ಭೂಸ್ವಾಧೀನ ಮಾಡಿಕೊಂಡು 30 ವರ್ಷವಾದರೂ ಪರಿಹಾರ ನೀಡದ ನೀರಾವರಿ ಇಲಾಖೆ: ಕಚೇರಿಯ ಎಲ್ಲ ಪೀಠೋಪಕರಣ ಜಪ್ತಿ ಆಯ್ತು
Lingasugur court: ರೈತರಿಗೆ ಪರಿಹಾರ ವಿತರಣೆಗೆ ನೀರಾವರಿ ಇಲಾಖೆ ವಿಳಂಬ ಧೋರಣೆ ತೋರಿದ ಹಿನ್ನೆಲೆ ಇಲಾಖೆಯ ಕಚೇರಿ ಪೀಠೋಪಕರಣಗಳನ್ನು ಜಪ್ತಿ ಮಾಡಿವಂತೆ ಲಿಂಗಸುಗೂರು ಕೋರ್ಟ್ ನ್ಯಾಯಾಧೀಶ ಚಂದ್ರಶೇಖರ್ ಆದೇಶಿಸಿದ್ದರು.
ರಾಯಚೂರು: ನೀರಾವರಿ ಇಲಾಖೆಯು (Irrigation department) ರೈತರ ಭೂಸ್ವಾಧೀನ ಪರಿಹಾರ ನೀಡದ ಹಿನ್ನೆಲೆ ಲಿಂಗಸುಗೂರು ಕೋರ್ಟ್ ಆದೇಶದಂತೆ ಸಿಂಧನೂರು ನೀರಾವರಿ ಇಲಾಖೆ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲಾಗಿದೆ. ನ್ಯಾಯಾಲಯದ ಆದೇಶದಂತೆ (Lingasugur court) ವಕೀಲರಾದ ಶಶಿಕಾಂತ್, ಗಿರೀಶ್ ಈಚನಾಳ ನೇತೃತ್ವದಲ್ಲಿ ಪೀಠೋಪಕರಣಗಳ ಜಪ್ತಿ ಕಾರ್ಯ ನಡೆಯಿತು. ನೀರಾವರಿ ಕಚೇರಿಯ 2 ಸಿಪಿಯು, 4 ಮಾನಿಟರ್, 37 ಕುರ್ಚಿ, ಕೀ ಬೋರ್ಡ್, ಮೌಸ್, ಕಚೇರಿಯ ಎಲ್ಲಾ ಪೀಠೋಪಕರಣಯನ್ನು ಜಪ್ತಿ ಮಾಡಲಾಗಿದೆ.
ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ನೀರಾವರಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲೇ ಪೀಠೋಪಕರಣ ಜಪ್ತಿ ಮಾಡಲಾಗಿದೆ. 30 ವರ್ಷಗಳ ಹಿಂದೆ ರೈತರಿಂದ ಪಿಕಪ್ ಡ್ಯಾಮ್ಗಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ ನೀರಾವರಿ ಇಲಾಖೆ ಸಂತ್ರಸ್ತ ರೈತರಿಗೆ ಈವರೆಗೂ ಪರಿಹಾರ ನೀಡಿಲ್ಲ. ಹೀಗಾಗಿ ಶ್ರೀನಿವಾಸ್ ಮತ್ತು ಶಕುಂತಲಾ ಎಂಬ ರೈತರು ಕೋರ್ಟ್ ಮೊರೆ ಹೋಗಿದ್ದರು.
ಸಂತ್ರಸ್ತ ರೈತರಾದ ಶ್ರೀನಿವಾಸ್ಗೆ ಸೇರಿದ 14 ಗುಂಟೆಗೆ 3,11,035 ರೂ. ಪರಿಹಾರ ಮತ್ತು ಶಕುಂತಲಾ ಎಂಬುವವರ 12 ಗುಂಟೆಗೆ 2,88,856 ರೂ. ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿತ್ತು. ಆದಾಗ್ಯೂ, ರೈತರಿಗೆ ಪರಿಹಾರ ವಿತರಣೆಗೆ ನೀರಾವರಿ ಇಲಾಖೆ ವಿಳಂಬ ಧೋರಣೆ ತೋರಿದ ಹಿನ್ನೆಲೆ ಇಲಾಖೆಯ ಕಚೇರಿ ಪೀಠೋಪಕರಣಗಳನ್ನು ಜಪ್ತಿ ಮಾಡಿವಂತೆ ಲಿಂಗಸುಗೂರು ಕೋರ್ಟ್ ನ್ಯಾಯಾಧೀಶ ಚಂದ್ರಶೇಖರ್ ಆದೇಶಿಸಿದ್ದರು.
ಇದನ್ನೂ ಓದಿ: ಡಿಕೆ ಶಿವಕುಮಾರ್ ವಿರುದ್ಧ ದೆಹಲಿ ಕೋರ್ಟ್ಗೆ ಸಲ್ಲಿಕೆಯಾಗಿರುವ ಇಡಿ ಚಾರ್ಜ್ ಶೀಟ್ನಲ್ಲಿ ಏನೆಲ್ಲಾ ಆರೋಪಗಳಿವೆ?
Published On - 2:19 pm, Sat, 25 June 22