Crime Updates: ಚರಂಡಿ ವಿಷಯಕ್ಕೆ ಗಲಾಟೆಯಾಗಿ ವೃದ್ಧೆ ಸಾವು, ಹಾಸನದಲ್ಲಿ ಮಗನಿಂದಲೇ ತಾಯಿಯ ಹತ್ಯೆ

| Updated By: ganapathi bhat

Updated on: Feb 14, 2022 | 9:29 PM

ಶರಣಪ್ಪಗೌಡನ ಮನೆ ಮುಂದೆ ವೀರಮ್ಮ ಶವವಿಟ್ಟು ಧರಣಿ ನಡೆಸಿದ್ದಾರೆ. ಘಟನೆಯ ನಂತರ ಶರಣಪ್ಪಗೌಡ ತಲೆಮರೆಸಿಕೊಂಡಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Crime Updates: ಚರಂಡಿ ವಿಷಯಕ್ಕೆ ಗಲಾಟೆಯಾಗಿ ವೃದ್ಧೆ ಸಾವು, ಹಾಸನದಲ್ಲಿ ಮಗನಿಂದಲೇ ತಾಯಿಯ ಹತ್ಯೆ
ಸಾಂಕೇತಿಕ ಚಿತ್ರ
Follow us on

ರಾಯಚೂರು: ಚರಂಡಿ ವಿಷಯಕ್ಕೆ ನಡೆದ ಗಲಾಟೆ ವೇಳೆ ವೃದ್ಧೆ ಸಾವನ್ನಪ್ಪಿದ ದುರ್ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಸೈನಿಕ ಅಮರೇಶ್​ರವರ ತಾಯಿ ವೀರಮ್ಮ (75) ಮೃತಪಟ್ಟಿದ್ದಾರೆ. ನಿಲೋಗಲ್​ ಗ್ರಾಮದಲ್ಲಿ ನಡೆದ ಗಲಾಟೆಯಲ್ಲಿ ಸಾವನ್ನಪ್ಪಿದ್ದಾರೆ. ಬಿಜೆಪಿ ಮುಖಂಡ ಶರಣಪ್ಪಗೌಡ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಶರಣಪ್ಪಗೌಡನ ಮನೆ ಮುಂದೆ ವೀರಮ್ಮ ಶವವಿಟ್ಟು ಧರಣಿ ನಡೆಸಿದ್ದಾರೆ. ಘಟನೆಯ ನಂತರ ಶರಣಪ್ಪಗೌಡ ತಲೆಮರೆಸಿಕೊಂಡಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಚಿತ್ರದುರ್ಗ: ತಾಲೂಕು ಪಂಚಾಯತ್ ಇಒ ಕಚೇರಿಗೆ ನುಗ್ಗಿ ಗಲಾಟೆ; ಕಚೇರಿ ನೌಕರರ ಧರಣಿ

ಚಳ್ಳಕೆರೆ ಮಂಡಲ ಬಿಜೆಪಿ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಬೆಂಬಲಿಗರ ವಿರುದ್ಧ ತಾಲೂಕು ಪಂಚಾಯತ್ ಇಒ ಕಚೇರಿಗೆ ನುಗ್ಗಿ ಗಲಾಟೆ, ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದಲ್ಲಿನ ತಾ.ಪಂ. ಕಚೇರಿಯಲ್ಲಿ ಘಟನೆ ನಡೆದಿದೆ. ತಾ.ಪಂ ಇಒ ಮಡುಗಿನ ಬಸಪ್ಪ ಮೇಲೆ ಹಲ್ಲೆ ಆರೋಪ ವ್ಯಕ್ತವಾಗಿದೆ. ಸಭೆಗೆ ಕೆಡಿಪಿ ಸದಸ್ಯರನ್ನು ಆಹ್ವಾನಿಸಿಲ್ಲ ಎಂದು ಗಲಾಟೆ ಮಾಡಲಾಗಿತ್ತು. ಸ್ಥಳಕ್ಕೆ DySP ಶ್ರೀಧರ್, ಸಿಪಿಐ ತಿಪ್ಪೇಸ್ವಾಮಿ ಭೇಟಿ ನೀಡಿದ್ದಾರೆ. ಇಒ ಮೇಲಿನ ಹಲ್ಲೆ ಖಂಡಿಸಿ ನೌಕರರಿಂದ ಪ್ರತಿಭಟನೆ ನಡೆಸಲಾಗಿದೆ. ಆರೋಪಿಗಳನ್ನ ಬಂಧಿಸುವಂತೆ ಕಚೇರಿ ನೌಕರರು ಧರಣಿ ನಡೆಸಿದ್ದಾರೆ.

