ಕಲುಷಿತ ನೀರು ಕುಡಿದು ಮಹಿಳೆ ಸಾವು; 60ಕ್ಕೂ ಹೆಚ್ಚು ಜನ ಅಸ್ವಸ್ಥ

ಕಲುಷಿತ ನೀರು ಕುಡಿದು ಓರ್ವ ಮಹಿಳೆ ಸಾವನ್ನಪ್ಪಿದ್ದು,  60ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ರಾಯಚೂರು ನಗರದ ಇಂದಿರಾನಗರದಲ್ಲಿ ನಡೆದಿದೆ.

ಕಲುಷಿತ ನೀರು ಕುಡಿದು ಮಹಿಳೆ ಸಾವು; 60ಕ್ಕೂ ಹೆಚ್ಚು ಜನ ಅಸ್ವಸ್ಥ
ಕಲುಷಿತ ನೀರು ಕುಡಿದು ಅಸ್ವಸ್ತಗೊಂಡ ಮಗು
TV9kannada Web Team

| Edited By: Vivek Biradar

May 31, 2022 | 1:34 PM

ರಾಯಚೂರು: ಕಲುಷಿತ ನೀರು ಕುಡಿದು ಓರ್ವ ಮಹಿಳೆ ಸಾವನ್ನಪ್ಪಿದ್ದು,  60ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ರಾಯಚೂರು (Raichur) ನಗರದ ಇಂದಿರಾನಗರದಲ್ಲಿ (Indiragandhi Nagar) ನಡೆದಿದೆ. ರಾಯಚೂರಿನ ಇಂದಿರಾನಗರದಲ್ಲಿ ಮಲ್ಲಮ್ಮ(40) ಮೃತ ದುರ್ದೈವಿ. ರಾಯಚೂರು ನಗರಸಭೆ ಸರಬರಾಜು ಮಾಡಿದ್ದ ನೀರು ಕುಡಿದು ಸಾವನ್ನಪ್ಪಿದ್ದಾರೆ. ಅಸ್ವಸ್ಥಗೊಂಡ 60ಕ್ಕೂ ಹೆಚ್ಚು ಜನರಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವೆಡೆ ಕುಡಿಯುವ ನೀರಿಗೆ ಚರಂಡಿ ನೀರು ಸೇರುತ್ತಿರುವ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ರಾಯಚೂರು ನಗರದ ಜನತೆ ಆತಂಕದಲ್ಲಿದ್ದಾರೆ.

ನಿರ್ಜಲೀಕರಣದಿಂದ ಖಾಸಗಿ ಆಸ್ಪತ್ರೆಗಳಲ್ಲೂ ಜನ ದಾಖಲಾಗುತ್ತಿದ್ದಾರೆ. ನಿರ್ಜಲೀಕರಣ ಚಿಕ್ಕಮಕ್ಕಳಿಗೆ ಹೆಚ್ಚು ಬಾಧಿಸುತ್ತಿದೆ. ಶುದ್ದೀಕರಣ ಮಾಡದೆ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಎಲ್ಲರಿಗೂ ಹೇಳಿದ್ರೂ, ಯಾರೂ ತಲೆ ಕೆಡಿಸಿಕೊಳ್ತಿಲ್ಲ.

