ರೈತರ ಜೀವನಾಡಿ ಯೋಜನೆ ಕಾಮಗಾರಿಯಲ್ಲಿ ಮತ್ತೆ ಅಕ್ರಮ?
ರಾಯಚೂರು: ಕಾಂಕ್ರೀಟ್ ಕಿತ್ತು ಹೋಗಿದೆ.. ಕಲ್ಲುಗಳು ಮೇಲೆದ್ದು ಬಂದಿವೆ. ಅಡಿಗಡಿಗೂ ಬಿರುಕು ಬಿಟ್ಟಿದೆ. ಕಾಲುವೆ ಬಾಯ್ತೆರೆದು ಬಿಟ್ಟಿದೆ. ಯೆಸ್ ಇದು ಕಿತ್ತೋದ್ ಕಾಮಗಾರಿ. ದೇವರು ಕೂಡ ಮೆಚ್ಚುವಂತ ಕೆಲ್ಸ ಆಗ್ಲೇ ಇಲ್ಲ. ಕಳಪೆ ಅನ್ನೋ ಕರ್ಮಕಾಂಡ ಎಲ್ಲೆಲ್ಲೂ ರಾರಾಜಿಸ್ತಿದೆ. ಅಷ್ಟಕ್ಕೂ ಈ ಮಟ್ಟಿಗೆ ಹಾಳಾಗಿ ಹೋಗಿರೋದು ರಾಯಚೂರು ಜಿಲ್ಲೆ ನಾರಾಯಣಪುರ ಬಲದಂಡೆ ಯೋಜನೆ. ಕಳಪೆ ಕಾಮಗಾರಿ ಮಾಡಿರೋ ಕಂಪನಿಗೆ ಮತ್ತೆ ಗುತ್ತಿಗೆ! ನಾರಾಯಣಪುರ ಬಲದಂಡೆ ಕಾಲುವೆ ಯೋಜನೆ ರಾಯಚೂರು ಜಿಲ್ಲೆ ಅನ್ನದಾತರ ಜೀವನಾಡಿಯಾಗಿತ್ತು. ಇದೇ ಕಾಲುವೆ ನೀರನ್ನ […]
ರಾಯಚೂರು: ಕಾಂಕ್ರೀಟ್ ಕಿತ್ತು ಹೋಗಿದೆ.. ಕಲ್ಲುಗಳು ಮೇಲೆದ್ದು ಬಂದಿವೆ. ಅಡಿಗಡಿಗೂ ಬಿರುಕು ಬಿಟ್ಟಿದೆ. ಕಾಲುವೆ ಬಾಯ್ತೆರೆದು ಬಿಟ್ಟಿದೆ. ಯೆಸ್ ಇದು ಕಿತ್ತೋದ್ ಕಾಮಗಾರಿ. ದೇವರು ಕೂಡ ಮೆಚ್ಚುವಂತ ಕೆಲ್ಸ ಆಗ್ಲೇ ಇಲ್ಲ. ಕಳಪೆ ಅನ್ನೋ ಕರ್ಮಕಾಂಡ ಎಲ್ಲೆಲ್ಲೂ ರಾರಾಜಿಸ್ತಿದೆ. ಅಷ್ಟಕ್ಕೂ ಈ ಮಟ್ಟಿಗೆ ಹಾಳಾಗಿ ಹೋಗಿರೋದು ರಾಯಚೂರು ಜಿಲ್ಲೆ ನಾರಾಯಣಪುರ ಬಲದಂಡೆ ಯೋಜನೆ.
ಕಳಪೆ ಕಾಮಗಾರಿ ಮಾಡಿರೋ ಕಂಪನಿಗೆ ಮತ್ತೆ ಗುತ್ತಿಗೆ! ನಾರಾಯಣಪುರ ಬಲದಂಡೆ ಕಾಲುವೆ ಯೋಜನೆ ರಾಯಚೂರು ಜಿಲ್ಲೆ ಅನ್ನದಾತರ ಜೀವನಾಡಿಯಾಗಿತ್ತು. ಇದೇ ಕಾಲುವೆ ನೀರನ್ನ ನಂಬ್ಕೊಂಡು ಲಕ್ಷಾಂತರ ಜನರು ಬದುಕು ಕಟ್ಟಿಕೊಂಡಿದ್ರು. ಒಟ್ಟು 95 ಕಿ.ಮೀ. ಉದ್ದದ ಈ ಕಾಲುವೆಯಲ್ಲಿ ಸಮರ್ಪಕವಾಗಿ ನೀರು ಹರಿಸದ ಕಾರಣ ಸಾಕಷ್ಟು ರೈತರ ಜಮೀನುಗಳಿಗೆ ನೀರು ತಲುಪ್ತಿಲ್ಲ. ಹೀಗಾಗಿ 30 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಈ ಕಾಲುವೆ ಹಳ್ಳ ಹಿಡಿದಿದೆ. ಆದ್ರೀಗ ಬರೋಬ್ಬರಿ 848 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಲುವೆ ಆಧುನೀಕರಣಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಅದ್ರಲ್ಲೂ ಡಿ.ವೈ.ಉಪ್ಪಾರ ಕಂಪನಿಗೆ ಗುತ್ತಿಗೆ ಕೊಟ್ಟಿರೋದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕಳಪೆ ಕಾಮಗಾರಿಗೆ ಅನ್ನದಾತರ ಆಕ್ರೋಶ: ಇನ್ನು, ರಾಯಚೂರು ಜಿಲ್ಲೆಯಲ್ಲಿ ಡಿ.ವೈ.ಉಪ್ಪಾರ ಕಂಪನಿ ಮಾಡಿರೋ ಸಾಕಷ್ಟು ಕಾಮಗಾರಿಗಳು ಕಳಪೆಯಾಗಿವೆ. ಅಲ್ಲದೇ ದೇವದುರ್ಗ ತಾಲೂಕಿನ 9ಎ ಉಪ ಕಾಲುವೆಗೆ ಪ್ರಾಯೋಗಿಕವಾಗಿ ನೀರು ಹರಿಸಿದ್ದಾಗ ಕಾಂಕ್ರೀಟ್ ಕಿತ್ತೋಗಿತ್ತು. ಇಷ್ಟೆಲ್ಲ ಕಳಪೆ ಕಾಮಗಾರಿ ಇದೇ ಕಂಪನಿ ಮಾಡಿದ್ರು ಡಿ.ವೈ. ಕಂಪನಿಗೆ ಯೋಜನೆ ಗುತ್ತಿಗೆ ಕೊಟ್ಟಿರೋದಕ್ಕೆ ಅನ್ನದಾತರು ರೊಚ್ಚಿಗೆದ್ದಿದ್ದಾರೆ. ಸರ್ಕಾರ ಕೂಡಲೇ ಕಂಪನಿಗೆ ಕೊಟ್ಟಿರೋ ಕಂಟ್ರ್ಯಾಕ್ಟ್ ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನ ಕೇಳಿದ್ರೆ ಅವರೊಂದು ಕಥೆ ಹೇಳ್ತಿದ್ದಾರೆ.
ಒಟ್ನಲ್ಲಿ ಅನ್ನದಾತರ ಪಾಲಿಗೆ ವರವಾಗಬೇಕಿದ್ದ ಯೋಜನೆ ಹೆಸ್ರಲ್ಲಿ ಗುತ್ತಿಗೆ ಕೈಗೆತ್ತಿಕೊಂಡವರು ಕೋಟಿ ಕೋಟಿ ನುಂಗಿದ್ದಾರೆ. ಕಾಲುವೆ ಆಧುನೀಕರಣದ ಹೆಸ್ರಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆಯೋಕೆ ಹೆಜ್ಜೆ ಇಟ್ಟಿರೋರ ವಿರುದ್ಧ ರೈತರು ಸಿಡಿದೆದ್ದಿದ್ದಾರೆ.
Published On - 1:32 pm, Sat, 8 February 20