ಲವ್ ಜಿಹಾದ್ ಬದಲು ಲವ್ ಕೇಸರಿ ವಿವಾದ ಪ್ರಕರಣ; ರಾಯಚೂರಿನ ಪಶ್ಚಿಮ ಠಾಣೆ ಪೊಲೀಸರಿಂದ ಇಬ್ಬರ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 17, 2022 | 4:23 PM

ಶ್ರೀರಾಮಸೇನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದು, ಲವ್ ಜಿಹಾದ್ ಬದಲು ಲವ್ ಕೇಸರಿ ಟ್ರೆಂಡ್​ಗೆ ಕರೆ ನೀಡಲಾಗಿತ್ತು. ಹಿಂದುಗಳ ಮೇಲೆ ದಾಳಿ ಮಾಡಿದವರನ್ನ ಕೊಚ್ಚಿ ಹಾಕಿ ನಾವೀದ್ದೀವಿ ಎಂದಿದ್ದ ರಾಜಾಚಂದ್ರ, ಇದೇ ವೇಳೆ ವೇದಿಕೆ ಮೇಲೆ ಖಡ್ಗ ಪ್ರದರ್ಶಿಸದ್ದರು. 

ಲವ್ ಜಿಹಾದ್ ಬದಲು ಲವ್ ಕೇಸರಿ ವಿವಾದ ಪ್ರಕರಣ; ರಾಯಚೂರಿನ ಪಶ್ಚಿಮ ಠಾಣೆ ಪೊಲೀಸರಿಂದ ಇಬ್ಬರ ಬಂಧನ
ಲವ್ ಜಿಹಾದ್ ಬದಲು ಲವ್ ಕೇಸರಿ ವಿವಾದ ಪ್ರಕರಣ; ರಾಯಚೂರಿನ ಪಶ್ಚಿಮ ಠಾಣೆ ಪೊಲೀಸರಿಂದ ಇಬ್ಬರ ಬಂಧನ
Follow us on

ರಾಯಚೂರು: ನಗರದಲ್ಲಿ ಲವ್ ಕೇಸರಿ (Love Saffron) ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರಿನ ಪಶ್ಚಿಮ ಠಾಣೆ ಪೊಲೀಸರಿಂದ ಇಬ್ಬರ ಬಂಧನ ಮಾಡಲಾಗಿದೆ. ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಾವಿ ಹಾಗೂ ಜಿಲ್ಲಾ ಸಂಚಾಲಕ ರಾಜಾಚಂದ್ರ ರಾಮನಗೌಡ ಬಂಧಿತರು. ಏಪ್ರಿಲ್ 10 ರಂದು ನಡೆದಿದ್ದ, ಶ್ರೀರಾಮನವಮಿಯಂದು ಶ್ರೀರಾಮಸೇನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದು, ಲವ್ ಜಿಹಾದ್ ಬದಲು ಲವ್ ಕೇಸರಿ ಟ್ರೆಂಡ್​ಗೆ ಕರೆ ನೀಡಲಾಗಿತ್ತು. ಹಿಂದುಗಳ ಮೇಲೆ ದಾಳಿ ಮಾಡಿದವರನ್ನ ಕೊಚ್ಚಿ ಹಾಕಿ ನಾವೀದ್ದೀವಿ ಎಂದಿದ್ದ ರಾಜಾಚಂದ್ರ, ಇದೇ ವೇಳೆ ವೇದಿಕೆ ಮೇಲೆ ಖಡ್ಗ ಪ್ರದರ್ಶಿಸದ್ದರು.

ಲವ್ ಜಿಹಾದ್ ಬದಲಿಗೆ ಲವ್ ಕೇಸರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ರಾಜಾಚಂದ್ರ ರಾಮನಗೌಡ, ಮಂಜುನಾಥ್ ಎಂಬವರ ವಿರುದ್ಧ FIR ದಾಖಲು ಮಾಡಲಾಗಿದೆ. ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ. ಶ್ರೀರಾಮಸೇನೆ ಸಂಚಾಲಕ ರಾಜಾಚಂದ್ರ ರಾಮನಗೌಡ ಹಾಗೂ ಶ್ರೀರಾಮಸೇನೆ ರಾಯಚೂರು ಜಿಲ್ಲಾಧ್ಯಕ್ಷ ಮಂಜುನಾಥ್ ಎಂಬವರು ರಾಮನವಮಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಅನ್ಯ ಧರ್ಮದ ವಿರುದ್ಧ ಪ್ರಚೋದನಕಾರಿ ಹೇಳಿಕೆ ಆರೋಪದಲ್ಲಿ ಅವರ ವಿರುದ್ಧ ಐಪಿಸಿ ಸೆಕ್ಷನ್‌ 153, 153(A), 295(A)ರ ಅಡಿ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಇತ್ತ ಬೆಂಗಳೂರಿನ ಜೆ.ಜೆ.ನಗರದಲ್ಲಿ ಯುವಕ ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ. ಹತ್ಯೆ ಉದ್ದೇಶದಿಂದ ಚಾಕು ಹಾಕಿರಲಿಲ್ಲವೆಂದು ಜಮೀರ್​ ಹೇಳಿಕೆಗೆ ಅವರು ತಿರುಗೇಟು ನೀಡಿದ್ದಾರೆ. ಹಾಗಾದರೆ ಚಾಕು ಚುಚ್ಚುವುದು ಏಕೆ, ಕೇಕ್​ ಕಟ್ ಮಾಡ್ತಾರಾ? ಪೂಜೆ ಮಾಡಲು ಚಾಕು ಹಾಕ್ತಾರಾ? ಏನ್ ಮಾತಾಡುತ್ತಿದ್ದೀರಿ? ಚಾಕೊಲೇಟ್​ ಕಟ್ ಮಾಡಲು ಚಾಕು ಹಾಕಿದ್ನಾ? ಕೊಲ್ಲುವ ಉದ್ದೇಶದಿಂದಲೇ ಚಂದ್ರುಗೆ ಚಾಕು ಹಾಕಿದ್ದಾರೆ. ನಿಶ್ಚಿತವಾಗಿ ಚಂದ್ರುಗೆ ನ್ಯಾಯ ಸಿಗುತ್ತೆ. ಚಂದ್ರು ಕುಟುಂಬಕ್ಕೆ ಸರ್ಕಾರ ₹25 ಲಕ್ಷ ಪರಿಹಾರ ನೀಡಬೇಕು ಎಂದು ಜಮೀರ್ ಅಹ್ಮದ್​ಖಾನ್​ ವಿರುದ್ಧ ಮುತಾಲಿಕ್ ಕೆಂಡಾಮಂಡಲವಾಗಿದ್ದಾರೆ.

ಇದನ್ನೂ ಓದಿ:

ರೈತರು, ದಲಿತರು, ಮಹಿಳೆಯರ ಬದುಕಿನಲ್ಲಿ ಬಿಜೆಪಿಯಿಂದ ಪರಿವರ್ತನೆ; ಮಿಷನ್ 150 ಗುರಿ ತಲುಪುವ ವಿಶ್ವಾಸ: ಜೆಪಿ ನಡ್ಡಾ

ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ಮನೆಯಲ್ಲಿ ಸಿಐಡಿ ತಂಡ ಪರಿಶೀಲನೆ; ಪಿಎಸ್​ಐ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರೋ ಶಂಕೆ