ಕುಡಿಯಲು ಹೊಲಸು ನೀರು ಬಿಡುತ್ತಾರೆ. ಎರಡು ದಿನ ಆದ್ರೆ ಹುಳುಗಳು ಆಗ್ತವೆ. ಹುಡುಗರು,ದೊಡ್ಡೋರಿಗೆ ಇದೇ ರೀತಿ ಸಮಸ್ಯೆ ಆಗ್ತಿದೆ. ವಾಂತಿಬೇಧಿ ಹೆಚ್ಚಾದ ಕಾರಣ ಆಸ್ಪತ್ರೆಗೆ ಅಡ್ಮಿಟ್‌ ಆಗಿದ್ದಿವಿ. ಫುಲ್ ಗಲೀಜ್ ನೀರು ಬರುತ್ತವೆ. ಇವತ್ತಿನ ನೀರು ನಾಳೆ‌ ನೋಡಿದ್ರೆ ಹುಳು ಆಡ್ತಿವೆ. ನೀರು ಕುಡಿದ್ರೆ ಒಳ್ಳೆಯದ್ದು ಅಂತ ವೈದ್ಯರು ಹೇಳ್ತಾರೆ.  ಆದ್ರೆ ನಮ್ಮಲ್ಲಿ ಹೊಸಲು ನೀರು ಬರುತ್ತೆ. ಅದನ್ನು ನೋಡಿದರೆ ಭಯ ಆಗುತ್ತೆ ಎಂದು ಇಂದಿರಾನಗರ ನಿವಾಸಿ ಜಮುನಾ ನಗರಸಭೆ ವಿರುದ್ಧ ಕಿಡಿಕಾರಿದ್ದಾರೆ. ಇದನ್ನು ಓದಿ: ತೈವಾನ್​ ಮೇಲೆ ಚೀನಾದ 30 ಯುದ್ಧ ವಿಮಾನಗಳ ಹಾರಾಟ, ಮತ್ತೊಂದು ಸಂಘರ್ಷದ ಭೀತಿಯಲ್ಲಿ ಜಗತ್ತು

ರಾಯಚೂರು: ನದಿ ದಾಟಲು ಸೇತುವೆ ಇಲ್ಲದೆ 5 ಹಳ್ಳಿಗಳ ರೈತರ ಸ್ಥಿತಿ ಅಯೋಮಯವಾಗಿದೆ. ಕರ್ನಾಟಕ ಮತ್ತುತೆಲಂಗಾಣದ ಗಡಿಯಲ್ಲಿರೊ ರಾಯಚೂರು ತಾಲ್ಲೂಕಿನ ಕುರುವಕುಲ,ಕುರುವಕುರ್ದಾ,ನಾರದ ಗಡ್ಡೆ ಗ್ರಾಮದ ಜನರು ನದಿ ದಾಟಲು ಪರದಾಡುವಂತಾಗಿದೆ. ಈ ಗ್ರಾಮಗಳು ನಡುಗಡ್ಡೆಯಾಗಿದ್ದು, ಗಡ್ಡೆಯಿಂದ ನಗರದತ್ತ ಸಾಗಬೇಕಾದರೆ ತೆಪ್ಪದ ಮೂಲಕವೇ ಸಾಗಬೇಕಾಗುತ್ತದೆ. ಇದರಿಂದ ಮಳೆಗಾಲ ಮತ್ತು ನದಿಯ ಹರಿವು ಜೋರಾಗಿದ್ದಾರೆ ಸಾಷ್ಟು ತೊಂದರೆಯಾಗುತ್ತಿದೆ.

