ಡಿಕೆ ಶಿವಕುಮಾರ್ ವಿರುದ್ಧ ದೆಹಲಿ ಕೋರ್ಟ್​ಗೆ ಸಲ್ಲಿಕೆಯಾಗಿರುವ ಇಡಿ ಚಾರ್ಜ್ ಶೀಟ್​​ನಲ್ಲಿ ಏನೆಲ್ಲಾ ಆರೋಪಗಳಿವೆ?

58 ಪುಟಗಳ ಚಾರ್ಜ್ ಶೀಟ್​ನಲ್ಲಿ ಡಿಕೆ ಶಿವಕುಮಾರ್ ಮತ್ತು ಸಹಚರರಿಂದ ನಡೆದ ಹವಾಲ ದಂಧೆಯ ಸಂಪೂರ್ಣ ವಿವರ ಇದೆ. ಡಿಕೆ ಶಿವಕುಮಾರ್ ತಂಡ ಹವಾಲ ಮೂಲಕ ದೆಹಲಿಗೆ ಕೋಟ್ಯಾಂತರ ರೂಪಾಯಿ ಸಾಗಿಸಿದ್ದಾರೆ.

ಡಿಕೆ ಶಿವಕುಮಾರ್ ವಿರುದ್ಧ ದೆಹಲಿ ಕೋರ್ಟ್​ಗೆ ಸಲ್ಲಿಕೆಯಾಗಿರುವ ಇಡಿ ಚಾರ್ಜ್ ಶೀಟ್​​ನಲ್ಲಿ ಏನೆಲ್ಲಾ ಆರೋಪಗಳಿವೆ?
ಡಿಕೆ ಶಿವಕುಮಾರ್
Follow us
TV9 Web
| Updated By: sandhya thejappa

Updated on: Jun 25, 2022 | 12:49 PM

ಬೆಂಗಳೂರು: 2019ರಲ್ಲಿ ನಡೆದಿದ್ದ ದಾಳಿ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಇಡಿ ಅಧಿಕಾರಿಗಳು ಮೇ 26ರಂದು ದೆಹಲಿಯ ವಿಶೇಷ ಕೋರ್ಟ್​ಗೆ ಹೊಸ ಆರೋಪ ಪಟ್ಟಿಯನ್ನು ಸಲ್ಲಿಸಿದ್ದು, ಜುಲೈ 1ರಂದು ದೆಹಲಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಡಿಕೆಶಿಗೆ ನೋಟಿಸ್ ನೀಡಲಾಗಿದೆ. ಡಿಕೆ ಶಿವಕುಮಾರ್ ವಿರುದ್ಧ ಇಡಿ ಕೋರ್ಟ್​ಗೆ ಒಟ್ಟು 58 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು, ಅದರಲ್ಲಿ ಉಲ್ಲೇಖವಾಗಿರುವ ಆರೋಪಗಳ ಪಟ್ಟಿ ಸದ್ಯ ಟಿವಿ9ಗೆ ಲಭ್ಯವಾಗಿದೆ. 58 ಪುಟಗಳ ಚಾರ್ಜ್ ಶೀಟ್​ನಲ್ಲಿ ಡಿಕೆ ಶಿವಕುಮಾರ್ ಮತ್ತು ಸಹಚರರಿಂದ ನಡೆದ ಹವಾಲ ದಂಧೆಯ ಸಂಪೂರ್ಣ ವಿವರ ಇದೆ. ಡಿಕೆ ಶಿವಕುಮಾರ್ ತಂಡ ಹವಾಲ ಮೂಲಕ ದೆಹಲಿಗೆ ಕೋಟ್ಯಾಂತರ ರೂಪಾಯಿ ಸಾಗಿಸಿದ್ದಾರೆ. ದೆಹಲಿಯ ಸಫ್ದರ್ಜಂಗ್ ಅಪಾರ್ಟ್​ಮೆಂಟ್​ನಲ್ಲಿ ಸಿಕ್ಕಿದ್ದ 6.61 ಕೋಟಿ ರೂಪಾಯಿ ಡಿಕೆಶಿ ಅವರದ್ದೇ ಎಂದು ತಿಳಿದುಬಂದಿದೆ.

