ರಾಯಚೂರು: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ; ಅಧಿಕಾರಿಗಳ ಸಮ್ಮುಖದಲ್ಲೇ ಕಣ್ಣೀರು ಹಾಕಿದ ಮಹಿಳೆ

| Updated By: preethi shettigar

Updated on: Oct 16, 2021 | 2:08 PM

ನನ್ನ ಗಂಡ ಸತ್ತು 9 ವರ್ಷ ಕಳೆದಿದೆ. ಆದರೆ ನನಗೆ ಪಿಂಚಣಿ ಹಣ ಕೂಡ ಬರುತ್ತಿಲ್ಲ. ನಮ್ಮ ಮನೆ ಜಮೀನಿನಲ್ಲಿದೆ. ನಾವು ಬಡವರು. ಕುಡಿಯಲು ನೀರು ಇಲ್ಲ, ಕರೆಂಟ್ ಇಲ್ಲ, ವಾಸಿಸಲು ಸರಿಯಾದ ಮನೆ ಇಲ್ಲ ಎಂದು ಸಹಾಯಕ ಆಯುಕ್ತ ರಾಹುಲ್ ಎದುರಲ್ಲೇ ಮಹಿಳೆ ಕಣ್ಣೀರು ಹಾಕಿದ್ದಾರೆ.

ರಾಯಚೂರು: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ; ಅಧಿಕಾರಿಗಳ ಸಮ್ಮುಖದಲ್ಲೇ ಕಣ್ಣೀರು ಹಾಕಿದ ಮಹಿಳೆ
ಹುಲಿಗೆಮ್ಮ
Follow us on

ರಾಯಚೂರು: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಹಿನ್ನೆಲೆ ಅಧಿಕಾರಿಗಳು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಾಗಲಾಪೂರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗ್ರಾಮದ ಹುಲಿಗೆಮ್ಮ ಎಂಬ ಮಹಿಳೆ ಅಧಿಕಾರಿಗಳ ಎದುರೇ ಕಣ್ಣೀರು ಹಾಕಿದ್ದಾರೆ. ಅಲ್ಲದೆ ನಾವು ಜೀವನ ಮಾಡುವುದು ಹೇಗೆ ವಿಷ ಕೊಡಿ ಸಾಯುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯಿತಿಯಿಂದ ನಮಗೆ ಸೌಲಭ್ಯಗಳು ಸಿಕ್ಕಿಲ್ಲ. ನನ್ನ ಗಂಡ ಸತ್ತು 9 ವರ್ಷ ಕಳೆದಿದೆ. ಆದರೆ ನನಗೆ ಪಿಂಚಣಿ ಹಣ ಕೂಡ ಬರುತ್ತಿಲ್ಲ. ನಮ್ಮ ಮನೆ ಜಮೀನಿನಲ್ಲಿದೆ. ನಾವು ಬಡವರು. ಕುಡಿಯಲು ನೀರು ಇಲ್ಲ, ಕರೆಂಟ್ ಇಲ್ಲ, ವಾಸಿಸಲು ಸರಿಯಾದ ಮನೆ ಇಲ್ಲ ಎಂದು ಸಹಾಯಕ ಆಯುಕ್ತ ರಾಹುಲ್ ಎದುರಲ್ಲೇ ಮಹಿಳೆ ಕಣ್ಣೀರು ಹಾಕಿದ್ದಾರೆ.

ದಾವಣಗೆರೆ: ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಗಳ ಕಡೆಗೆ ಕಾರ್ಯಕ್ರಮ
ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಗಳ ಕಡೆಗೆ ಕಾರ್ಯಕ್ರಮಕ್ಕೆ ಇಂದು ಸಿಎಂ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಕಾರ್ಯಕ್ರಮಕ್ಕೆ ಸಿಎಂ ಚಾಲನೆ ನೀಡಲಿದ್ದಾರೆ. ಸದ್ಯ ಮೈಸೂರಿನಿಂದ ಸಿಎಂ ಬಸವರಾಜ ಬೊಮ್ಮಾಯಿ ಜಿಲ್ಲೆಗೆ ಆಗಮಿಸಿದ್ದಾರೆ. ರಸ್ತೆ ಮಾರ್ಗವಾಗಿ ಸುರಹೊನ್ನೆ ಗ್ರಾಮಕ್ಕೆ ಸಿಎಂ ಪ್ರಯಾಣಿಸಲಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸಿಎಂ ಉದ್ಘಾಟಿಸಲಿದ್ದಾರೆ. ನಂತರ ಕುಂದೂರಿಗೆ ಸಿಎಂ ಬೊಮ್ಮಾಯಿ ಆಗಮಿಸಲಿದ್ದು, ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಬೆಂಗಳೂರಿಗೆ ಸಿಎಂ ಬೊಮ್ಮಾಯಿ ವಾಪಸ್ ಆಗಲಿದ್ದಾರೆ.

ಇದನ್ನೂ ಓದಿ:
ಅ.16ರಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಮತ್ತೆ ಆರಂಭ: ನ್ಯಾಮತಿಯಲ್ಲಿ ಮುಖ್ಯಮಂತ್ರಿ ಚಾಲನೆ

‘ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ’ ಯೋಜನೆಗೆ ಶನಿವಾರ ಆರ್.ಅಶೋಕ್ ಚಾಲನೆ

 

Published On - 1:49 pm, Sat, 16 October 21