ಅಸಭ್ಯವಾಗಿ ಮೆಸೇಜ್ ಮಾಡಿ ಮಂಚಕ್ಕೆ ಕರೆದ ಶಿಕ್ಷಕನಿಗೆ ಧರ್ಮದೇಟು ನೀಡಿ ಸಭ್ಯತೆಯ ಪಾಠ ಕಲಿಸಿದ ಜನ, ವಿಡಿಯೋ ವೈರಲ್

| Updated By: ಆಯೇಷಾ ಬಾನು

Updated on: Aug 13, 2024 | 9:56 AM

ತನ್ನ ಶಾಲೆಯ ಅತಿಥಿ ಶಿಕ್ಷಕಿಗೆ ಅಸಹ್ಯವಾಗಿ ಮೆಸೇಜ್ ಮಾಡಿ, ಮಂಚಕ್ಕೆ ಕರೆದ ಹಿನ್ನೆಲೆ ಶಿಕ್ಷಕಿಯ ಸಂಬಂಧಿಕರು ಶಿಕ್ಷಕನಿಗೆ ಬಟ್ಟೆ ಹರಿದು ಹೋಗುವಂತೆ ಥಳಿಸಿ ಕಾಲಿಗೆ ಬೀಳಿಸಿ ಕ್ಷಮೆ ಕೇಳುವಂತೆ ಮಾಡಿದ್ದಾರೆ. ಶಿಕ್ಷಕ ಶಿಕ್ಷಕಿ ಕಾಲಿಗೆ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಸದ್ಯ ಶಿಕ್ಷಕನ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.

ಅಸಭ್ಯವಾಗಿ ಮೆಸೇಜ್ ಮಾಡಿ ಮಂಚಕ್ಕೆ ಕರೆದ ಶಿಕ್ಷಕನಿಗೆ ಧರ್ಮದೇಟು ನೀಡಿ ಸಭ್ಯತೆಯ ಪಾಠ ಕಲಿಸಿದ ಜನ, ವಿಡಿಯೋ ವೈರಲ್
ಅಸಭ್ಯವಾಗಿ ಮೆಸೇಜ್ ಮಾಡಿ ಮಂಚಕ್ಕೆ ಕರೆದ ಶಿಕ್ಷಕನಿಗೆ ಧರ್ಮದೇಟು
Follow us on

ರಾಯಚೂರು, ಆಗಸ್ಟ್​.13: ಶಾಲಾ ಅತಿಥಿ ಶಿಕ್ಷಕಿಗೆ (Guest Faculty) ಸಹ ಶಿಕ್ಷಕನಿಂದ (Teacher) ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದ್ದು ಶಿಕ್ಷಕಿ ಸಂಬಂಧಿಕರು ಸಹ ಶಿಕ್ಷಕನ ಮೈ ಮೇಲಿದ್ದ ಬಟ್ಟೆ ಹರಿಯುವಂತೆ ಧರ್ಮದೇಟು ಕೊಟ್ಟು ಕ್ಷಮೆ ಕೇಳುವಂತೆ ಮಾಡಿದ ಘಟನೆ ರಾಯಚೂರಿನಲ್ಲಿ (Raichur) ನಡೆದಿದೆ. ಜಿಲ್ಲೆಯ ಹೊರವಲಯದಲ್ಲಿರುವ ಆದರ್ಶ ಸರ್ಕಾರಿ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಮೆಹಬೂಬ್ ಅಲಿ ಎಂಬುವವರಿಗೆ ಹಿಗ್ಗಾಮುಗ್ಗ ಥಳಿಸಿದ್ದು ಶಿಕ್ಷಕಿಯ ಕಾಲಿಗೆ ಬೀಳಿಸಿ ಕ್ಷಮೆ ಕೇಳಿಸಲಾಗಿದೆ.