ಹಲವು ವರ್ಷಗಳಿಂದ ಅಕ್ರಮ ಹಣ ಸಂಗ್ರಹಿಸುತ್ತಿದ್ದ ಡಿಕೆಶಿ: ರಾಜೇಂದ್ರ ಹಾಗೂ ಆಂಜನೇಯ ಎಂಬುವವರು ಡಿಕೆ ಶಿವಕುಮಾರ್​ಗೆ ಸಂಬಂಧಿಸಿದ ಅಕ್ರಮ ಹಣದ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿದ್ದು, ಅಕ್ರಮ ವ್ಯವಹಾರದ ಬಗ್ಗೆ ಆರೋಪಿ ಆಂಜನೇಯ ಇಡಿ ಅಧಿಕಾರಿಗಳ ಮುಂದೆ ಸತ್ಯ ಬಾಯಿಬಿಟ್ಟಿದ್ದಾನೆ. ಇನ್ನು ಸುರೇಶ್ ಶರ್ಮಾ ಪ್ಲಾಟ್​ನ ಡಿಕೆಶಿ ಅಕ್ರಮ ಹಣ ಸಂಗ್ರಹಣೆಗೆ ಬಳಸುತ್ತಿದ್ದರೆಂದು ಇಡಿ ಅಧಿಕಾರಿಗಳು ಆರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ. ಹಲವು ವರ್ಷಗಳಿಂದ ಸುನಿಲ್ ಶರ್ಮಾ ಹಾಗೂ ಡಿಕೆಶಿ ಅಕ್ರಮ ಹಣ ಸಂಗ್ರಹಿಸುತ್ತಿದ್ದರು. ಡಿಕೆಶಿ ಸೂಚನೆ ಮೇರೆಗೆ  ಕೋಟಿ ಕೋಟಿ ಹಣವನ್ನು ಹಲವು ಬಾರಿ ಸಾಗಾಟ ಮಾಡಿದ್ದಾರೆ. ಏನೇ ಬಂದರು ನಾನು ನೋಡಿಕೊಳ್ಳುತ್ತೇನೆ ಹಣ ಸಂಗ್ರಹಿಸಿ ಎಂದು ಡಿಕೆಶಿ ಆಂಜನೇಯಗೆ ಹೇಳಿದ್ದಾರೆ. ಜೊತೆಗೆ ಕೋಟ್ಯಾಂತರ ಹಣ ಸಂಗ್ರಹಿಸಿದ್ದಕ್ಕಾಗಿ ಆಂಜನೇಯಗೆ ಬೆಂಗಳೂರಲ್ಲಿ ಜಾಗ ಕೊಡುವ ಭರವಸೆಯನ್ನೂ ಡಿಕೆ ಶಿವಕುಮಾರ್ ನೀಡಿದ್ದರೆಂದು ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.

ಅಕ್ರಮ ಹಣ ಸಂಗ್ರಹಕ್ಕೆ ಸಂಬಳ ನೀಡುತ್ತಿದ್ದ ಡಿಕೆಶಿ ಡಿಕೆಶಿ ಅವರ ಅಕ್ರಮ ಹಣ ಸಂಗ್ರಹಿಸಲು ಆಂಜನೇಯನಿಗೆ ಒಂದರಿಂದ ಒಂದೂವರೆ ಲಕ್ಷ ರೂಪಾಯಿ ಸಂಬಳ ಸಿಗುತ್ತಿತ್ತು. ಇನ್ನು ಐಟಿ ದಾಳಿ ವೇಳೆ ಡಿಕೆಶಿಗೆ ಸೇರಿದ್ದ ಹಣವನ್ನ ತನ್ನದು ಎಂದು ಸುನೀಲ್ ಶರ್ಮಾ ಹೇಳಿಕೊಂಡಿದ್ದ. ಬಳಿಕ ಡಿಕೆಶಿಗೋಸ್ಕರ ಹವಾಲ ದಂಧೆ ನಡೆಸುತ್ತಿದ್ದಾಗಿ ಸುನಿಲ್ ಶರ್ಮಾ ಹಾಗೂ ರಾಜೇಂದ್ರ ಹೇಳಿಕೆ ನೀಡಿದ್ದಾರೆ. ರಾಜೇಂದ್ರ ಮನೆಯಲ್ಲಿ ಸೀಜ್ ಮಾಡಿದ್ದ ಡೈರಿಯಲ್ಲಿ ಹವಾಲ ದಂಧೆಯ ಬಗ್ಗೆ ಸಂಪೂರ್ಣ ಮಾಹಿತಿ ಇಡಿಗೆ ಸಿಕ್ಕಿದೆ. ಸುನಿಲ್ ಶರ್ಮಾ ಹಾಗೂ ಚಂದ್ರಶೇಖರ್ ಆಣತಿಯಂತೆ ವ್ಯವಹಾರ ನಡೆಸಿದ್ದಾಗಿ ಡೈರಿಯಲ್ಲಿ ಉಲ್ಲೇಖವಾಗಿತ್ತು. ಆರೋಪಿಗಳು ಕೋಡ್ ವರ್ಡ್ ಬಳಸಿ ಲಕ್ಷ ಲಕ್ಷ ರೂಪಾಯಿ ಹವಾಲ ದಂಧೆ ನಡೆಸಿದ್ದಾರೆ.

