ಜೊತೆ ವ್ಯವಹಾರ ಮಾಡೋದು ಅಂತ ಜನ್ರು ತಲೆಕೆಡಿಸಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್