ಮಂತ್ರಾಲಯದಲ್ಲಿ ಪುನೀತ್ ಬಂದಾಗ ತೊಟ್ಟಿಲು ಅಲುಗಾಡಿದ ವಿಡಿಯೋ ವೈರಲ್; ಪೀಠಾಧಿಪತಿಗಳಿಂದ ಸ್ಪಷ್ಟನೆ

ಯಾರೂ ಕೂಡಾ ಅನ್ಯತಾ ಭಾವಿಸವಾರದು. ಇದೊಂದು ಕಾಕತಾಳೀಯ. ಸಾವಿಗೂ ಇದಕ್ಕೂ ಸಂಬಂಧ ಇಲ್ಲ ಎಂದು ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಟಿವಿ9 ಡಿಜಿಟಲ್​ಗೆ ಮಾಹಿತಿ ನೀಡಿದ್ದಾರೆ.

ಮಂತ್ರಾಲಯದಲ್ಲಿ ಪುನೀತ್ ಬಂದಾಗ ತೊಟ್ಟಿಲು ಅಲುಗಾಡಿದ ವಿಡಿಯೋ ವೈರಲ್; ಪೀಠಾಧಿಪತಿಗಳಿಂದ ಸ್ಪಷ್ಟನೆ
ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು
Updated By: preethi shettigar

Updated on: Oct 31, 2021 | 12:21 PM

ರಾಯಚೂರು: ಮಂತ್ರಾಲಯಕ್ಕೆ ಪುನೀತ್ ರಾಜ್ ಕುಮಾರ್ ಭೇಟಿ ನೀಡಿದ ಸಂದರ್ಭದಲ್ಲಿ ತೊಟ್ಟಿಲು ಮತ್ತು ವೀಣೆ ಅಲುಗಾಡಿತ್ತು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಸಾವಿಗೂ ಇದಕ್ಕೂ ಸಂಬಂಧ ಇರುವಂತೆ ಊಹಾಪೋಹ ಹಬ್ಬಿಸಿದ್ದಾರೆ. ಈ ಬಗ್ಗೆ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಮಾತನಾಡಿದ್ದು, ಅವರ ಸಾವಿಗೂ ಇದಕ್ಕೂ ಸಂಬಂಧವಿಲ್ಲ. ಅದು ಆಕಸ್ಮಿಕವಾಗಿ ಆಗಿರುವ ಘಟನೆ ಎಂದು ಹೇಳಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರು ಮಂತ್ರಾಲಯದ ರಾಯರ ಪರಮ ಭಕ್ತರಾಗಿದ್ದರು. ಅಣ್ಣ ತಮ್ಮಂದಿರು ಬಂದು ಸಂಗೀತ ಸೇವೆ ಮಾಡುವುದಾಗಿ ಹೇಳಿದ್ದರು. ಅವರು ರಾಯರ ಅನುಗ್ರಹದಿಂದಲೇ ಜನಿಸಿದ್ದಾರೆ ಎಂದು ಅವರ ತಂದೆ ಹೇಳಿದ್ದರು. ತಮ್ಮ ನೆಚ್ಚಿನ ಗುರುಗಳಾದ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಬಂದಾಗ ಪುನೀತ್ ಹಾಡು ಹಾಡಿದ್ದರು. ಯಾರೂ ಕೂಡಾ ಅನ್ಯತಾ ಭಾವಿಸವಾರದು. ಇದೊಂದು ಕಾಕತಾಳೀಯ. ಸಾವಿಗೂ ಇದಕ್ಕೂ ಸಂಬಂಧ ಇಲ್ಲ ಎಂದು ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಟಿವಿ9 ಡಿಜಿಟಲ್​ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:
Puneeth Rajkumar: ಪುನೀತ್​ಗೆ ಸುದೀಪ್​ ನುಡಿ ನಮನ; ಅಂತ್ಯಕ್ರಿಯೆ ವೇಳೆ ಮಕ್ಕಳ ಬಗ್ಗೆ ಯೋಚಿಸಿ ಕಣ್ಣೀರಿಟ್ಟ ಕಿಚ್ಚ

Puneeth Rajkumar Funeral: ತಂದೆ-ತಾಯಿ ಸಮಾಧಿ ಪಕ್ಕದಲ್ಲೇ ಅಪ್ಪು ಚಿರ ನಿದ್ರೆ; ಈಡಿಗ ಸಂಪ್ರದಾಯದಂತೆ ಪುನೀತ್​ ಅಂತ್ಯಕ್ರಿಯೆ

Published On - 12:14 pm, Sun, 31 October 21