ಯಲ್ಲಾಪುರ: ವ್ಯಕ್ತಿಯ ಹತ್ಯೆಗೆ ಸಂಚು ನಡೆಸಿದ್ದವ 8 ಜನರ ಬಂಧನ

ಯಲ್ಲಾಪುರದಲ್ಲಿ ವ್ಯಕ್ತಿಯ ಹತ್ಯೆಗೆ ಸಂಚು ನಡೆಸಿದ್ದವ 8 ಜನರನ್ನು ಬಂಧಿಸಲಾಗಿದೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಪೊಲೀಸರಿಂದ 8 ಜನ ಸೆರೆಯಾಗಿದ್ದಾರೆ. ಮಹಾಬಲೇಶ್ವರ ಭಟ್, ವಿನೋದ್ ಕಾಮತ್, ಗೋವಿಂದ್, ನಾಮದೇವ ಹಲಗೇಕರ, ಸುಶಾಂತ ಖಾನಾಪುರಿ, ಶ್ರೀಧರ್‌, ರಾಘವೇಂದ್ರ, ಮಂಜುನಾಥ್ ದಂಡಗಲ್ ಬಂಧಿತ ಆರೋಪಿಗಳು. ಬಂಧಿತರಿಂದ ಎರಡು ಬೈಕ್, ಕಾರು, 9 ಮೊಬೈಲ್ ಫೋನ್‌ ಜಪ್ತಿ ಮಾಡಲಾಗಿದೆ. ಸಬಗೇರಿಯ ಸುರೇಶ್‌ ರೇವಣಕರ್‌ ಎಂಬುವವರ ಮೇಲೆ ಹಲ್ಲೆ ಮಾಡಲಾಗಿತ್ತು. ಜ.11ರಂದು ತೀವ್ರವಾಗಿ ಹಲ್ಲೆ ನಡೆಸಿ ಮೊಬೈಲ್‌ಫೋನ್ ಕದ್ದಿದ್ದರು.

ಇತರ ಅಪರಾಧ ಸುದ್ದಿಗಳು

ಹಾಸನ: ಇಲ್ಲಿನ ಸಂಕಲಾಪುರ ಗ್ರಾಮದಲ್ಲಿ ಹೆತ್ತ ಮಗನಿಂದಲೇ ತಾಯಿಯ ಬರ್ಬರ ಹತ್ಯೆ ನಡೆದಿದೆ. ಮಗನ ದುರ್ನಡತೆ ಪ್ರಶ್ನಿಸಿದ ಹಿನ್ನೆಲೆ ತಾಯಿ ಸಣ್ಣಮ್ಮಗೆ ದೊಣ್ಣೆಯಿಂದ ಹೊಡೆದು ಪುತ್ರ ನಂಜೇಶ್ ಗೌಡ ಸಾಯಿಸಿದ್ದಾನೆ. ಅಡ್ಡ ಬಂದ ಪತ್ನಿ ರೂಪಾಗೆ ಗಂಭೀರ ಗಾಯವಾಗಿದೆ.

ಬೀದರ್: ಶಾರ್ಟ್ ಸರ್ಕ್ಯೂಟ್‌ನಿಂದ 4 ಎಕರೆಯಲ್ಲಿದ್ದ ಕಬ್ಬು ಬೆಂಕಿಗಾಹುತಿ ಆದ ಘಟನೆ ಬೀದರ್ ಬಳಿಯ ಮರ್ಜಾಪುರ.ಎಂ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ಮಲ್ಲಪ್ಪ ಈರಕರ್‌ಗೆ ಸೇರಿದ ಕಬ್ಬು ಸುಟ್ಟುಭಸ್ಮವಾಗಿದೆ. ಗದ್ದೆಯಲ್ಲಿದ್ದ ಕಬ್ಬಿಗೆ ವಿದ್ಯುತ್ ಲೈನ್ ತಾಗಿ ಶಾರ್ಟ್‌ ಸರ್ಕ್ಯೂಟ್ ಆಗಿತ್ತು. ಹೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಕಬ್ಬು ಬೆಳೆ ಬೆಂಕಿಗಾಹುತಿ ಆಗಿದೆ ಎಂದು ಸೂಕ್ತ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ರೈತ ಒತ್ತಾಯಿಸಿದ್ದಾರೆ.

ಯಾದಗಿರಿ: ಸೈದಾಪುರ ಪೊಲೀಸ್ ಠಾಣೆ ಎದುರು ಕೊಲೆ ಆರೋಪಿಯನ್ನು ಬಂಧಿಸುವಂತೆ ಯುವಕನ ಕುಟುಂಬಸ್ಥರು ಹಾಗೂ ಸ್ಥಳೀಯರಿಂದ ಪ್ರತಿಭಟನೆ ನಡೆಸಲಾಗಿದೆ. ಕ್ಯಾತನಾಳ್ ಗ್ರಾಮದಲ್ಲಿ ಫೆಬ್ರವರಿ 13 ರಂದು ಶರಣಪ್ಪ (25) ರನ್ನ ದುಷ್ಕರ್ಮಿಗಳು ಹತ್ಯೆಗೈದಿದ್ದರು. ರಸ್ತೆ ಮಧ್ಯೆ ಟ್ರ್ಯಾಕ್ಟರ್​ ನಿಲ್ಲಿಸಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಹತ್ಯೆ ಮಾಡಿದ್ದರು.

ಬಳ್ಳಾರಿ: ನಗರದ ಜನತಾ ಬಜಾರ್ ನಿವಾಸಿ ಪದ್ಮಾವತಿ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಮಂಜುನಾಥ್ ರಾಜು ಎಂಬಾತನನ್ನು ಬಂಧಿಸಲಾಗಿದೆ. ಬಳ್ಳಾರಿ ಗ್ರಾಮಾಂತರ ಠಾಣೆಯ ಪೊಲೀಸರು ಆರೋಪಿಯಿಂದ 132 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ರಾಮನಗರ: ಚನ್ನಪಟ್ಟಣ ತಾಲೂಕಿನ ಮಳೂರು ಗ್ರಾಮದ ಬಳಿ ಅಕ್ರಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ 200 ಚೀಲ ಪಡಿತರ ಅಕ್ಕಿ ಜಪ್ತಿ ಮಾಡಲಾಗಿದೆ. ಲಾರಿ ಚಾಲಕ ಪರ್ವೇಜ್​ನನ್ನು ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Crime Updates: ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳ ಬಳಿ 1 ಕೆಜಿ ಗಾಂಜಾ ಪತ್ತೆ; ಆರೋಪಿಗಳ ಬಂಧನ

ಇದನ್ನೂ ಓದಿ: Crime Updates: ಖತರ್ನಾಕ್ ಬೈಕ್ ಕಳ್ಳರ ಬಂಧನ; 7 ಲಕ್ಷ ರೂ ಮೌಲ್ಯದ 18 ಬೈಕ್ ವಶಕ್ಕೆ