ಕೊರೊನಾ ಹರಡಿ ಸೂಪರ್ ಸ್ಪ್ರೆಡ್ಡರ್ ಆದರಾ ಶಿಕ್ಷಕಿ; 15 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಕನ್ನಾಪುರಹಟ್ಟಿಯಲ್ಲಿರೊ ಜವಾಹರ ನವೋದಯ ವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. ರಜೆಗೆಂದು ಶಿಕ್ಷಕಿ ಮಹಾರಾಷ್ಟ್ರಕ್ಕೆ ಹೋಗಿ ಬಂದಿದ್ದಾರೆ. ಹೀಗಿದ್ದರೂ ನಾಲ್ಕೈದು ದಿನ ಶಾಲೆಗೆ ಅಟೆಂಡ್ ಆಗಿದ್ದರಿಂದ ವಿದ್ಯಾಲಯದಲ್ಲಿ ಸರಣಿ ಪಾಸಿಟಿವ್ ಕೇಸ್ ಕಾಣಿಸಿಕೊಂಡಿದೆ.
ರಾಯಚೂರ: ಮಹಾಮಾರಿ ಕೊರೊನಾ ರಾಜ್ಯದೆಲ್ಲೆಡೆ ಹರಡುತ್ತಿದ್ದು, ರಾಜ್ಯ ಸರ್ಕಾರ ಹೊರ ರಾಜ್ಯಗಳಿಗೆ ತೆರಳುವುದು ಮತ್ತು ಬರುವುದನ್ನು ನಿರ್ಬಂಧಿಸಿದೆ. ಅಷ್ಟಾದರು ಕೂಡ ಓರ್ವ ಶಿಕ್ಷಕಿ ಮಹಾರಾಷ್ಟ್ರಕ್ಕೆ ಹೋಗಿಬಂದಿದ್ದಾರೆ. ಇದರಿಂದಾಗಿ ವಿದ್ಯಾಲಯದಲ್ಲಿ ಸರಣಿ ಪಾಸಿಟಿವ್ ಕೇಸ್ಗಳು ದಾಖಲಾಗಿದ್ದು, ಸೂಪರ್ ಸ್ಪ್ರೆಡ್ಡರ್ ಆದರಾ ಶಿಕ್ಷಕಿ ಎನ್ನುವ ಮಾತು ಕೇಳಿಬರುತ್ತಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಕನ್ನಾಪುರಹಟ್ಟಿಯಲ್ಲಿರೊ ಜವಾಹರ ನವೋದಯ ವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. ರಜೆಗೆಂದು ಶಿಕ್ಷಕಿ ಮಹಾರಾಷ್ಟ್ರಕ್ಕೆ ಹೋಗಿ ಬಂದಿದ್ದಾರೆ. ಹೀಗಿದ್ದರೂ ನಾಲ್ಕೈದು ದಿನ ಶಾಲೆಗೆ ಅಟೆಂಡ್ ಆಗಿದ್ದರಿಂದ ವಿದ್ಯಾಲಯದಲ್ಲಿ ಸರಣಿ ಪಾಸಿಟಿವ್ ಕೇಸ್ ಕಾಣಿಸಿಕೊಂಡಿದೆ. ಇದು ಸದ್ಯ ಪೋಷಕರಲ್ಲಿ ಆತಂಕ ಸೃಷ್ಟಿಸಿದ್ದು, ವಿದ್ಯಾಯಲದ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಿಕ್ಷಕಿಯೇ ಮಕ್ಕಳು ಹಾಗೂ ಸಹಶಿಕ್ಷಕರಿಗೆ ಕೊರೊನಾ ಸ್ಪ್ರೆಡ್ ಮಾಡುತ್ತಿರುವುದು ಎಂದು ಆರೋಪಿಸಲಾಗುತ್ತಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಒಟ್ಟು 15 ಜನರಿಗೆ ಪಾಸಿಟಿವ್ ಬಂದಿದ್ದು, ವಿಷಯ ಗೊತ್ತಿದ್ದರೂ ಪ್ರಿನ್ಸಿಪಲ್ ಬಸವರಾಜ್ ಯಾವುದೇ ರೀತಿಯ ಸೂಕ್ತ ಕ್ರಮಕೈಗೊಂಡಿಲ್ಲವೆನ್ನಲಾಗುತ್ತಿದೆ. ಸದ್ಯ ಅವರ ವಿರುದ್ಧವೂ ನಿರ್ಲಕ್ಷದ ಆರೋಪ ಕೇಳಿಬರುತ್ತಿದೆ.
ಇನ್ನೂ ಈ ವಿದ್ಯಾಲಯದಲ್ಲಿ 6 ರಿಂದ 12 ನೇ ತರಗತಿ ಮಕ್ಕಳು ಓದುತ್ತಿದ್ದು, ಸುಮಾರು 400 ಮಕ್ಕಳು ಹಾಗೂ 40 ಸಹ ಶಿಕ್ಷಕರು ಇದ್ದಾರೆ. ಅವರೆಲ್ಲರ ಸ್ಯಾಂಪಲ್ ಸಂಗ್ರಹ ಮಾಡುವುದರ ಜತೆ ಜವಾಹರ ನವೋದಯ ವಿದ್ಯಾಲಯಲವನ್ನುಸಂಪೂರ್ಣ ಸ್ಯಾನಿಟೈಸಿಂಗ್ ಮಾಡಲಾಗುತ್ತಿದೆ.
ಇದನ್ನೂ ಓದಿ: Covid 19 Karnataka Update: ಕರ್ನಾಟಕದಲ್ಲಿ 47 ಸಾವಿರ ಮಂದಿಗೆ ಕೊರೊನಾ ಸೋಂಕು, ಕೊವಿಡ್ನಿಂದ 29 ಜನರು ಸಾವು