ಇದನ್ನೂ ಓದಿ
Image
ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮುಗೆ ನಮ್ಮ ಬೆಂಬಲ; ಮಾಯಾವತಿ ಘೋಷಣೆ
Image
Sonu Sood: ರಾಜಮೌಳಿ ‘ಬಾಹುಬಲಿ’ ಚಿತ್ರದ ಆಫರ್​ ಕೊಟ್ರೂ ಒಪ್ಪಿಕೊಂಡಿರಲಿಲ್ಲ ಸೋನು ಸೂದ್​; ಕಾರಣ ಏನು?
Image
IND vs IRE: ಐರ್ಲೆಂಡ್​ನಲ್ಲಿ ಟೀಮ್ ಇಂಡಿಯಾ ಆಟಗಾರರ ನಡುವೆಯೇ ಶುರುವಾಗಿದೆ ಫೈಟ್
Image
Monkeypox: ಮಂಕಿಪಾಕ್ಸ್​ ರೋಗದ ಲಕ್ಷಣಗಳೇನು? ಯಾವಾಗ ಚಿಕಿತ್ಸೆ ಪಡೆಯಬೇಕು?

ಇದನ್ನೂ ಓದಿ: ಎಸ್ ಪಿ ಎದುರೇ ಪೇದೆಯೊಬ್ಬರ ಮೇಲೆ ಹಲ್ಲೆ ಮಾಡಿರುವ ಡಿವೈಎಸ್ ಪಿ ವಿರುದ್ಧ ಹೆಚ್ ಡಿ ರೇವಣ್ಣ ಕಿಡಿಕಾರಿದರು

ಡಿಕೆ ಶಿವಕುಮಾರ್ ಬಚಾವ್ ಮಾಡಲು ಸುನಿಲ್ ಶರ್ಮಾ ಮಾಡಿದ್ದ ಯತ್ನ ವಿಫಲ! ಅಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ನ ಬಚಾವ್ ಮಾಡಲು ಸುನಿಲ್ ಶರ್ಮಾ ದೆಹಲಿಯ ಸಫ್ದರ್ಜಂಗ್ ಅಪಾರ್ಟ್​ಮೆಂಟ್​ನಲ್ಲಿ ಸಿಕ್ಕಿದ್ದ ಹಣವನ್ನು ನನ್ನದೇ ಎಂದಿದ್ದ. ಯಾವುದೇ ಸೂಕ್ತ ದಾಖಲೆ ನೀಡಲಾಗದೇ ಡಿಕೆಶಿ ಹಣ ಎಂದು ಒಪ್ಪಿಕೊಂಡಿದ್ದ. ಸಫ್ದರ್ಜಂಗ್ ಪ್ಲಾಟ್ ನಂ 17,B-4 ಸಿಕ್ಕಿದ 1.37 ಕೋಟಿ ರೂ. ಕೂಡ ಡಿಕೆ ಶಿವಕುಮಾರ್ ಗೆ ಸೇರಿದ್ದು. ಡಿಕೆಶಿ ನಿರ್ದೇಶನದ ಮೇರೆಗೆ ಪ್ಲಾಟ್ ಕೀಗಳನ್ನ ತನ್ನ ಬಳಿ ಇಟ್ಟುಕೊಂಡಿದ್ದಾಗಿ ಆಂಜನೇಯ ತಿಳಿಸಿದ್ದಾನೆ ಎಂದು ತಿಳಿದುಬಂದಿದೆ.

ಸಚಿನ್ ನಾರಾಯಣ್ ಕೂಡ ಸೀಜ್ ಹಣವನ್ನು ತನ್ನದು ಎಂದು ಸಾಬೀತು ಮಾಡಲು ಸತತ ಯತ್ನಿಸಿದ್ದ. ಮದ್ಯ ವ್ಯವಹಾರದಿಂದ ಬಂದ ಹಣವನ್ನ ಸಂಗ್ರಹಿಸಿದ್ದಾಗಿ ಸಚಿನ್ ನಾರಾಯಣ್ ಹೇಳಿಕೆ ನೀಡಿದ್ದ. ಆದರೆ ಸೂಕ್ತ ಸಾಕ್ಷ್ಯಾಧಾರಗಳನ್ನ ಇ ಡಿಗೆ ನೀಡುವಲ್ಲಿ ಸಚಿನ್ ನಾರಾಯಣ್ ವಿಫಲನಾಗಿದ್ದಾನೆ ಎಂದು ಇಡಿ ಅಧಿಕಾರಿಗಳು ಎಲ್ಲಾ ಅಂಶಗಳನ್ನ ಚಾರ್ಜ್ ಶೀಟ್​ನಲ್ಲಿ ಎಳೆಎಳೆಯಾಗಿ ವಿವರಿಸಿದ್ದಾರೆ.

ಡಿಕೆಶಿ ಸೂಚನೆ ಮೇರೆಗೆ ಹಣ ಸಂಗ್ರಹಿಸಿ ಹೇಳಿದವರಿಗೆ ನೀಡುತ್ತಿದ್ದ ಆರೋಪಿ ಆಂಜನೇಯ, ದಾಳಿಗೂ ಒಂದು ವಾರದ ಹಿಂದೆ ಡಿಕೆಶಿ ಹೇಳಿದವರಿಗೆ 1.6 ಕೋಟಿ ರೂ. ನೀಡಿದ್ದ. ಕೃಷಿಯಿಂದ ದುಡಿದ ಹಣವನ್ನ ಪ್ಲಾಟ್ ನಂ 107, B-2ನಲ್ಲಿ ಇಟ್ಟಿದ್ದಾಗಿ ಡಿಕೆಶಿ ಹೇಳಿಕೆ ನೀಡಿದ್ದರು. ಆದರೆ ಯಾವ ಕೃಷಿಯಿಂದ ಹಣ ಬಂದಿದೆ ಎಂಬ ವಿವರವನ್ನ ಶಿವಕುಮಾರ್ ಇಡಿಗೆ ನೀಡಲಿಲ್ಲ. 2012 ರಿಂದ 2020ರ ವರೆಗೆ ಡಿಕೆಶಿಗೆ ಕೃಷಿಯಿಂದ 89.40 ಲಕ್ಷ ರೂ. ಆದಾಯ ಬಂದಿದ್ದಾಗಿ ದಾಖಲೆ ಸಲ್ಲಿಕೆ ಮಾಡಿದ್ದಾರೆ.

ಪ್ಲಾಟ್ ನಂ.01 ರಲ್ಲಿ ಸಿಕ್ಕ 12.44 ಲಕ್ಷ ರೂ. ಹಣ ಕೂಡ ಡಿಕೆ ಶಿವಕುಮಾರ್​ಗೆ ಸೇರಿದ್ದು. ಪ್ಲಾಟ್​ಗೆ ಬರುತ್ತಿದ್ದ ಅತಿಥಿಗಳ ಖರ್ಚಿಗಾಗಿ ಡಿಕೆ ಶಿವಕುಮಾರ್ 15 ಲಕ್ಷ ರೂಪಾಯಿ ನೀಡಿದ್ದರು. ಡಿಕೆ ಸುರೇಶ್ ಸೂಚನೆ ಮೇರೆಗೆ ಖರ್ಚು ಮಾಡಿದ್ದಾಗಿ ಆಂಜನೇಯ ಇಡಿ ಮುಂದೆ ಹೇಳಿಕೆ ನೀಡಿದ್ದಾನೆ.

ಇದನ್ನೂ ಓದಿ: Dry Cough: ಒಣ ಕೆಮ್ಮನ್ನು ಕಡಿಮೆ ಮಾಡುವುದು ಹೇಗೆ? ಆಯುರ್ವೇದ ಪರಿಹಾರ ಇಲ್ಲಿದೆ

ಡಿಕೆ ಶಿವಕುಮಾರ್ ಪ್ರಮುಖ ಆರೋಪಿ: ಇಡಿ ಅಧಿಕಾರಿಗಳು ಐವರು ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 120 ಬಿ ಅಡಿ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಜೊತೆಗೆ ದಾಳಿ ನಡೆಸಿದ್ದ 11 ಮಂದಿ ಐಟಿ ಅಧಿಕಾರಿಗಳ ಹೇಳಿಕೆಗಳನ್ನ ದಾಖಲಿಸಿದ್ದಾರೆ. ಆರೋಪಿಗಳ ಪಾತ್ರದ ಬಗ್ಗೆ ಪತ್ಯೇಕವಾಗಿ ಚಾರ್ಜ್ ಶೀಟ್​​ನಲ್ಲಿ ವಿವರಿಸಿದ್ದಾರೆ. ಡಿಕೆ ಶಿವಕುಮಾರ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಅಕ್ರಮ ಹಣ ಸಂಗ್ರಹಿಸಿದ್ದಾರೆ ಎಂದು ಉಲ್ಲೇಖವಾಗಿದೆ. ಐಟಿ ದಾಳಿಯ ವೇಳೆ ಇತರ ಆರೋಪಿಗಳ ಮೇಲೆ ಪ್ರಭಾವ ಬೀರಿ ಹೇಳಿಕೆ ಕೊಡಿಸಿದ್ದಾರೆ ಎಂದು ಇಡಿ ಆರೋಪ ಪಟ್ಟಿಯಲ್ಲಿ ಮಾಹಿತಿ ನೀಡಿದೆ.

ದಾಳಿ ನಡೆದು 7 ತಿಂಗಳ ನಂತರ ಡಿಕೆಶಿ ರಕ್ಷಣೆಗಾಗಿ ನೀಡಿದ್ದ ತನ್ನ ಹೇಳಿಕೆಗಳನ್ನ ಆಂಜನೇಯ ಮತ್ತು ರಾಜೇಂದ್ರ ಹಿಂಪಡೆದಿದ್ದಾರೆ. ತನಿಖೆ, ಇತರ ಆರೋಪಿಗಳ ಹಾಗೂ ಸಾಕ್ಷಿಗಳಿಂದ ಡಿಕೆಶಿ ಹಣ ಎಂದು ಸಾಬೀತಾಗಿದೆ. ಈ ಎಲ್ಲಾ ಆರೋಪಗಳ ಪಟ್ಟಿ ಮಾಡಿರುವ ಇಡಿ ಅಧಿಕಾರಿಗಳು ಪಿಎಂಎಲ್ಎ (PMLA) ಕಾಯಿದೆ ಸೆಕ್ಷನ್ 4 ಹಾಗೂ ಐಪಿಸಿ ಸೆಕ್ಷನ್ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ದೆಹಲಿ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಸದ್ಯ ಚಾರ್ಜ್ ಶೀಟ್ ಆಧರಿಸಿ ಜುಲೈ 1 ರಂದು ಕೋರ್ಟ್​ಗೆ ಹಾಜರಾಗಲು ಡಿಕೆಶಿಗೆ ಸಮನ್ಸ್ ನೀಡಲಾಗಿದೆ.

ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಮೈಸೂರು; ಹುಚ್ಚು ಸಾಹಸಗಳನ್ನು ಸೆರೆಹಿಡಿಯಲು ಸಿಸಿಟಿವಿ ಕೆಮೆರಾಗಳು: ಡಿಸಿಪಿ
ಮೈಸೂರು; ಹುಚ್ಚು ಸಾಹಸಗಳನ್ನು ಸೆರೆಹಿಡಿಯಲು ಸಿಸಿಟಿವಿ ಕೆಮೆರಾಗಳು: ಡಿಸಿಪಿ
ಮರಳಿನಲ್ಲಿ ಸಿಲುಕಿಕೊಂಡ ಫೆರಾರಿ ಕಾರು; ರಸ್ತೆಗೆ ಎಳೆದು ತಂದ ಎತ್ತಿನ ಗಾಡಿ
ಮರಳಿನಲ್ಲಿ ಸಿಲುಕಿಕೊಂಡ ಫೆರಾರಿ ಕಾರು; ರಸ್ತೆಗೆ ಎಳೆದು ತಂದ ಎತ್ತಿನ ಗಾಡಿ