ರೈತರು ಬೆಳೆದ ಬೆಳಗಳನ್ನು ರಾಶಿ ಮಾಡಿದ ನಂತರ ಪಟ್ಟಣಕ್ಕೆ ಸಾಗಿಸಲು ತೆಪ್ಪಗಳ ಮೂಲಕವೇ ಸಾಗಿಸೊ ಅನಿವಾರ್ಯತೆ ಉಂಟಾಗಿದೆ. ರಾಶಿಯನ್ನು ಸಾಗಾಟ ಮಾಡಲು ಸಾರಿಗೆ ವೆಚ್ಚಕ್ಕಿಂತ ಮೂರು ಪಟ್ಟು ಹೆಚ್ಚು ಹಣ ಕೊಟ್ಟು ಸಾಗಿಸಬೇಕಾಗಿದೆ. ಸುಮಾರು 700 ಕ್ಕು ಅಧಿಕ ಎಕರೆಗಳಲ್ಲಿ ರೈತರು ಕೃಷಿ ಮಾಡಿದ್ದಾರೆ. ನಡುಗಡ್ಡೆ ಪ್ರದೇಶಲ್ಲಿ  200 ಕ್ಕು ಹೆಚ್ಚು ರೈತರು ಭತ್ತ,ಜೋಳ ಸೇರಿ ಇತರೆ ಬೇಸಿಗೆ ಬೆಳೆ ಬೆಳದು ಕಟಾವು ಮಾಡಿ ರೈತರು ರಾಶಿ ಮಾಡಿದ್ದಾರೆ. ಪ್ರತಿಚೀಲ ಸಾಗಾಟಕ್ಕೆ ಸುಮಾರು 100-150 ಖರ್ಚು ಮಾಡಬೇಕು. ಸಾಮಾನ್ಯ ಸಾರಿಗೆಯಲ್ಲಿ ಒಂದು ಚೀಲ ಸಾಗಾಟಕ್ಕೆ ಬರೀ 50 ರೂ ಖರ್ಚು ತಗಲುರತ್ತದೆ. ಜಮೀನಿನಿಂದ ನದಿ ದಡದ ವರೆಗೂ ಟ್ರಾಕ್ಟರ್ ಮೂಲಕ ಲೋಡ್ ಸಾಗಿಸಲಾಗುತ್ತದೆ. ಅಲ್ಲಿಂದ ತೆಪ್ಪಗಳ ಮೂಲಕ ಮತ್ತೊಂದು ಬದಿಗೆ ಸಾಗಾಟ ಮಾಡಲಾಗುತ್ತದೆ. ಅಲ್ಲಿಂದ ಮತ್ತೇ ಬೇರೆ ಟ್ರಾಕ್ಟರ್ ಮೂಲಕ ನಗರಕ್ಕೆ ರೈತರು ತಲುಪಿಸುತ್ತಾರೆ. ಹೀಗೆ ನಾಲ್ಕು ಶಿಫ್ಟ್ ಗಳ ಮೂಲಕ ಬೆಳೆ ರಾಶಿ ಸಾಗಾಟ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಸಾಮಾನ್ಯ ಸಾರಿಗೆಗಿಂತ ಮೂರು ಪಟ್ಟು ಹೆಚ್ಚು ಖರ್ಚು ತಗಲುತ್ತಿದೆ.

ಇದನ್ನು ಓದಿ: ಬೆಂಗಳೂರಿನಲ್ಲಿ ಸ್ನೇಹಿತನಿಂದ ಸ್ನೇಹಿತನ ಮೇಲೆಯೇ ಆ್ಯಸಿಡ್ ದಾಳಿ! ಮೈಸೂರಿನಲ್ಲಿ ಆರೋಪಿ ಬಂಧನ

ಬ್ರಿಡ್ಜ್ ನಿರ್ಮಾಣದ ಕುರಿತು 1972 ರಲ್ಲೇ ಒಪ್ಪಂದ ಆಗಿತ್ತು. ಆಗ ಜಮೀನು ಸ್ವಾಧೀನಪಡಿಸೊ ಪ್ರಕ್ರಿಯೆ ಸರ್ಕಾರ ನಡೆಸಿತ್ತು. ನೀರಾವರಿ ಭೂಮಿಗೆ ಅತೀ ಕಡಿಮೆ ಬೆಲೆ ಕೊಟ್ಟಿದ್ದರು ಎಂದು ರೈತರು ಆರೋಪಿಸಿದ್ದಾರೆ. ಈ ಮಧ್ಯೆ ಇದೇ ಜಮೀನು ನಂಬಿಕೊಂಡಿರೊ ನೂರಾರು ಕುಟುಂಬಗಳು ಈ ವರೆಗೆ ಸಬ್ಸಿಡಿ,ಕ್ರಾಪ್ ಲೋನ್ ಗಳಿಲ್ಲದೇ ಪರದಾಡುತ್ತಿದ್ದಾರೆ. ನಮಗೆ ರೈತರಿಗೆ ಸಬ್ಸಿಡಿ ಇಲ್ಲ..ಕ್ರಾಪ್ ಲೋನ್ ಕೊಡುವುದಿಲ್ಲ. “ಆಂದ್ರ,ಕರ್ನಾಟಕ ಸರ್ಕಾರ ಎರಡು ನಮ್ಮನ್ನ ಕೈಬಿಡಲಿ..” “ಐದು ಹಳ್ಳಿ ಜನರೇ ಏನೋ ಮಾಡಿ ಬದುಕ್ತಿವಿ..”ಅಂತ ರೈತರ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada