AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​ಲೈನ್ ಟ್ರೇಡಿಂಗ್​​ ಹೆಸರಲ್ಲಿ ವಂಚನೆ: ಹೆಚ್ಚು ಹಣದ ಆಸೆಗೆ ಇದ್ದ ದುಡ್ಡನ್ನೂ ಕಳೆದುಕೊಂಡ ವ್ಯಕ್ತಿ

ರಾಯಚೂರಿನ ವ್ಯಕ್ತಿಯೊಬ್ಬರು ಆನ್‌ಲೈನ್ ಟ್ರೇಡಿಂಗ್ ಮೂಲಕ ಹೆಚ್ಚು ಲಾಭದ ಆಸೆಗೆ 59 ಲಕ್ಷ ರೂ. ಕಳೆದುಕೊಂಡಿದ್ದಾರೆ. ಸೈಬರ್ ವಂಚಕರು ಅಧಿಕ ಆದಾಯದ ಆಮಿಷವೊಡ್ಡಿ ಹಣ ಹೂಡಿಕೆ ಮಾಡಿಸಿದ್ದರು. ಮೋಸ ಹೋದ ಬಗ್ಗೆ ಅರಿವಾದಾಗ ಪೊಲೀಸರಿಗೆ ದೂರು ನೀಡಿದ್ದು, ಇಂತಹ ಆನ್‌ಲೈನ್ ವಂಚನೆಗಳಿಂದ ಎಚ್ಚರದಿಂದಿರುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಆನ್​ಲೈನ್ ಟ್ರೇಡಿಂಗ್​​ ಹೆಸರಲ್ಲಿ ವಂಚನೆ: ಹೆಚ್ಚು ಹಣದ ಆಸೆಗೆ ಇದ್ದ ದುಡ್ಡನ್ನೂ ಕಳೆದುಕೊಂಡ ವ್ಯಕ್ತಿ
ಸಾಂದರ್ಭಿಕ ಚಿತ್ರ
ಭೀಮೇಶ್​​ ಪೂಜಾರ್
| Edited By: |

Updated on:Nov 16, 2025 | 7:34 AM

Share

ರಾಯಚೂರು, ನವೆಂಬರ್​ 16: ಆನ್​ಲೈನ್ ಟ್ರೇಡಿಂಗ್​​ ಹೆಸರಲ್ಲಿ ಸೈಬರ್​ ವಂಚಕರು ರಾಯಚೂರಿನ ವ್ಯಕ್ತಿಯೋರ್ವರಿಗೆ ಬರೋಬ್ಬರಿ 59 ಲಕ್ಷ ರೂ. ಹಣವನ್ನ ಪಂಗನಾಮಮ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಹೆಚ್ಚು ಹಣ ಮಾಡುವ ದಾರಿ ಹುಡುಕೋಕೆ ಹೋದ ವ್ಯಕ್ತಿಯೀಗ ಕೈಯಲ್ಲಿದ್ದ ದುಡ್ಡನ್ನೂ ಕಳೆದುಕೊಂಡಿದ್ದು, ನ್ಯಾಯ ಕೊಡಿಸಿ ಎಂದು ಪೊಲೀಸ್​ ಠಾಣೆಯ ಮೆಟ್ಟಿಲು ಏರಿದ್ದಾರೆ.

ರಾಯಚೂರಿನ ಶರಣಬಸವ ಎನ್ನುವವರು ಆನ್​​ಲೈನ್​ ಟ್ರೇಡಿಂಗ್​​ನಲ್ಲಿ ಆಸಕ್ತಿ ಹೊಂದಿದ್ದು, ಹೇಗೆಲ್ಲ ಹಣ ಹೂಡಿಕೆ ಮಾಡಿದರೆ ಹೆಚ್ಚು ಹಣ ಸಿಗುತ್ತೆ ಎಂಬ ವಿಡಿಯೋವನ್ನು ಫೇಸ್​​ಬುಕ್​ನಲ್ಲಿ ನೋಡುತ್ತಿದ್ದರು. ಇದೇ ವೇಳೆ ಸೈಬರ್ ವಂಚಕರಿಂದ ಶರಣಬಸವ ಅವರ ವಾಟ್ಸ್ಯಾಪ್​​ಗೆ ಒಂದು ಮೆಸೆಜ್ ಬಂದಿದೆ. ಆ ಲಿಂಕ್​​ನ ಇವರು ಓಪನ್​​ ಮಾಡಿದ್ದು, ಬಳಿಕ ಶರಣಬಸವ ಅವರಿಗೆ ಅಪರಿಚಿತರಿಂದ ವಾಟ್ಸ್ಯಾಪ್​ ಕರೆ ಬಂದಿದೆ. ಆರೋಪಿಗಳು Paytm Money ಕಂಪೆನಿಯ ಟ್ರೇಡಿಂಗ್​​ನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಸಿಗುವ ಆಮಿಷ ಒಡ್ಡಿದ್ದಾರೆ. ಅವರ ಮಾತು ನಂಬಿದ್ದ ಶರಣಬಸವ, ಮೊದಲು 500 ರೂ. ಹಣ ವರ್ಗಾಯಿಸಿದ್ದರು. ಬಳಿಕ ಹೆಚ್ಚಿನ ಹಣ ಹಾಕುತ್ತಾ ಹೋಗಿದ್ದು, ಅಧಿಕ ಲಾಭಾಂಶವೂ ಸಿಕ್ಕಿದೆ. ಹೀಗಾಗಿ ದೊಡ್ಡ ಮೊತ್ತದ ಹಣವನ್ನು ಶರಣಬಸವ ಹೂಡಿಕೆ ಮಾಡಲು ಶುರುಮಾಡಿದ್ದಾರೆ. ಅಲ್ಲಿಂದ ಆರೋಪಿಗಳ ನವರಂಗಿ ಆಟ ಆರಂಭವಾಗಿದೆ.