ಸಹ ಶಿಕ್ಷಕ ಮೆಹಬೂಬ್ ಅಲಿ ಅವರು ತಮ್ಮದೇ ಶಾಲೆಯ ಅತಿಥಿ ಶಿಕ್ಷಕಿಗೆ ಅಸಹ್ಯವಾಗಿ ಮೆಸೇಜ್ ಮಾಡಿ, ಮಂಚಕ್ಕೆ ಕರೆದಿದ್ದರು. ಈ ಹಿನ್ನೆಲೆ ನಿನ್ನೆ ಶಾಲೆ ಬಳಿ ಬಂದಿದ್ದ ಶಿಕ್ಷಕಿ ಸಂಬಂಧಿಕರು ಮೆಹಬೂಬ್ ಅಲಿ ಮೈ ಮೇಲಿದ್ದ ಬಟ್ಟೆ ಹರಿಯುವಂತೆ ಧರ್ಮದೇಟು ನೀಡಿ ಸಭ್ಯತೆಯ ಪಾಠ ಕಳಿಸಿದ್ದಾರೆ. ಸದ್ಯ ಮೆಹಬೂಬ್ ಅಲಿ ಶಿಕ್ಷಕಿಯ ಕಾಲಿಗೆ ಬಿದ್ದು ಕ್ಷಮೆಯಾಚನೆ ಮಾಡಿದ್ದಾರೆ. ಕೊನೆಗೆ ತಪ್ಪೊಪ್ಪಿಗೆ ಪತ್ರ ಬರೆದು ಕ್ಷಮೆ ಕೇಳಿದ್ದಾರೆ. ಶಿಕ್ಷಕ ಕ್ಷಮೆಯಾಚಿಸಿದ್ದರಿಂದ ಪೊಲೀಸರಿಗೆ ದೂರು ನೀಡದೇ ಶಿಕ್ಷಕಿ ಸುಮ್ಮನಾಗಿದ್ದಾರೆ. ಇದೀಗ ಶಿಕ್ಷಕ, ಶಿಕ್ಷಕಿ ಕಾಲಿಗೆ ಬಿದ್ದು ಕ್ಷಮೆ ಕೇಳುವ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ, ಆಕೆಯ ಕಣ್ಣಲ್ಲಿ ರಕ್ತ ಬಂದಿದ್ದೇಕೆ? ಅಟಾಪ್ಸಿ ವರದಿಯಲ್ಲೇನಿದೆ?

ಜಮೀನಿನ ವಿಚಾರಕ್ಕೆ 2ಗುಂಪಿನ ನಡುವೆ ಮಾರಾಮಾರಿ

ಜಮೀನಿನ ವಿಚಾರಕ್ಕೆ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮುಕ್ತನಾಥೇಶ್ವರ ದೇಗುಲದ ಬಳಿ ಘಟನೆ ನಡೆದಿದ್ದು, 30 ಗುಂಟೆ ಜಮೀನಿನ ವಿಷ್ಯವಾಗಿ ಪರಸ್ಪರ ಗಲಾಟೆ ನಡೆದಿತ್ತು. ಅದನ್ನ ಬಿಡಿಸಲು ಬಂದ KRS ಪಕ್ಷದ ಕುಮಾರ್ ಮೇಲೆ ಎಸ್.ಮಹೇಶ್, ಹನುಮಯ್ಯ, ಅಜಯ್ ಹಲ್ಲೆ ಮಾಡಿದ್ದಾರೆ. ಜಾಗ ನಮ್ಮದೆಂದು ಕುಮಾರ್ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ.

ಊಟದ ವಿಚಾರಕ್ಕೆ ಬೋರ್​​ವೆಲ್ ಲಾರಿ ಚಾಲಕ ಕೊಲೆ

ಊಟದ ವಿಚಾರಕ್ಕೆ ಬೋರ್​​ವೆಲ್ ಲಾರಿ ಚಾಲಕ, ಆಪರೇಟರ್​​​​​ನನ್ನು ಕೊಲೆ ಮಾಡಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ AEPS ಲೇಔಟ್​ನಲ್ಲಿ ಘಟನೆ ನಡೆದಿದ್ದು, ತಮಿಳುನಾಡಿನ ತಿರುಚ್ಚಿಯ ಸುರೇಶ್ ಕೊಲೆ ದುರ್ದೈವಿ. ಈತ ನಿನ್ನೆ ಬೋರ್​​ವೆಲ್ ಕೊರೆಯಲು AEPS ಲೇಔಟ್​ಗೆ ಬಂದಿದ್ದ. ಜತೆಗೆ ಉತ್ತರ ಭಾರತದ ಐದಾರು ಕಾರ್ಮಿಕರನ್ನ ಕರೆತಂದಿದ್ದ. ಸುರೇಶ್ ಸರಿಯಾಗಿ ಊಟ ಕೊಡಿಸುವುದಿಲ್ಲವೆಂದು ಮನಸ್ತಾಪವಿತ್ತಂತೆ. ಹಾಗಾಗಿ ಜೊತೆಗಿದ್ದವರೇ ಕೊಲೆ ಮಾಡಿರುವ ಅನುಮಾನವಿದೆ ಎಂದು ಡಿಸಿಪಿ ಸಾರಾ ಫಾತಿಮಾ ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:41 am, Tue, 13 August 24