AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣ ಕನ್ನಡ ಸರಣಿ ಹತ್ಯೆ; ಸರ್ಕಾರ ಪರಿಹಾರ ಧನವನ್ನು ಯಾವುದೇ ಜನಾಂಗ ತಾರತಮ್ಯವಿಲ್ಲದೆ ನೀಡಲಿ: ಸುಬುಧೇಂದ್ರ ತೀರ್ಥ ಸ್ವಾಮೀಜಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆ ಪ್ರಕರಣ ವಿಚಾರವಾಗಿ ಮಂತ್ರಾಲಯ ಮಠದ ಸುಬುಧೇಂದ್ರ ತೀರ್ಥರು ಮಾತನಾಡಿ ದೇಶ ಪ್ರಗತಿ ಹೊಂದಲು ಮತ್ತು ಜನರ ನೆಮ್ಮದಿಯಿಂದ ಇರಲು ಶಾಂತಿ ಸೌಹಾರ್ದತೆ ಬಹಳ ಮುಖ್ಯ ಎಂದು ಹೇಳಿದ್ದಾರೆ.

ದಕ್ಷಿಣ ಕನ್ನಡ ಸರಣಿ ಹತ್ಯೆ; ಸರ್ಕಾರ ಪರಿಹಾರ ಧನವನ್ನು ಯಾವುದೇ ಜನಾಂಗ ತಾರತಮ್ಯವಿಲ್ಲದೆ ನೀಡಲಿ: ಸುಬುಧೇಂದ್ರ ತೀರ್ಥ ಸ್ವಾಮೀಜಿ
ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ
TV9 Web
| Edited By: |

Updated on:Aug 02, 2022 | 8:16 PM

Share

ರಾಯಚೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆ ಪ್ರಕರಣ ವಿಚಾರವಾಗಿ ಮಂತ್ರಾಲಯ (Mantralaya) ಮಠದ ಸುಬುಧೇಂದ್ರ ತೀರ್ಥರು (Subudhendra Teertha Swamiji) ಮಾತನಾಡಿ ದೇಶ ಪ್ರಗತಿ ಹೊಂದಲು ಮತ್ತು ಜನರ ನೆಮ್ಮದಿಯಿಂದ ಇರಲು ಶಾಂತಿ ಸೌಹಾರ್ದತೆ ಬಹಳ ಮುಖ್ಯ ಎಂದು ಹೇಳಿದ್ದಾರೆ. ಯಾವುದೇ ಸಮುದಾಯ ಮತ್ತೊಂದು ಸಮುದಾಯ ಮೇಲೆ ದಾಳಿ, ದಬ್ಬಾಳಿಕೆ, ಬೆದರಿಕೆ, ಆಕ್ರಮಣ ಮಾಡುವುದು ಸರಿಯಲ್ಲ. ಇಂತಹ ತಪ್ಪು ಯಾವುದೇ ಸಮುದಾಯ ಮಾಡಿದರೂ ಖಂಡಿಸುವೆ ಎಂದು ಹೇಳಿದರು.

ಹತ್ಯೆಯಾದ ಯುವಕರ ಕುಟುಂಬಗಳಿಗೆ ಪರಿಹಾರದಲ್ಲಿ ತಾರತಮ್ಯ ಆರೋಪ ವಿಚಾರವಾಗಿ ಮಾತನಾಡಿ ಹತ್ಯೆಯಾದ ವ್ಯಕ್ತಿಗಳಿಗೆ ಹಣ ನೀಡುವುದು ಪ್ರತ್ಯನ್ವಯವಲ್ಲಾ, ಹಣಕ್ಕೆ ಜೀವನಕ್ಕೆ ತುಲನೆ ಮಾಡಲು ಆಗುವುದಿಲ್ಲ. ಕುಟುಂಬಸ್ಥರು ನಿರ್ಗತಿಕರು ಆಗಬಾರದು ಅನ್ನೋ‌ ದೃಷ್ಟಿಯಿಂದ ರಾಜ್ಯ ಸರಕಾರ ‌ಪರಿಹಾರ ನೀಡುತ್ತದೆ ಎಂದು ಮಾತನಾಡಿದರು.

ಈ ರೀತಿಯಾಗಿ ಅನಾಹುತ ಆಗದಂತೆ ರಕ್ಷಣೆ ಕೊಡುವುದು ಸರಕಾರದ ಕರ್ತವ್ಯವಾಗಿದೆ. ಸರಕಾರ ಪರಿಹಾರಧನ ಯಾವುದೇ ಜನಾಂಗಕ್ಕೆ ತಾರತಮ್ಯವಿಲ್ಲದೆ ನೀಡಬೇಕು. ಪ್ರಾಣ ಕಳೆದುಕೊಂಡವರು ಎಲ್ಲರೂ ಜೀವಿಗಳ ಸಮಾನರು. ಆ ನಿಟ್ಟಿನಲ್ಲಿ ಎಲ್ಲರಿಗೂ ಸಮನಾದ ಸೂಕ್ತ ಪರಿಹಾರ ನೀಡಬೇಕು ಎಂದರು.

Published On - 6:56 pm, Tue, 2 August 22