ರಾಯಚೂರು: ಕಲುಷಿತ ನೀರು ಕುಡಿದು ಐದು ಜನರ ಸಾವು; ನಗರಸಭೆ ವಿರುದ್ಧ ಹಿಡಿ ಶಾಪ ಹಾಕುತ್ತಿರುವ ಜನರು

| Updated By: ವಿವೇಕ ಬಿರಾದಾರ

Updated on: Jun 10, 2022 | 3:44 PM

ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು 48 ವರ್ಷದ ವಾರ್ಡ್ ನಂಬರ್ 13 ರ ಯರಗೆರಾ ಕಾಲೋನಿ ನಿವಾಸಿ ಜನಕರಾಜ್ ಇದು (ಜೂನ್ 10) ರಂದು ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ರಾಯಚೂರು: ಕಲುಷಿತ ನೀರು ಕುಡಿದು ಐದು ಜನರ ಸಾವು; ನಗರಸಭೆ ವಿರುದ್ಧ ಹಿಡಿ ಶಾಪ ಹಾಕುತ್ತಿರುವ ಜನರು
ಕಲುಷಿತ ನೀರು ಕುಡಿದು 5 ಬಲಿ
Follow us on

ರಾಯಚೂರು: ರಾಯಚೂರಿನಲ್ಲಿ (Raichur) ಕಲುಷಿತ ನೀರು (contaminated water) ಕುಡಿದು ಈಗಾಗಲೆ ನಾಲ್ಕು ಜನರು ಸಾವನ್ನಪ್ಪಿದ್ದು, ಈಗ ಮೊತ್ತೊಬ್ಬರು ಸಾವನ್ನಪ್ಪಿದ್ದಾರೆ. ಕಲುಷಿತ ನೀರು ಕುಡಿದು ಒಟ್ಟು 5 ಜನರು ಸಾವನ್ನಪ್ಪಿದ್ದಾರೆ. ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ 48 ವರ್ಷದ  ವಾರ್ಡ್ ನಂಬರ್ 13 ರ ಯರಗೆರಾ ಕಾಲೋನಿ ನಿವಾಸಿ ಜನಕರಾಜ್ ಇದು (ಜೂನ್ 10) ರಂದು ಸಾವನ್ನಪ್ಪಿದ್ದಾರೆ. ವಾಂತಿ, ಭೇದಿಯಿಂದ ಬಳಲುತ್ತಿದ್ದ ಜನಕರಾಜ ಒಂದು ವಾರದ ಹಿಂದೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗೆ ಸಾವನ್ನಪ್ಪಿದ್ದಾರೆ.  ಕಲುಷಿತ ನೀರು ಸೇವಿಸಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ಏನಿದು ಕಲುಷಿತ ಕುಡಿಯುವ ನೀರಿನ ಘಟನೆ?

ಮೇ 31ರಂದು ರಾಯಚೂರಿನ ಇಂದಿರಾ ನಗರದ ನಿವಾಸಿಗಳು ಕಲುಷಿತ ನೀರು ಕುಡಿದು ಓರ್ವ ಮಹಿಳೆ ಸಾವನ್ನಪ್ಪಿದ್ದು,  60ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು ಜಿಲ್ಲೆಯ ರಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು. ಇಂದಿರಾನಗರದ ಮಲ್ಲಮ್ಮ (40) ಮೊದಲು ಸಾವನ್ನಪ್ಪಿದ್ದರು. ಕುಡಿಯುವ ನೀರಿಗೆ ಕೆಲವಡೆ ಚರಂಡಿ ನೀರು ಸೇರುತ್ತಿರುವ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ರಾಯಚೂರು ನಗರದ ಜನತೆ ಆತಂಕ ಹೆಚ್ಚಾಗಿದೆ.

ಇದನ್ನು ಓದಿ: ಕಲುಷಿತ ನೀರು ಕುಡಿದು ಮಹಿಳೆ ಸಾವು; 60ಕ್ಕೂ ಹೆಚ್ಚು ಜನ ಅಸ್ವಸ್ಥ

ಆಸ್ಪತ್ರೆಗೆ ದಾಖಲಾದವರಲ್ಲಿ ವಾಂತಿ, ಬೇದಿಯಿಂದ ಬಳಲುತ್ತಿದ್ದಾರೆ. ಅಲ್ಲದೆ 20ಕ್ಕೂ ಹೆಚ್ಚಿನ ಪರಿಸ್ಥಿತಿ ಬಿಗಡಾಯಿಸಿದೆ. ಅವರಲ್ಲಿ ಮೂತ್ರಪಿಂಡ ಸಮಸ್ಯೆ ಎದುರಿಸುತ್ತಿರುವ ಹಲವರಿಗೆ ಡಯಾಲಿಸಿಸ್ ಮಾಡಬೇಕಿದೆ. ಕಲುಷಿತ ನೀರು ಕುಡಿದು ಚಿಕ್ಕಮಕ್ಕಳು ಹೆಚ್ಚಾಗಿ ಬಾದಿತರಾಗುತ್ತಿದ್ದಾರೆ. ಈ ಪ್ರಕರಣದಿಂದ ಈಗಾಗಲೆ ನಾಲ್ಕು ಜನರು ಸಾವನ್ನಪ್ಪಿದ್ದು (ಜೂನ್ 8) ರಂದು ​ಅಂದ್ರೂನ್ ಖಿಲ್ಲಾ ನಿವಾಸಿ ಅಬ್ದುಲ್ ಕರೀಂ(50) ಸಾವನ್ನಪ್ಪಿದ್ದರು. ಇಂದು ಮತ್ತೆ 48 ವರ್ಷದ ವರ್ಷದ  ಸಾವನ್ನಪ್ಪಿದ್ದಾರೆ. ಒಟ್ಟು ಕಲುಷಿತ ನೀರಿಗೆ ಐದು ಜನರು ಸಾವನ್ನಪ್ಪಿದ್ದಾರೆ.

ಇದನ್ನು ಓದಿ: ರಾಯಚೂರಿನಲ್ಲಿ ಕಲುಷಿತ ನೀರು ದುರಂತ: ಸಂತ್ರಸ್ತರಲ್ಲಿ ಮೂತ್ರಪಿಂಡ ಸಮಸ್ಯೆ ಉಲ್ಬಣ, ಮೃತರಿಗೆ ಪರಿಹಾರ ಘೋಷಿಸಿದ ಸಿಎಂ

ಕುಡಿಯಲು ಹೊಲಸು ನೀರು ಬಿಡುತ್ತಾರೆ. ಎರಡು ದಿನ ಆದ್ರೆ ಹುಳುಗಳು ಆಗ್ತವೆ. ಹುಡುಗರು,ದೊಡ್ಡೋರಿಗೆ ಇದೇ ರೀತಿ ಸಮಸ್ಯೆ ಆಗ್ತಿದೆ. ವಾಂತಿಬೇಧಿ ಹೆಚ್ಚಾದ ಕಾರಣ ಆಸ್ಪತ್ರೆಗೆ ಅಡ್ಮಿಟ್‌ ಆಗಿದ್ದಿವಿ. ಫುಲ್ ಗಲೀಜ್ ನೀರು ಬರುತ್ತವೆ. ಇವತ್ತಿನ ನೀರು ನಾಳೆ‌ ನೋಡಿದ್ರೆ ಹುಳು ಆಡ್ತಿವೆ. ನೀರು ಕುಡಿದ್ರೆ ಒಳ್ಳೆಯದ್ದು ಅಂತ ವೈದ್ಯರು ಹೇಳ್ತಾರೆ.  ಆದ್ರೆ ನಮ್ಮಲ್ಲಿ ಹೊಸಲು ನೀರು ಬರುತ್ತೆ. ಅದನ್ನು ನೋಡಿದರೆ ಭಯ ಆಗುತ್ತೆ ಎಂದು ಇಂದಿರಾನಗರ ನಿವಾಸಿ ಜಮುನಾ ನಗರಸಭೆ ವಿರುದ್ಧ ಕಿಡಿಕಾರಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 3:43 pm, Fri, 10 June 22