ಇದನ್ನೂ ಓದಿ: ಫೋನ್ ಪೇ ಮೂಲಕ ಪರಿಚಯವಾಗಿ ಲವ್ವಿ ಡವ್ವಿ, ಗರ್ಭಿಣಿಯಾದ 9ನೇ ತರಗತಿ ವಿದ್ಯಾರ್ಥಿನಿ

ಒಟ್ಟು 59 ಲಕ್ಷ ರೂ. ಹಣವನ್ನು ಶರಣಬಸವ ಅವರು ವಂಚಕರ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಲಾಭಾಂಶವೂ ಬರುತ್ತಿಲ್ಲ, ಅಸಲೂ ಸಿಗುತ್ತಿಲ್ಲ ಎಂಬ ಸ್ಥಿತಿ ಎದುರಾದಾಗ ತಮಗೆ ಕರೆ ಮಾಡಿದ್ದ ನಂಬರ್​​ನ ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಈ ವೇಳೆ ವಂಚಕರು ಸಂಪರ್ಕಕ್ಕೆ ಸಿಗದ ಹಿನ್ನಲೆ ತಾವು ಮೋಸ ಹೋಗಿರೋದು ಶರಣಬಸವ ಅವರಿಗೆ ಅರಿವಾಗಿದೆ. ಹೀಗಾಗಿ ಘಟನೆ ಸಂಬಂಧ ರಾಯಚೂರಿನ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇಂತಹ ವಂಚನೆ ಪ್ರಕರಣಗಳು ರಾಯಚೂರಿನಲ್ಲಿ ಮೇಲಿಂದ ಮೇಲೆ ಕೇಳಿಬರುತ್ತಿವೆ. 2021ರಲ್ಲಿ ಅರ್ಚಕ ಲಕ್ಷ್ಮೀಕಾಂತ್ ಎಂಬವರು ಕೂಡ ಶರಣಬಸವ ಅವರ ಮಾದರಿಯಲ್ಲೇ ಆನ್​ಲೈನ್​ ಟ್ರೇಡಿಂಗ್​ ಎಂದು ಹಣ ಹೂಡಿಕೆ ಮಾಡಲು ಹೋಗಿ 58 ಲಕ್ಷ ರೂ. ಕಳೆದುಕೊಂಡಿದ್ದರು. ಪ್ರಕರಣ ಬೆನ್ನತ್ತಿದ್ದ ಪೊಲೀಸರು ಆರೋಪಿಯನ್ನ ತಮಿಳುನಾಡಿದ ಬಥರುಸ್ಮಾನ್ ಎಂದು ಪತ್ತೆ ಮಾಡಿದ್ದರು. ಆದರೆ, ಆತ ಈಗಾಗಲೇ ಸತ್ತಿದ್ದಾನೆ ಎನ್ನುವ ವಿಚಾರ ತನಿಖೆ ವೇಳೆ ಗೊತ್ತಾಗಿತ್ತು. ಪ್ರಕರಣ ಸಂಬಂಧ ಆರೋಪಿ ಖಾತೆಗಳಿಗೆ ಹಣ ಹೋಗಿರೊ ದಾಖಲೆಗಳ ಆಧಾರದಲ್ಲಿ ಈಗಾಗಲೇ 18 ಲಕ್ಷ ರೂ.ಗಳನ್ನ ಪೊಲೀಸರು ರಿಕವರಿ ಮಾಡಿದ್ದಾರೆ. ದುರಂತ ಅಂದರೆ ವಿದ್ಯಾವಂತರೆ ಹೆಚ್ಚಾಗಿ ಆನ್​ಲೈನ್​ ವಂಚನೆಗೆ ಒಳಗಾಗುತ್ತಿದ್ದು, ಈ ಬಗ್ಗೆ ಎಚ್ಚರದಿಂದ ಇರುವಂತೆ ಪೊಲೀಸರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:31 am, Sun, 16 November 25

ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