Raichur: ರಾಯಚೂರಿನಲ್ಲಿ ತಪ್ಪದ ಕಲುಷಿತ ನೀರಿನ ಸಮಸ್ಯೆ; ತುರಿಕೆಯಿಂದ ಹೈರಾಣಾಗಿರುವ ಮಕ್ಕಳು

ಅವಾಂತರವಾದರೂ ಯಾವಬ್ಬ ಅಧಿಕಾರಿಗಳು, ಜನಪ್ರತಿನಿಧಿಗಳು ರೋಗಿಗಳನ್ನ ಭೇಟಿಯಾಗಿ, ಸಮಸ್ಯೆ ಆಲಿಸಿಲ್ಲ. ಮಕ್ಕಳು, ವೃದ್ಧರು, ವಯಸ್ಕರೂ ಅಲರ್ಜಿ ಬಾಧಿಸುತ್ತಿದ್ದಾರೆ.

Raichur: ರಾಯಚೂರಿನಲ್ಲಿ ತಪ್ಪದ ಕಲುಷಿತ ನೀರಿನ ಸಮಸ್ಯೆ; ತುರಿಕೆಯಿಂದ ಹೈರಾಣಾಗಿರುವ ಮಕ್ಕಳು
ಕಲುಷಿತಗೊಂಡ ನೀರು
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jul 27, 2022 | 12:03 PM

ರಾಯಚೂರು: ಜಿಲ್ಲೆಯಲ್ಲಿ ಕಲುಷಿತ ನೀರಿನ (Contaminated Water) ಸಮಸ್ಯೆ ಇನ್ನೂ ಬಗೆಹರಿಯದಿದ್ದು, ಸಿಂಧನೂರು ತಾಲ್ಲೂಕಿಗೂ ಕಲುಷಿತ ನೀರಿನ ಸಮಸ್ಯೆ ವ್ಯಾಪಿಸಿದೆ. ಚರ್ಮದ ಸಮಸ್ಯೆ, ಅಲರ್ಜಿಗೆ ಗ್ರಾಮಸ್ಥರು ತುತ್ತಾಗುತ್ತಿದ್ದಾರೆ. ಅವಾಂತರವಾದರೂ ಯಾವಬ್ಬ ಅಧಿಕಾರಿಗಳು, ಜನಪ್ರತಿನಿಧಿಗಳು ರೋಗಿಗಳನ್ನ ಭೇಟಿಯಾಗಿ, ಸಮಸ್ಯೆ ಆಲಿಸಿಲ್ಲ. ಮಕ್ಕಳು, ವೃದ್ಧರು, ವಯಸ್ಕರೂ ಅಲರ್ಜಿ ಬಾಧಿಸುತ್ತಿದ್ದಾರೆ. ತುರಿಕೆಗೆ ಜನರು ಹೈರಾಣಾಗಿ ಹೋಗಿದ್ದಾರೆ. ಕೆರೆಯ ಕಲುಷಿತ ನೀರು ಕಡಿಯಲು ಬಳಕೆ ಮಾಡುತ್ತಿದ್ದು, ಸ್ನಾನ, ಅಡುಗೆಗೆ ಇದೇ ನೀರು ಅನಿವಾರ್ಯವಾಗಿದೆ. ತುರಿಕೆ ತಾಳಲಾರದೆ ಚಿಕ್ಕ ಮಕ್ಕಳ ಕಿರುಚಾಟ, ಗೋಳಾಡುತ್ತಿದ್ದಾರೆ. ಸದ್ಯ ಸುಮಾರು 30 ಕ್ಕೂ ಹೆಚ್ಚು ಜನರಿಗೆ ಇದೇ ಅಲರ್ಜಿ ಕಾಣಿಸಿಕೊಂಡಿದೆ. ಕಳೆದ ಎರಡು ತಿಂಗಳಿನಿಂದ ಗ್ರಾಮಸ್ಥರಿಗೆ ಅಧಿಕಾರಿಗಳು ಕಲುಷಿತ ನೀರು ಕುಡಿಸುತ್ತಿದ್ದಾರೆ. ಬಸವನ ಕ್ಯಾಂಪ್ ಬಳಿ ಕಾಲುವೆಯಲ್ಲಿ ಕಸ ಬೀಸಾಡೊ ಜನ, ದನಕರುಗಳ ಹೊಸಲು, ಊರಿನ ಕಸ-ಕಡ್ಡಿಯನನ್ನ ಇದೇ ಕಾಲುವೆಯಲ್ಲಿ ಬೀಸಾಡಲಾಗುತ್ತಿದೆ. ಅಲ್ಲಿಂದಲೇ ಕಾಲುವೆ ನೀರು ಸಂಪೂರ್ಣ ಕಲುಷಿತವಾಗಿದೆ. ಬಳಿಕ ಕೆರೆ ಸ್ಬಚ್ಛಗೊಳಸಿದೇ ತುಂಗಭದ್ರಾ ನದಿಯಿಂದ ಕಾಲುವೆ ಮೂಲಕ ನೀರು ಸಂಗ್ರಹಣೆ ಮಾಡಿದ್ದು, ಬಳಿಕ ಮತ್ತೆ ನೀರು ಕಲುಷಿತಗೊಂಡಿದೆ. ಈ ನೀರನ್ನ ಶುದ್ಧೀಕರಣ ಮಾಡದೇ ಮನೆ-ಮನೆಗೆ ಸರಬರಾಜು ಮಾಡಲಾಗುತ್ತಿದೆ.

ಈ ಕಲುಷಿತ ನೀರು ಸೇವನೆಯಿಂದ ಇಡೀ ರಾಯಚೂರೂ ಜಿಲ್ಲೆಯ ಗ್ರಾಮಸ್ಥರು ಬಾಧೆಗೊಳಗಾಗಿದ್ದು, ಮಕ್ಕಳು, ವೃದ್ಧರು, ವಯಸ್ಕರೂ ದಿನನಿತ್ಯ ಅಲರ್ಜಿಯಿಂದ ರೋಧಿಸುತ್ತಿದ್ದಾರೆ. ಕಲುಷಿತ ನೀರು ಸೇವನೆಯಿಂದ ಅನುಭವಿಸುತ್ತಿರುವ ಬಾಧೆಯ ಮಾದರಿಗಳು ಈ ಕೆಳಗಿನಂತಿವೆ.

ಇದನ್ನೂ ಓದಿ: ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಮತ್ತೆ 30ಕ್ಕೂ ಹೆಚ್ಚು ಜನರಿಗೆ ವಾಂತಿ, ಭೇದಿ ಕೇಸ್ ಸ್ಟಡಿ-1;

ರೋಗಿ: 8 ತಿಂಗಳ ಮಗು ನಾಗರಾಜ್, ಅಲರ್ಜಿಗೊಳಗಾದವರು ಹಾಗೂ ಮಗು ತಂದೆ ಈತನ 8 ತಿಂಗಳ ಮಗು ಅಲರ್ಜಿಯಿಂದ ನರಳಾಟ ಮೈ ಕೈ ಉಜ್ಜಿಕೊಂಡು ಬಾಧೆ ಪಡುತ್ತಿರೊ ಕಂದಮ್ಮ ಕಾಲು,ತಲೆ ಭಾಗಕ್ಕೆ ಅಂಟಿರೊ ಅಲರ್ಜಿ ಕಳೆದ ಜೂನ್ 26 ರಿಂದ ಚಿಕಿತ್ಸೆ ಪಡೆಯುತ್ತಿರೊ ಮಗು ಸಿಂಧನೂರು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಇನ್ನೂ ವಾಸಿಯಾಗದ ಅಲರ್ಜಿ,ಚಿಕಿತ್ಸೆ ಮುಂದುವರಿಕೆ ಮಗು ತಂದೆ ನಾಗರಾಜ್ ಗೂ ಉಲ್ಬಣಿಸಿದ್ದ ಅಲರ್ಜಿ

ಕೇಸ್ ಸ್ಟಡಿ-2; ರೋಗಿ; 7 ತಿಂಗಳ ಮಗು ರಾಘವೇಂದ್ರ, ಅಲರ್ಜಿಗೊಳಗಾದೋರು ಹಾಗೂ ಮಗು ತಂದೆ ಇವರ 7 ತಿಂಗಳ ಮಗು ಅಲರ್ಜಿಯಿಂದ ಗೋಳಾಟ ಕಾಲು,ಹೊಟ್ಟೆ ಭಾಗಕ್ಕೆ ಅಂಟಿರೊ ತುರಿಕೆ(ಅಲರ್ಜಿ) ಕಳೆದೊಂದು ತಿಂಗಳಿನಿಂದ ಸ್ಥಳೀಯ ಕ್ಲಿನಿಕ್ ನಲ್ಲಿ ಚಿಕಿತ್ಸೆ ಬಳಿಕ ಸಿಂಧನೂರು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸದ್ಯ ಈ ಮಗುವಿಗೂ ಚಿಕಿತ್ಸೆ ಮುಂದುವರಿಕೆ ಮಗು ತಂದೆ ರಾಘವೇಂದ್ರ, ತಾಯಿ ಹಾಗೂ ಹಾಗೂ ಮಗು ಅಕ್ಕಳಿಗೂ ಉಂಟಾಗಿದ್ದ ತುರಿಕೆ ರೋಗ

ಇದನ್ನೂ ಓದಿ: ರಾಯಚೂರು: ಕಲುಷಿತ ನೀರು ಕುಡಿದು ಸರಣಿ ಸಾವು ಪ್ರಕರಣ: 7ಕ್ಕೇರಿದ ಮೃತರ ಸಂಖ್ಯೆ

ಕೇಸ್ ಸ್ಟಡಿ-3; ರೋಗಿ; ಶಶಿಕುಮಾರ್(34) ಎರಡು ಮುಂಗೈ,ಹೊಟ್ಟೆ ಭಾಗಕ್ಕೆ ಸಂಪೂರ್ಣ ಅಲರ್ಜಿ,ತುರಿಕೆ ರೋಗದ ಸಮಸ್ಯೆ ಕಳೆದೊಂದು ತಿಂಗಳಿನಿಂದ ಸ್ಥಳೀಯ ಕ್ಲಿನಿಕ್​ನಲ್ಲಿ ಚಿಕಿತ್ಸೆ ಔಷಧಿ ಪಡೆದರೂ ವಾಸಿಯಾಗದ ತುರಿಕೆ,ಅಲರ್ಜಿ ಶಶಿಕುಮಾರ್ ನಿಂದ ಪತ್ನಿಗೂ ಅಂಟಿರೋ ಅಲರ್ಜಿ ಈ ಹಿನ್ನೆಲೆ ಹಾಸಿಗೆಗಳನ್ನ ಬೇರ್ಪಡಿಸಿ ವಾಸ ಸದ್ಯ ಶಶಿಕುಮಾರ್​ಗೆ ಚಿಕಿತ್ಸೆ ಮುಂದುವರಿಕೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada