ಪ್ರೀತಿಸಿ ಮಗು ಕರುಣಿಸಿ ಮದುವೆಯಾದ ಯುವಕ: ಮಗು ಹುಟ್ಟುತ್ತಲೇ ಪತ್ನಿ, ಮಗು ಬಿಟ್ಟು ಬೆಂಗಳೂರಿನಿಂದ ಕಾಲ್ಕಿತ್ತ ಪಾಪಿ
2 ಎಕರೆ ಜಮೀನು, ಒಂದು ಸೈಟ್, 5 ತೊಲೆ ಬಂಗಾರ, 5 ಲಕ್ಷ ನಗದು ತರುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಜಾತಿ ನಿಂದನೆ ಮಾಡಿದ್ದು, ಹಲ್ಲೆ ಹಿನ್ನೆಲೆ ಸದ್ಯ ಸಿಂಧನೂರು ತಾಲ್ಲೂಕು ಆಸ್ಪತ್ರೆಯಲ್ಲಿ ಸಂತ್ರಸ್ತೆಗೆ ಚಿಕಿತ್ಸೆ ನೀಡಲಾಗಿದೆ.
ರಾಯಚೂರು: ಪ್ರೀತಿಸಿ ಸುತ್ತಾಡಿ ಮದುವೆಯಾಗಿ ಮಗು ಹುಟ್ಟುತ್ತಲೇ ಪತ್ನಿ, ಮಗು ಬಿಟ್ಟು ಬೆಂಗಳೂರಿನಿಂದ ಪಾಪಿ ಪತಿ ಕಾಲ್ಕಿತ್ತಿರುವಂತಹ ಘಟನೆ ರಾಯಚೂರುನಲ್ಲಿ ನಡೆದಿದೆ. ಗಂಡನನ್ನ ಅರಸಿ ಚಿಕ್ಕ ಮಗು ಜೊತೆ ಬೆಂಗಳೂರಿನಿಂದ ರಾಯಚೂರಿಗೆ ಪತ್ನಿ ಬಂದಿದ್ದಾಳೆ. ಮಾನಸ ಅನ್ನೋ ಯುವತಿಗೆ ವೆಂಕನಗೌಡ ಅಲಿಯಾಸ ವೆಂಕಿ ಕೈಕೊಟ್ಟಿದ್ದಾನೆ. 2020 ರಲ್ಲಿ ಬೆಂಗಳೂರಿನ ಖಾಸಗಿ ಮಾಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಮಾನಸ ಹಾಗೂ ವೆಂಕನಗೌಡ ನಡುವೆ ಲವ್ವಿ-ಡವ್ವಿ ನಡೆದಿದೆ. ಬರ್ತಡೇ ಪಾರ್ಟಿಗೆಂದು ಕರೆದು ವೆಂಕನಗೌಡನಿಂದ ಅತ್ಯಾಚಾರ ಆರೋಪ ಮಾಡಿದ್ದು, ಬಳಿಕ ಅತ್ಯಾಚಾರದ ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡಲಾಗಿದೆ. ಕೊನೆಗೆ 2020 ರಲ್ಲಿ ಮಾನಸ ಜೊತೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದು, ಬಳಿಕ ದಂಪತಿಗಳಿಬ್ಬರು ಬೆಂಗಳೂರಿನಲ್ಲಿ ವಾಸ ಮಾಡಿದ್ದಾರೆ.
ಇದನ್ನೂ ಓದಿ: Devanuru Mahadeva: ನಾಡಿಗೆ ಕೇಡಿನ ಲಕ್ಷಣಗಳು: ಶಿಕ್ಷಣ ಸಚಿವರಿಗೆ ಮತ್ತೆ ಪತ್ರ ಬರೆದ ದೇವನೂರು ಮಹದೇವ
ಇದಾದ ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಮಾನಸ, ಕೊನೆಗೆ ಮಗು ಆಗ್ತಿದ್ದಂತೆಯೇ ವೆಂಕನಗೌಡ@ವೆಂಕಿ ಬೆಂಗಳೂರು ಬಿಟ್ಟಿದ್ದಾನೆ. ತಂದೆಗೆ ಹೃದಯಾಘಾತವಾಗಿದೆ ಅಂತ ಊರು ಸೇರಿದ್ದ ವೆಂಕನಗೌಡ, ನಂತರ ಹಲವು ಬಾರೀ ಪತಿ ಭೇಟಿಗೆ ಯತ್ನಿಸಿದರೂ ಸಾಧ್ಯವಾಗಿಲ್ಲ. ಕೊನೆಗೆ ಇದೇ ಜೂನ್ 1 ರಂದು ನ್ಯಾಯ ಕೇಳಿ ಮಾನಸ ಪತಿ ಮನೆಗೆ ತೆರಳಿದ್ದಾಳೆ. ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ನಿಡಿಗೋಳ ಗ್ರಾಮಕ್ಕೆ ಆಗಮಿಸಿದ್ದು, ಈ ವೇಳೆ ಪತಿ ವೆಂಕನಗೌಡ@ವೆಂಕಿ, ಹಾಗೂ ಕುಟುಂಬಸ್ಥರಿಂದ ಹಲ್ಲೆ ಆರೋಪ ಮಾಡಿದ್ದಾಳೆ. 2 ಎಕರೆ ಜಮೀನು, ಒಂದು ಸೈಟ್, 5 ತೊಲೆ ಬಂಗಾರ, 5 ಲಕ್ಷ ನಗದು ತರುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಜಾತಿ ನಿಂದನೆ ಮಾಡಿದ್ದು, ಹಲ್ಲೆ ಹಿನ್ನೆಲೆ ಸದ್ಯ ಸಿಂಧನೂರು ತಾಲ್ಲೂಕು ಆಸ್ಪತ್ರೆಯಲ್ಲಿ ಸಂತ್ರಸ್ತೆಗೆ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕೊಲೆ ಆರೋಪಿ ಮೇಲೆ ಪೊಲೀಸರಿಂದ ಗುಂಡಿನ ದಾಳಿ
ಶಿವಮೊಗ್ಗ: ಕೊಲೆ ಆರೋಪಿ ಮೇಲೆ ಪೊಲೀಸರಿಂದ ಗುಂಡಿನ ದಾಳಿ ಮಾಡಿರುವಂತಹ ಘಟನೆ ಜಿಲ್ಲೆಯ ಹೊರವಲಯದ ಅನುಪನಕಟ್ಟೆ ಬಳಿ ನಡೆದಿದೆ. ಬಂಧಿಸಲು ತೆರಳಿದ್ದಾಗ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಪೊಲೀಸರಿಗೆ ಚಾಕುವಿನಿಂದ ಹಲ್ಲೆಗೆ ಆರೋಪಿ ಮುಂದಾಗಿದ್ದು, ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧನ ಮಾಡಲಾಗಿದೆ. ಗಾಯಾಳು ಆರೋಪಿಗೆ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕೊಲೆ ಪ್ರಕರಣದಲ್ಲಿ ಆರೋಪಿ ಅರ್ಷದ್ ಶಿಕ್ಷೆಗೊಳಗಾಗಿದ್ದು, ಕೋರ್ಟ್ನಿಂದ ಬೇಲ್ ಪಡೆದು ಹೊರಗೆ ಬಂದಿದ್ದ.
ತಂದೆಯ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪೊಲೀಸರಿಂದ ಹಲ್ಲೆ
ಬೆಳಗಾವಿ: PSI ತಂದೆಯ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪೊಲೀಸರಿಂದ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ. ಮೇ 23ರಂದು ಕೊಣ್ಣೂರಿನಲ್ಲಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕುಲಗೋಡ ಪಿಎಸ್‌ಐ ಸಿದ್ದಪ್ಪ ವಿರುದ್ಧ ಮಗ ರಾಹುಲ್ ಆರೋಪ ಮಾಡಿದ್ದು, ಸಹೋದರ ಸಂಬಂಧಿ ಮಹಿಳೆ ಜತೆಗೆ ಅನೈತಿಕ ಸಂಬಂಧ ಆರೋಪಿಸಲಾಗಿದೆ. ಮಹಿಳೆಯ ಮನೆಗೆ ಹೋಗಿ ಪಿಎಸ್‌ಐ ಪುತ್ರ ಅವಾಜ್ ಹಾಕಿದ್ದಾನೆ. ಈ ವೇಳೆ ಘಟಪ್ರಭಾ ಠಾಣೆಯ ಪೊಲೀಸರನ್ನ ಕರೆಯಿಸಿ ಹಲ್ಲೆ ಮಾಡಲಾಗಿದೆ. ಪಿಎಸ್‌ಐ ಸಿದ್ದಪ್ಪ & ಮಹಿಳೆ ಮಾತು ಕೇಳಿ ಮೂವರು ಪೊಲೀಸರಿಂದ ರಾಹುಲ್ ಕರನಿಂಗ್ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದ ರಾಹುಲ್ ಒಂದು ವಾರ ಆಸ್ಪತ್ರೆಗೆ ದಾಖಲಾಗಿದ್ದ. ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಎಸ್‌ಪಿ ಭೇಟಿಯಾಗಿದ್ದ. ತನ್ನ ಮೇಲೆ ಆಗಿರುವ ಹಲ್ಲೆಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದು, ಮೂವರು ಕಾನ್ಸ್ಟೇಬಲ್ಗಳು, ತಂದೆ & ಮಹಿಳೆ ವಿರುದ್ಧ ದೂರು ನೀಡಿದ್ದಾನೆ. ಗೋಕಾಕ್ ಪೊಲೀಸ್ ಠಾಣೆಯಲ್ಲಿ ಮಹಿಳೆಯಿಂದ ಪ್ರತಿ ದೂರು ನೀಡಲಾಗಿದೆ.
ಮಳೆ ಸುರಿದ ಹಿನ್ನೆಲೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು
ಬಳ್ಳಾರಿ: ನಗರದಲ್ಲಿ ನಿನ್ನೆ ಸಂಜೆ ಗಾಳಿ ಸಹಿತ ಮಳೆ ಸುರಿದ ಹಿನ್ನೆಲೆ ಹಲವೆಡೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಸೋಮಶೇಖರರೆಡ್ಡಿ ಭೇಟಿ ನೀಡಿದಾರೆ. ಎಸ್.ಎನ್.ಪೇಟೆ, ಮಾರುತಿ ಕಾಲೋನಿ, ಹನುಮಾನ್ ನಗರ, ರೂಪನಗುಡಿ ರಸ್ತೆಯ ಕಾಲೋನಿಗೆ ಭೇಟಿ ನೀಡಿ, ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದನ್ನು ವೀಕ್ಷಿಸಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.