ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಮತ್ತೊಂದು ಗರಿಮೆ, ದೇಶದ 10 ಟಾಪ್ ಠಾಣೆಗಳಲ್ಲಿ ಮಾನ್ವಿ ಠಾಣೆಗೆ 5ನೇ ಸ್ಥಾನ

ದೇಶದ ಟಾಪ್ 10 ಮಾದರಿ ಠಾಣೆಗಳಲ್ಲಿ ರಾಯಚೂರು ಜಿಲ್ಲೆ ಮಾನ್ವಿ ಪೊಲೀಸ್ ಠಾಣೆಗೆ‌ 5ನೇ ಸ್ಥಾನ ಸಿಕ್ಕಿದೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಮತ್ತೊಂದು ಗರಿಮೆ, ದೇಶದ 10 ಟಾಪ್ ಠಾಣೆಗಳಲ್ಲಿ ಮಾನ್ವಿ ಠಾಣೆಗೆ 5ನೇ ಸ್ಥಾನ
ಮಾನ್ವಿ ಪೊಲೀಸ್ ಠಾಣೆ
Edited By:

Updated on: Nov 21, 2021 | 9:40 AM

ರಾಯಚೂರು: ದೇಶದ 10 ಟಾಪ್ ಠಾಣೆಗಳಲ್ಲಿ ಮಾನ್ವಿ ಠಾಣೆಗೆ 5ನೇ ಸ್ಥಾನ ಸಿಕ್ಕಿದ್ದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಮತ್ತೊಂದು ಗರಿಮೆ ಹೆಚ್ಚಾಗಿದೆ. ದೇಶದ ಟಾಪ್ 10 ಮಾದರಿ ಠಾಣೆಗಳಲ್ಲಿ ರಾಯಚೂರು ಜಿಲ್ಲೆ ಮಾನ್ವಿ ಪೊಲೀಸ್ ಠಾಣೆಗೆ‌ 5ನೇ ಸ್ಥಾನ ಸಿಕ್ಕಿದೆ.

ಸಾರ್ವಜನಿಕರೊಂದಿಗೆ ಪೊಲೀಸ್ ಠಾಣೆ ಸಿಬ್ಬಂದಿ ಸಂಪರ್ಕ, ಪೊಲೀಸ್ ಠಾಣೆಯ ಕಟ್ಟಡದ‌ ಸುವ್ಯವಸ್ಥೆ, ಸಿಬ್ಬಂದಿ ಶಿಸ್ತು, ಕಾರ್ಯದಕ್ಷತೆ, ಕಡತ ವಿಲೇವಾರಿ, ಮೂಲಸೌಕರ್ಯ, ಅಪರಾಧ ತಡೆಗೆ ಕೈಗೊಂಡ ಮುಂಜಾಗ್ರತಾ ಕ್ರಮಗಳು, ಸಂಚಾರ ಸುರಕ್ಷತೆ, ಅಪಘಾತ ತಡೆಗೆ ಪೊಲೀಸರ‌ ಕಾರ್ಯ ಸೇರಿದಂತೆ ಈ ಎಲ್ಲ ಅಂಶಗಳನ್ನ ಗಣನೆಗೆ ತೆಗೆದುಕೊಂಡು ಟಾಪ್ 10 ಪಟ್ಟಿಯಲ್ಲಿ ರ್ಯಂಕಿಂಗ್ ನೀಡಲಾಗುತ್ತೆ. ಸದ್ಯ ಕೇಂದ್ರ ಸರ್ಕಾರ ಮಾನ್ವಿ ಪೊಲೀಸ್ ಠಾಣೆಯನ್ನು ಪರಿಗಣಿಸಿ  ದೇಶದ ಟಾಪ್ 10 ಮಾದರಿ ಠಾಣೆಗಳಲ್ಲಿ ರಾಯಚೂರು ಜಿಲ್ಲೆ ಮಾನ್ವಿ ಪೊಲೀಸ್ ಠಾಣೆಗೆ‌ 5ನೇ ಸ್ಥಾನ ನೀಡಿದೆ.

ಇದನ್ನೂ ಓದಿ: ಮಿಲಿಟರಿಯಲ್ಲಿ 21 ವರ್ಷ ಕೆಲಸ; ಈಗ ಸ್ಟಾರ್​ ಸಿನಿಮಾದಲ್ಲಿ ವಿಲನ್​: ಅಪರೂಪದ ಪ್ರತಿಭೆ ನಿತಿನ್​