Sonu Sood: ರಾಜಮೌಳಿ ‘ಬಾಹುಬಲಿ’ ಚಿತ್ರದ ಆಫರ್​ ಕೊಟ್ರೂ ಒಪ್ಪಿಕೊಂಡಿರಲಿಲ್ಲ ಸೋನು ಸೂದ್​; ಕಾರಣ ಏನು?

Sonu Sood | Baahubali: ರಾಜಮೌಳಿ ನಿರ್ದೇಶನದ ಸಿನಿಮಾ ಎಂದರೆ ಕಥೆ ಕೇಳದೆಯೂ ಆಫರ್​ ಒಪ್ಪಿಕೊಳ್ಳುವ ಹಲವು ಕಲಾವಿದರು ಇದ್ದಾರೆ. ಆದರೆ ಸೋನು ಸೂದ್​ ಅವರು ‘ಬಾಹುಬಲಿ’ ಚಿತ್ರಕ್ಕೆ ಸಹಿ ಮಾಡಲು ಸಾಧ್ಯವಾಗಲಿಲ್ಲ.

Sonu Sood: ರಾಜಮೌಳಿ ‘ಬಾಹುಬಲಿ’ ಚಿತ್ರದ ಆಫರ್​ ಕೊಟ್ರೂ ಒಪ್ಪಿಕೊಂಡಿರಲಿಲ್ಲ ಸೋನು ಸೂದ್​; ಕಾರಣ ಏನು?
ರಾಜಮೌಳಿ, ಸೋನು ಸೂದ್
TV9kannada Web Team

| Edited By: Madan Kumar

Jun 25, 2022 | 10:09 AM

ನಟ ಸೋನು ಸೂದ್​ (Sonu Sood) ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಬಾಲಿವುಡ್​ ಮಾತ್ರವಲ್ಲದೇ ದಕ್ಷಿಣ ಭಾರತದ ಸಿನಿಮಾಗಳಲ್ಲೂ ನಟಿಸಿರುವ ಅವರಿಗೆ ಭರ್ಜರಿ ಡಿಮ್ಯಾಂಡ್​ ಇದೆ. ಲಾಕ್​ಡೌನ್​ ಸಮಯದಲ್ಲಿ ಅವರು ಮಾಡಿದ ಜನಪರ ಕಾರ್ಯದಿಂದಾಗಿ ರಿಯಲ್​ ಹೀರೋ ಎನಿಸಿಕೊಂಡಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ ಅವರು ‘ಬಾಹುಬಲಿ’  (Baahubali) ಸಿನಿಮಾದ ಆಫರ್​ ತಿರಸ್ಕರಿಸಿದ್ದರು! ಈ ವಿಚಾರವನ್ನು ಇತ್ತೀಚೆಗೆ ಅವರು ಬಾಯಿ ಬಿಟ್ಟಿದ್ದಾರೆ. ರಾಜಮೌಳಿ (Rajamouli) ನಿರ್ದೇಶನದ ಸಿನಿಮಾದಲ್ಲಿ ಚಿಕ್ಕ ಪಾತ್ರ ಸಿಕ್ಕರೂ ಸಾಕು ಎಂದು ಬಯಸುತ್ತಾರೆ ಕಲಾವಿದರು. ಆದರೆ ಸೋನು ಸೂದ್​ ಅವರು ಅವಕಾಶ ಕೈ ಚೆಲ್ಲಲು ಕಾರಣ ಏನು? ಈ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ‘ಬಾಹುಬಲಿ’ ಸಿನಿಮಾ ಮಾಡಲು ನಿರ್ದೇಶಕ ರಾಜಮೌಳಿ ಅವರು ಸಾಕಷ್ಟು ವರ್ಷ ಸಮಯ ಮೀಸಲಿಟ್ಟರು. ಅವರ ಜೊತೆ ಇನ್ನಿತರ ತಂತ್ರಜ್ಞರು ಮತ್ತು ಕಲಾವಿರು ಕೂಡ ಶ್ರಮಪಟ್ಟರು. ಆ ಪ್ರಾಜೆಕ್ಟ್​ ಮಾಡುವಾಗ ಬೇರೆ ಯಾವುದೇ ಸಿನಿಮಾವನ್ನೂ ಒಪ್ಪಿಕೊಳ್ಳಲು ಕಲಾವಿದರಿಗೆ ಸಾಧ್ಯವಾಗಿರಲಿಲ್ಲ. ಅದಕ್ಕೆಲ್ಲ ನಂತರ ಪ್ರತಿಫಲ ಸಿಕ್ಕಿತು ಎಂಬುದು ನಿಜ. ಆದರೆ ಹಲವು ವರ್ಷಗಳ ಕಾಲ ಒಂದೇ ಸಿನಿಮಾಗೆ ಡೇಟ್ಸ್​ ನೀಡುವುದು ನಿಜಕ್ಕೂ ಸವಾಲಿನ ಕೆಲಸ. ಅದೇ ಕಾರಣಕ್ಕಾಗಿ ಸೋನು ಸೂದ್​ ಅವರು ‘ಬಾಹುಬಲಿ’ ಚಿತ್ರದ ಆಫರ್​ ತಿರಸ್ಕರಿಸಿದ್ದರು.

ರಾಜಮೌಳಿ ನಿರ್ದೇಶನದ ಸಿನಿಮಾ ಎಂದರೆ ಕಥೆ ಕೇಳದೆಯೂ ಆಫರ್​ ಒಪ್ಪಿಕೊಳ್ಳುವ ಹಲವು ಕಲಾವಿದರು ಇದ್ದಾರೆ. ಆದರೆ ಡೇಟ್ಸ್​ ನೀಡುವುದೇ ದೊಡ್ಡ ಚಾಲೆಂಜ್​. ರಾಜಮೌಳಿ ಟೀಮ್ ಕಡೆಯಿಂದ ಆಫರ್​ ಬಂದಾಗ ಸೋನು ಸೂದ್​ ಅವರು ಶಾರುಖ್​ ಖಾನ್​ ಜೊತೆ ‘ಹ್ಯಾಪಿ ನ್ಯೂ ಇಯರ್’​ ಸಿನಿಮಾ ಮಾಡುತ್ತಿದ್ದರು. ಇತ್ತ ರಾಜಮೌಳಿ ಅವರು ಹಲವು ತಿಂಗಳ ಡೇಟ್ಸ್​ ಕೇಳಿದರು. ಅದನ್ನು ಹೊಂದಿಸಲು ಸೋನು ಸೂದ್​ ಅವರಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ಅವಕಾಶವನ್ನು ಕೈ ಚೆಲ್ಲಬೇಕಾಯಿತು.

ತೆಲುಗಿನಲ್ಲಿ ಸೋನು ಸೂದ್​ ಅವರಿಗೆ ಸಿಕ್ಕಾಪಟ್ಟೆ ಫ್ಯಾನ್​ ಫಾಲೋಯಿಂಗ್​ ಇದೆ. ಅನುಷ್ಕಾ ಶೆಟ್ಟಿ ನಟನೆಯ ‘ಅರುಂಧತಿ’ ಸಿನಿಮಾದಲ್ಲಿ ಅವರು ಮಾಡಿದ ವಿಲನ್​ ಪಾತ್ರವನ್ನು ಪ್ರೇಕ್ಷಕರು ಮರೆಯಲು ಸಾಧ್ಯವಿಲ್ಲ. ಸದ್ಯ ರಿಯಲ್​ ಲೈಫ್​ನಲ್ಲಿ ಹೀರೋ ಎನಿಸಿಕೊಂಡಿರುವ ಅವರಿಗೆ ಯಾರೂ ಕೂಡ ಸಿನಿಮಾದಲ್ಲಿ ವಿಲನ್​ ಪಾತ್ರ ನೀಡುತ್ತಿಲ್ಲ. ಲಾಕ್​ಡೌನ್​ನಲ್ಲಿ ಶುರುವಾದ ಅವರ ಸಮಾಜಮುಖಿ ಕಾರ್ಯಗಳು ಇಂದಿಗೂ ನಡೆಯುತ್ತಿವೆ.

ಇದನ್ನೂ ಓದಿ: ‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ ಮನೆಗೆ ಬಂತು ಹೊಸ ಕಾರು; ಇದರ ಬೆಲೆ ಎಷ್ಟು?

ಇದನ್ನೂ ಓದಿ

Sonu Sood: 4 ಕಾಲು, 4 ಕೈ ಇರುವ ಬಾಲಕಿಗೆ ಸರ್ಜರಿ ಮಾಡಿಸಿದ ಸೋನು ಸೂದ್​; ರಿಯಲ್​ ಹೀರೋಗೆ ಜನರ ಆಶೀರ್ವಾದ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada