ಸಿದ್ದರಾಮಯ್ಯ ತಾಕತ್ ಇದ್ದರೆ, ಸ್ವಂತ ಪಕ್ಷ ಕಟ್ಟಿ, ಬರೀ 5 ಸೀಟು ಗೆಲ್ಲಿ: ಹೆಚ್.ಡಿ ಕುಮಾರಸ್ವಾಮಿ
ಸಿದ್ದರಾಮಯ್ಯ ಅವರಿಗೆ ತಾಕತ್ ಇದ್ದರೇ, ಸ್ವಂತ ಪಕ್ಷ ಕಟ್ಟಿ, ಬರೀ 5 ಸೀಟು ಗೆದ್ದುಕೊಂಡು ಬನ್ನಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ.
ರಾಯಚೂರು: ಸಿದ್ದರಾಮಯ್ಯ ಅವರಿಗೆ ತಾಕತ್ ಇದ್ದರೇ, ಸ್ವಂತ ಪಕ್ಷ ಕಟ್ಟಿ, ಬರೀ 5 ಸೀಟು ಗೆದ್ದುಕೊಂಡು ಬನ್ನಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ. ಕೊಟ್ಟ ಕುದುರೆ ಏರಲಾರದವ ವೀರನೂ ಅಲ್ಲ, ಶೂರನೂ ಅಲ್ಲ ಎಂಬ ಅಲ್ಲಮಪ್ರಭುಗಳ ಮಾತುಗಳು ಕುಮಾರಸ್ವಾಮಿಯವರಿಗೆ ಹೊಂದಿಕೆಯಾಗುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು ಈ ಪಕ್ಷದಿಂದ ಬೆಳೆದು ಹೋದೋರು ಅವರು. ನಾವೆಲ್ಲಾ ಇದ್ದಾಗ 50 ಸೀಟು ಗೆದ್ದಿದ್ದು ಅಂತಾರೆ. ನೀವೇಲ್ಲಾ ಬಿಟ್ಟು ಹೋದ ಮೇಲೆ 40 ಸೀಟು ಏಕಾಂಗಿಯಾಗಿ ಗೆದ್ದಿದ್ದೀನಿ. ಅವರದ್ದಷ್ಟೇ ಅಲ್ಲ ನಮ್ಮ ಪರಿಶ್ರಮ ಇದೆ ಎಂದು ಹೇಳಿದರು.
ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಎಂಪಿ ಪ್ರಕಾಶ್, ಸಿಂಧ್ಯ ಇದ್ದರು. ಅವರೆಲ್ಲಾ ಈಗ ಬಿಟ್ಟು ಹೋಗಿದ್ದಾರೆ. ಅದಕ್ಕೆ ಹೇಳಿದ್ದು ಸವಾಲು ಸ್ವೀಕಾರ ಮಾಡಿದ್ದೀನಿ. ಕಾಂಗ್ರೆಸ್ ಪಕ್ಷ ಮುಗಿದು ಹೋಗಿದೆ. ಬಿಜೆಪಿಗೆ ಇಲ್ಲಿ ಪರ್ಯಾಯ ಪಕ್ಷವಿಲ್ಲ. ಬೆಳೆಯಲು ಭಗವಂತ ನಮಗೆ ಶಕ್ತಿ ಕೊಟ್ಟಿದ್ದಾನೆ ಎಂದರು.
ಜನರ ಬದುಕನ್ನು ಸರಿಪಡಿಸುವ ಶಕ್ತಿ ನನ್ನಲ್ಲಿದೆ. ಜಯಪ್ರಕಾಶ್ ನಾರಾಯಣ್ ಎಮರ್ಜನ್ಸಿ ವಿರುದ್ಧ, ಸಂಘಟನೆ ಮಾಡಿ ಕಾಂಗ್ರೆಸ್ ವಿರುದ್ಧ ಎಲ್ಲರನ್ನ ಒಟ್ಟುಗೂಡಿಸಿ ಜನತಾ ಪಾರ್ಟಿ ಕಟ್ಟಿದ್ದಾರೆ. ಅದೇ ರೀತಿ ಕರ್ನಾಟಕದಿಂದ ಈ ಚುನಾವಣೆ ನಂತರ ಜೆಡಿಎಸ್ ಮೂರು ಜಿಲ್ಲೆಯಲ್ಲ, ರಾಜ್ಯಾದ್ಯಂತ ಅಲ್ಲ, ಇಡೀ ದೇಶದಲ್ಲೇ ಬೆಳಗುತ್ತೆ ಎಂದು ಸಿದ್ಧರಾಮಯ್ಯ ಹಾಗೂ ಡಿ. ಕೆ ಶಿವಕುಮಾರ್ಗೆ ಹೆಚ್.ಡಿ ಕುಮಾರಸದವಾಮಿ ಎಚ್ಚರಿಕೆ ನೀಡಿದರು.
ಡಿಕೆ ಶಿವಕುಮಾರ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೆಡಿಎಸ್ ವಿಸರ್ಜನೆಯ ಕನಸು ಕಂಡಿದ್ದಾರಾ? ಡಿಕೆ ಶಿವಕುಮಾರ ಆ ಕನಸು ಕಂಡರೇ ಕಾಣಲಿ ಬಿಡಿ, ಜನರಿಗೆ ಏನೂ ಅರ್ಥ ಆಗಲ್ವಾ? ಪಂಚರತ್ನ ಯೋಜನೆ ಜಾರಿ ಮಾಡದಿದ್ದರೇ ಜೆಡಿಎಸ್ ವಿಸರ್ಜನೆ ಎಂದಿದ್ದು ಎಂದು ‘ಜೆಡಿಎಸ್ ವಿಸರ್ಜನೆ ಮಾಡ್ತಾರೆ, ಕಾರ್ಯಕರ್ತರು ಕಾಂಗ್ರೆಸ್ಗೆ ಬರಲಿ’ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಜನ ಅಧಿಕಾರ ಕೊಡೋದು, ವಿಸರ್ಜನೆ ಮಾಡಲಿಕ್ಕೆ ಏನು? ಈ ಪಕ್ಷನ ದೇಶಕ್ಕೆ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಜನ ಅಧಿಕಾರ ಕೊಡುತ್ತಾರೆ. ಸಿದ್ಧಾಂತದ ಮೇಲೆ ಹೋಗುತ್ತೇನೆ ಅಂತ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಯಾವ ಸಿದ್ದಾಂತ, ಯಾವ ಸಿದ್ದಾಂತದ ಮೇಲೆ ಹೋಗುತ್ತಾರೆ. ಎಲ್ಲಿದೆ ಅವರಿಗೆ ಸಿದ್ದಾಂತ ಎಂದು ಪ್ರಶ್ನಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